ಬ್ಲಾಗ್ ಬರೆಯುವುದು ಅಂದರೆ ನಿಮ್ಮ ಮನಸ್ಸಿನ ಆಲೋಚನೆಗಳನ್ನು ಚಿತ್ರಿಸುವುದು. ನಿಮ್ಮ ಆಲೋಚನೆಗಳನ್ನು ಚಿತ್ರಿಸಲು ನಿಮಗೆ ಬೇಕಾಗಿರುವುದು ಒಂದು ಹಾಳೆ ಹಾಗೂ ಲೇಖನಿ. ನಿಮಗೆ ಕನ್ನಡದಲ್ಲಿ ಪಾಂಡಿತ್ಯವಿಲ್ಲದಿದ್ದರು ಪರವಾಗಿಲ್ಲ. ಕನ್ನಡ ಓದಲು ಬರೆಯಲು ಬಂದರೆ ಸಾಕು.
ಇಷ್ಟು ಇದ್ದ ಮೇಲೆ ಇನ್ನೊಂದು ಕಷ್ಟವೆಂದರೆ ನೀವು ಬರೆದದ್ದನ್ನು ಬ್ಲಾಗಿನಲ್ಲಿ ದಾಖಲಿಸುವುದು. ಅದಕ್ಕೆ ನಿಮಗೆ ಕನ್ನಡದಲ್ಲಿ ಟೈಪ್ ಮಾಡಲು ಬರಬೇಕು ಅಂತೀರಾ? ಅದಕ್ಕೆ ನೀವು ಕನ್ನಡದ ಗುಂಡಿಗಳಿರುವ ಕೀಬೋರ್ಡ್ ಬೇಕಿಲ್ಲ. ನಿಮ್ಮ ಇಂಗ್ಲೀಷ್ ಕೀಬೋರ್ಡ್ ಇದ್ದರೆ ಸಾಕು.
ಇದು ನನ್ನ ಮೊದಲನೆಯ ಬರಹ ಅಂತ ಬರೆಯಲು ನೀವು ಹೀಗೆ ಟೈಪ್ ಮಾಡಿದರೆ ಸಾಕು. "idu nanna modalaneya baraha"
ಇದನ್ನು ನಾವು ಕನ್ನಡದಲ್ಲಿ ತೋರಿಸುತ್ತೇವೆ. ಇಲ್ಲಿ ಬರೆದು ಪ್ರಯತ್ನ ಮಾಡಿ ನೋಡಿ.
ಗಮನಿಸಿ: ಒಂದು ಪದವನ್ನು ಬರೆದ ಮೇಲೆ ಖಾಲಿ ಅಕ್ಷರ (Space Bar - ಸ್ಪೇಸ್ ಬಾರ್) ಟೈಪ್ ಮಾಡಿ.