ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಗಾದೆಗಳು
ಸ್ಥಳ: ಬ್ಲಾಗ್ಸ್ನನಗೆ ತೋಚಿದ್ದು   
ಬರಹಗಾರ: ನಾಗರಾಜ್ megarajnaga7/22/2008 6:08 PM
ಗಾದೆಗಳು ಹೇಗೆ, ಎಲ್ಲಿ, ಯಾವಾಗ ಹುಟ್ಟಿಕೊಂಡದ್ದು ಎಂದು ಬಲ್ಲವರಾರು? ಇವು ಜನರ ಬಾಯಿಂದ-ಬಾಯಿಗೆ, ತಲೆಮಾರಿನಿಂದ-ತಲೆಮಾರಿಗೆ ಹಬ್ಬುವ ನುಡಿಗಟ್ಟುಗಳು. ಎಲ್ಲ ಗಾದೆಗಳು ಸತ್ಯ ವಾಕ್ಯವನ್ನು ಅರುಹುತ್ತವೆ.
ವೇದ ಸುಳ್ಳಾದರೂ ಗಾದೆ ಸುಳ್ಳಾಗದು.
ಅಟ್ಟ ಹಾರದ ಬೆಕ್ಕು ಬೆಟ್ಟ ಹಾರೀತೇ?
ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ಯೇ?
ಗಾಣಿಗ ಅಯ್ಯೋ ಅಂದರೆ ನೆತ್ತಿ ತಣ್ಣಗಾಗುತ್ತದೆಯೇ?
ಸೆಗಣಿಯವನ ಜೊತೆ ಸರಸಕ್ಕಿಂತ ಗಂಧದವನ ಜೊತೆ ಗುದ್ದಾಟ ಮೇಲು.
ತುಪ್ಪ ಅಳೆಯೋ ಕೈ ಜಿಡ್ಡಾಗೋದಿಲ್ವೇ?
ಅಂಗೈ ಹುಣ್ಣಿಗೆ ಕನ್ನಡಿ ಏಕೆ?
ಆಕಾಶ ನೋಡಲು ನೊಕುನುಗ್ಗಲೇಕೆ?
ವೇದಾಂತ ಹೇಳಕ್ಕೆ ಬದನೇಕಾಯಿ ತಿನ್ನಕ್ಕೆ!
'ಹೋದೆಯಾ ಪಿಶಾಚಿ' ಎಂದರೆ 'ಬಂದೆ ಗವಾಕ್ಷೀಲಿ' ಅಂತಂತೆ!
ಬೆಳೆಯುವ ಸಿರಿ ಮೊಳಕೇಲಿ!
ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರದು.
ಬಡವನ ಸಿಟ್ಟು ದವಡೆಗೆ ಮೊಲ.
ಆಕಳು ಕಪ್ಪಾದರೆ ಹಾಲು ಕಪ್ಪೇ!
ಓದು ಒಕ್ಕಾಲು ಬುಧ್ಧಿ ಮುಕ್ಕಾಲು.
ಇದ್ದುದನ್ನು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಒದ್ದರಂತೆ!
ಕಂಡದ್ದನ್ನು ಆಡಿದರೆ ಕೆಂಡದಂಥ ಕೋಪ.
ನಾಯಿ ಬಾಲ ಡೊಂಕು.
ಬೆಕ್ಕಿಗೆ ಚೆಲ್ಲಾಟ;ಇಲಿಗೆ ಪ್ರಾಣಸಂಕಟ.
ಹಾಸಿಗೆ ಇದ್ದಷ್ಟು ಕಾಲು ಚಾಚು.
ನವಿಲು ಕುಣೀತೂಂತ ಕೆಂಬೂತ ಕುಣೀತಂತೆ!
ಬೀಸೊ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು.
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯವಿಲ್ಲ.
ಅರಮನೆ ಮುಂದೆ ನೆರಮನೆ ಇರಬಾರದು.
ಅಲ್ಪ ವಿದ್ಯಾ ಮಹಾ ಗರ್ವಿ.
ತುಂಬಿದ ಕೊಡ ತುಳುಕಲ್ಲ.
ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರೆಲಿ ಕೊಡೆ ಹಿಡಿಸಿದನಂತೆ!
ಹಣ್ಣು ತಿಂದವ ಜಾರಿಕೊಂಡ, ಸಿಪ್ಪೆ ತಿಂದವ ಸಿಕ್ಕಿಕೊಂಡ!
ರಾವಣನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ!
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು!
ಬೆಕ್ಕಿಗೆ ಜ್ವರ ಬಂದರೆ ಎತ್ತಿಗೆ ಬರೆ ಹಾಕಿದರಂತೆ!
ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ!
ಹದಗಡಲೆ ಅಂದರೆ ನಂಗೆರಡು ಅಂದರಂತೆ!
ಸಾವಿರ ವರ್ಷ ಸಾಮುಮಾಡಿ ಸಾಯೋ ಮುದುಕಿ ಸೊಂಟ ಮುರಿದ!
ಮದುವೆಯಾಗೊ ಬ್ರಾಹ್ಮಣ ಅಂದರೆ ನೀನೆ ನನ್ನ ಹೆಂಡತಿ ಅಂದನಂತೆ!
ಕೋತಿ ತಾನು ಕೆಡುವುದಲ್ಲದೆ ವನನೆಲ್ಲ ಕೆಡಸಿತಂತೆ!
ಎತ್ತು ಏರಿಗೆ ಎಳೆದರೆ ಕೋಣ ನೀರಿಗಿಳಿಯಿತು!
ಗಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೋಡಿದಂತೆ!
ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು.
ಅಕ್ಕಿ ಮೇಲೆ ಆಸೆ; ನಂಟರ ಮೇಲೆ ಪ್ರಾಣ.
ಪಾಲಿಗೆ ಬಂದದ್ದು ಪಂಚಾಮೃತ.
ಉಂಡ ದಿನವೇ ಉಗಾದಿ;ಮಿಂದ ದಿನವೇ ದೀಪಾವಳಿ.
ಆಳಾಗಿ ದುಡಿ, ಅರಸಾಗಿ ಉಣ್ಣು.
ಉಂಡೂ ಹೋದ; ಕೊಂಡೂ ಹೋದ.
ಉಪ್ಪು ತಿಂದವ ನೀರು ಕುಡಿಯಲೇ ಬೇಕು.
ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ.
ತಾಯಿಯಂತೆ ಮಗಳು; ನೂಲಿನಂತೆ ಸೀರೆ.
ಅಳಿಯ ಅಲ್ಲ ಮಗಳ ಗಂಡ.
ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.
ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ.
ಮಾತು ಬಲ್ಲವನಿಗೆ ಜಗಳವಿಲ್ಲ;ಊಟಬಲ್ಲವನಿಗೆ ರೋಗವಿಲ್ಲ.
ಹೊಸ ವೈದ್ಯನಿಗಿಂತ ಹಳೆ ರೋಗಿ ಮೇಲು.
ಮಂಗನ ಕೈಯಲ್ಲಿ ಮಾಣಿಕ್ಯ.
ಕೋತಿ ಹುಣ್ಣು ಬ್ರಹ್ಮ ರಾಕ್ಷಸ.
ಹೆತ್ತವರಿಗೆ ಹೆಗ್ಗಣ ಮುದ್ದು;ಕಟ್ಟಿಕೊಂಡವರಿಗೆ ಕೋಡಗ ಮುದ್ದು.
ಕೊಸನ್ನು ಕೊಂಕುಳಲ್ಲಿಟ್ಟುಕೊಂಡು ಊರೆಲ್ಲಾ ಹುಡುಕಿದರಂತೆ.
ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ.
ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.
ಓತಿಕೇತಕ್ಕೆ ಬೇಲಿ ಸಾಕ್ಷಿ.
ಕೋಳಿ ಕೂಗದಿದ್ದರೆ ಬೆಳಗಾಗೋದಿಲ್ವೇ?
ದೀಪದ ಕೆಳಗೇ ಕತ್ತಲೆ.
ಸಂತೆ ಹೊತ್ತಿಗೆ ಮೊರು ಮೊಳ.
ಹಿತ್ತಿಲ ಗಿಡ ಮದ್ದಲ್ಲ.
ರಾತ್ರೆ ಇಡೀ ರಾಮಾಯಣ ಕೇಳಿ ರಾಮನಿಗೊ ಸೀತೆಗೊ ಏನು ಅಂದರಂತೆ.
ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊರು ಮೊಳ ಹಾಕಿದರಂತೆ.
ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳೆಯೆ ?
ಇರುಳು ಕಂಡ ಬಾವಿಗೆ ಹಗಲು ಬಿದ್ದರಂತೆ.
ಶ್ರೀಮಂತರ ಮನ ನೋಟ ಚಂದ, ಬಡವರ ಮನೆ ಊಟ ಚಂದ.
ಎಲ್ಲರ ಮನೆ ದೋಸೆ ತೂತು.
ಒಬ್ಬ ಚಾಪೆ ಕೆಳಗೆ ನುಸುಳುದರೆ, ಇನ್ನೊಬ್ಬ ರಂಗೋಲೆ ಕೆಳಗೆ ನುಸುಳಿದ.
ಹಿರಿಯಕ್ಕನ ಚಾಳಿ ಮನೆಯವರಿಗೆಲ್ಲಾ.
ಬೆರಳು ತೋರಿಸಿದರೆ ಹಸ್ತ ನುಂಗಿದರಂತೆ.
ಊರಿಗೆ ಅರಸ ಆದರೂ ತಾಯಿಗೆ ಮಗ.
ಹಾಳೂರಿಗೆ ಉಳಿದವನೆ ಗೌಡ.
ಅಯ್ಯೊ ಪಾಪ ಅಂದರೆ ಆರು ತಂಗಳು ಆಯಸ್ಸು ಕಮ್ಮಿ.
ಕೈಲಾಗದವನು ಮೈಪರಚಿಕೊಂಡ.
ಕೈ ಕೆಸರಾದರೆ ಬಾಯಿ ಮೊಸರು.
ಬಾಯಿದ್ದವನು ಬರಗಾಲದಲ್ಲೂ ಬದುಕಿದ.
ತಾಳಿದವನು ಬಾಳಿಯಾನು.
ಹಾಡುತ್ತ್ತಾಹಾಡುತ್ತಾ ರಾಗ, ಉಗುಳುತ್ತಾಉಗುಳುತ್ತಾ ರೋಗ.
ಅಪತ್ತಿಗಾದವನೇ ನಂಟ.
ಕೈ ತೋರಿಸಿ ಅವಲಕ್ಷಣ ಎನ್ನಿಸಿಕೊ.
ಕೋಣನ ಮುಂದೆ ಕಿಂದರಿ ಬಾರಿಸಿದಂತೆ.
ಯಾರಂತೆ ಅಂದರೆ ಊರಂತೆ.
ಗುಂಪಿನಲಿ ಗೋವಿಂದ.
ಊರೆಲ್ಲಾ ಕೊಳ್ಳೆ ಹೊಡೆದಮೇಲೆ, ದಿಡ್ಡಿ ಬಾಗಿಲು ಹಾಕಿದಂತೆ.
ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ.
ಕಾರ್ಯವಾಸಿ ಕತ್ತೆ ಕಾಲು ಹಿಡಿ.
ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
ತಾ ಅನ್ನೋದು ತಾತನ ಕಾಲದಿಂದ ಬಂದಿದೆ, ಕೊ ಅನ್ನೋದು ಕುಲದಲ್ಲೆ ಇಲ್ಲ.
ದೇವರು ವರ ಕೊಟ್ಟರೊ ಪೂಜಾರಿ ವರ ಕೊಡ.
ಶಂಖದಿಂದ ಬಿದ್ದರೇ ತೀರ್ಥ.
ಅತಿ ಆಸೆ ಗತಿ ಕೇಡು.
ಅತಿ ಆದರೆ ಅಮೃತವೂ ವಿಷ.
ಬೆಳ್ಳಗಿರುವುದೆಲ್ಲಾ ಹಾಲಲ್ಲ.
ಹನಿಹನಿ ಕೂಡಿದರೆ ಹಳ್ಳ.
Copyright ©2008 Naga raj
 | 
  
ಉತ್ತರ: ಗಾದೆಗಳು  ಅನು ಅವರಿಂದ; ಸಮಯ: 7/24/2008 3:52 PM
ತುಂಬ ಚೆನ್ನಾಗಿದೆ<br>


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use