ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಜನಪದ ಕ್ರೀಡೆಗಳು
ಸ್ಥಳ: ಬ್ಲಾಗ್ಸ್ನನಗೆ ತೋಚಿದ್ದು   
ಬರಹಗಾರ: ನಾಗರಾಜ್ megarajnaga7/22/2008 6:19 PM
ಜನಪದ ಕ್ರೀಡೆಗಳು ಗ್ರಾಮೀಣ ಜನರಿಂದ ಮನೋರಂಜನೆಗಾಗಿ, ದೈಹಿಕ ವ್ಯಾಯಾಮಕ್ಕಾಗಿ ರಚಿಸಲ್ಪಟ್ಟ ಆಟಗಳು. ಇವುಗಳಲ್ಲಿ ಕಂಡು ಬರುವ ಸಾಮಾನ್ಯ ಅಂಶವೆಂದರೆ ಇವು ಅತೀ ಕಡಿಮೆ ಹಾಗೂ ಸುಲಭದಲ್ಲಿ ದೊರಕುವ ಸಾಮಗ್ರಿಗಳನ್ನು ಬಳಸಿರುವುದು.

ಲಗೋರಿ
ಲಗೋರಿ !!! ಅಂತ ಕಿರುಚಿದಾಗ ಮೈ ಎಲ್ಲ ಜುಮ್ ಅನ್ನುವುದು. ನಮ್ಮ ನಾಡಿನಲ್ಲಿ ಹಲವಾರು ವರ್ಷಗಳಿಂದ ಮಕ್ಕಳಿಂದ ಹಿಡಿದು ಹಿರಿಯರ ತನಕ ಸಾಯಂಕಾಲ ಎಲ್ಲರೂ ಜೊತೆಗೂಡಿ ಆಡುತ್ತಿದ್ದ ಆಟ ಲಗೋರಿ. ಈಗ ಲಗೋರಿ ಆಡುವವರು ಅತಿ ಕಡಿಮೆ, ಗ್ರಾಮ್ಯ ಪ್ರದೇಶಗಳಲ್ಲಿ ಮಾತ್ರ ಸಿಗುವವರು.
ಈ ಆಟವನ್ನು ಇಬ್ಬರಿಗಿಂತ ಹೆಚ್ಚಾಗಿ ಎಷ್ಟು ಜನರು ಕೂಡ ಆಡಬಹುದು. ಅವರನ್ನು ಎರಡು ತಂಡಗಳಲ್ಲಿ ವಿಭಜಿಸಿವವರು. ಮೊದಲನೆಯ ತಂಡದವರು ೭ ರಿಂದ ೯ ಕಲ್ಲುಗಳನ್ನು ಒಂದರ ಮೇಲೊಂದು ಜೋಡಿಸುವರು. ಹಾಗೆ ಜೋಡಿಸಿದ ಕಲ್ಲುಗಳಿಗೆ ಸ್ವಲ್ಪದೂರದಿಂದ ಮತ್ತೊಂದು ತಂಡದವರು ಒಂದು ಚೆಂಡನ್ನು ಎಸೆಯುವರು. ಆ ಚೆಂಡು ತಾಗಿ ಕಲ್ಲುಗಳು ಚದುರಿದಾಗ, ಮೊದಲನೆಯ ತಂಡದವರು ಅದನ್ನು ಮತ್ತೆ ಯಥಾಸ್ಥಿತಿಗೆ ತರಲು ಪ್ರಯತ್ನಿಸುವರು. ಅದನ್ನು ತಡೆಯುವುದೇ ಎದುರಾಳಿ ತಂಡದ ಗುರಿ.
ಮೊದಲನೆಯ ತಂಡದವರು ಆ ಕಲ್ಲುಗಳನ್ನು ಜೋಡಿಸುವ ಪ್ರಯತ್ನದಲ್ಲಿರುವಾಗ ಎದುರಾಳಿ ತಂಡದವರು ಆ ಚೆಂಡನ್ನು ಯಾರೊಬ್ಬರಿಗೆ ತಾಗುವಂತೆ ಎಸೆದರೆ, ತಾಗಿದಾತ ಆಟದಿಂದ ಹೊರಗೆ ಹೋಗುತ್ತಾನೆ. ಹೀಗೆ ಎದುರಾಳಿಯ ಪ್ರತಿಯೊಬ್ಬರನ್ನು ಆಟದಿಂದ ಹೊರ ಕಳುಹಿಸುವುದೇ ಆಟದ ಗುರಿ. ಈ ಸಮಯದಲ್ಲಿ ಎದುರಾಳಿ ತಂಡವೇನಾದರು ಕಲ್ಲುಗಳನ್ನು ಜೋಡಿಸುವುದರಲ್ಲಿ ಯಶಸ್ವಿಯಾದಲ್ಲಿ ಆ ತಂಡವೇ ಈ ಆಟದಲ್ಲಿ ವಿಜಯಿಗಳು.

ಕುಂಟು ಬಿಲ್ಲೆ
ಇದು ಚಿಕ್ಕ ಹೆಣ್ಣು ಮಕ್ಕಳು ಆಡುವ ಆಟ

ಮರಕೋತಿಯಾಟ
ಇದು ಸಹ ಮುಟ್ಟಾಟದಂತೆ ಇದ್ದು ದೊಡ್ಡ ಮರ ಗಿಡಗಳ ಮೇಲೆ ಆಡುವದರಿಂದ ಇದಕ್ಕೆ ಮರಕೋತಿಯಾಟ ಎಂದು ಹೆಸರು.

ಚಿನ್ನಿದಾಂಡು
ಈ ಆಟವನ್ನು ಆಧುನಿಕ ಕ್ರಿಕೆಟ್ಕ್ಕೆ ಹೋಲಿಸಬಹುದು. ಚೆಂಡಿನ ಬದಲಾಗಿ ಮರದಿಂದ ಮಾಡಲಾದ ಚಿಕ್ಕ ಚಿನ್ನಿ ಹಾಗೂ ಬ್ಯಾಟ್ಗೆ ಬದಲಾಗಿ ಮರದಿಂದಲೇ ತಯಾರಾದ ಬಡಿಗೆಯ ರೂಪದ ದಾಂಡನ್ನು ಬಳಸಲಾಗುತ್ತದೆ.

ಬುಗುರಿ
ಇದಕ್ಕೆ ಬೇಕಾದದ್ದು ದಾರ ಹಾಗೂ ಬುಗುರಿ. ಇದನ್ನು ಸರಿಯಾಗಿ ಆಡಿಸಲು ನೈಪುಣ್ಯತೆ ಬೇಕು.

ಕಣ್ಣು ಮುಚ್ಚಾಲೆ
ಇದು Hide and Seek ಗೆ ಹೋಲಿಸಬಹುದು
Copyright ©2008 Naga raj
 | 
  

ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use