ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಮೈಸೂರು ಹುಲಿ ಟಿಪ್ಪು
ಸ್ಥಳ: ಬ್ಲಾಗ್ಸ್ನನಗೆ ತೋಚಿದ್ದು   
ಬರಹಗಾರ: ನಾಗರಾಜ್ megarajnaga7/21/2008 8:43 PM
ಟೀಪು ಸಾಹಿಬ್ ಎಂದೂ ಕರೆಯಲ್ಪಡುತ್ತಿದ್ದ ಟೀಪು ಸುಲ್ತಾನ್ 1782 ರಿಂದ ಮೈಸೂರು ಸಂಸ್ಥಾನದ ರಾಜ, ಹಾಗೂ ಭಾರತದಲ್ಲಿ ಬ್ರಿಟೀಷ್ ಸಾಮ್ರಾಜ್ಯಶಾಹಿಯ ವಿರುದ್ಧ ಆಗಿನ ಕಾಲದ ಪ್ರಮುಖ ಹೋರಾಟಗಾರರಲ್ಲಿ ಒಬ್ಬ. ಈ ಹೋರಾಟದ ಪರಿಣಾಮವಾಗಿ ಟೀಪುವಿಗೆ ಶೇರ್-ಎ-ಮೈಸೂರ್ (ಮೈಸೂರ ಹುಲಿ) ಎಂಬ ಬಿರುದು ಉಂಟು.
ಟೀಪು ಸೇನಾ ತಂತ್ರಗಳನ್ನು ತನ್ನ ತಂದೆ, ಹೈದರಾಲಿಯೊಂದಿಗೆ ಇದ್ದ ಫ್ರೆಂಚ್ ಅಧಿಕಾರಿಗಳಿಂದ ಪಡೆದನು. 1767 ರ ಕರ್ನಾಟಕ ಯುದ್ಧದಲ್ಲಿ ಒಂದು ಅಶ್ವದಳದ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದನು. ಸೇನಾನಾಯಕನಾಗಿ ಟೀಪು ಪ್ರಸಿದ್ದಿ ಪಡೆದದ್ದು 1775‍‍‍‍‍/79 ರ ಆಂಗ್ಲೋ-ಮರಾಠಾ ಯುದ್ಧದಲ್ಲಿ.
15 ನೆ ವಯಸ್ಸಿನಲ್ಲಿ ತನ ತಂದೆ ಹೈದರಾಲಿಯ ಜೊತೆ ಪ್ರಥಮ ಮೈಸೂರು ಯುದ್ಧದಲ್ಲಿ ಭಾಗವಹಿಸಿ, ಒಂದು ದೊಡ್ಡ ಸೇನಾ ತುಕಡಿಯ ನಾಯಕನಾಗಿ 1782 ರ ಫೆಬ್ರವರಿಯಲ್ಲಿ ಆಂಗ್ಲ ಸೇನಾನಾಯಕ ಬ್ರಾತ್‍ವೈಟ್‍ನನ್ನು ಸೋಲಿಸಿದನು.
ಐದು ವರ್ಷಗಳ ನಂತರ ಎರಡನೇ ಮೈಸೂರು ಯುದ್ಧ ಆರಂಭವಾಯಿತು. ಈ ಯುದ್ಧದಲ್ಲಿ ಬ್ರಿಟಿಷರು ಸೋತರೂ ಅವರಿಂದ ಭಾರತದ ಸ್ವಾತಂತ್ರ್ಯಕ್ಕಿರುವ ಅಪಾಯವನ್ನು ಟೀಪು ಮನಗಂಡನು. 1782 ರಲ್ಲಿ ಹೈದರಾಲಿಯ ನಿಧನದ ನಂತರಇದರ ಪರಿಣಾಮ ಮೂರನೇ ಮೈಸೂರು ಯುದ್ಧ - ಇದರಲ್ಲಿ ಮೈಸೂರು ಸಂಸ್ಥಾನ ಬಲವಾಗಿ ಸೋತಿತು; ಇದೇ ಸಮಯದಲ್ಲಿ ಫ್ರಾನ್ಸ್ ದೇಶದಲ್ಲಿ ಕ್ರಾಂತಿ ಆರಂಭವಾಗಿ ಫ್ರಾನ್ಸ್ ದೇಶವು ಟೀಪುವಿನ ನೆರವಿಗೆ ಬರಲಾಗಲಿಲ್ಲ. ಟೀಪು ಸುಲ್ತಾನನಾದ ಮೇಲೆ ಬ್ರಿಟಿಷರ ಮುನ್ನಡೆಯನ್ನು ತಡೆಯಲು ಅನೇಕ ಮೈತ್ರಿತ್ವಗಳನ್ನು ಸ್ಥಾಪಿಸಲು ಹೆಣಗಿದ. ಮೊದಲು ಮರಾಠರೊಂದಿಗೆ ಹಾಗೂ ಮೊಘಲ್ ಸಾಮ್ರಾಜ್ಯದೊಂದಿಗೆ ಮೈತ್ರಿತ್ವವನ್ನು ಏರ್ಪಡಿಸಿದ.ಆದರೆ ಈ ಮೈತ್ರಿತ್ವಗಳು ವಿಫಲವಾದಾಗ ಯೂರೋಪ್‌ನಲ್ಲಿ ‍ ಬೆಳೆಯುತ್ತಿದ್ದ ಏಳುವರ್ಷಗಳ ಯುದ್ಧದ ಪರಿಣಾಮವಾಗಿ ಸ್ವಲ್ಪ ದುರ್ಬಲವಾಗಿದ್ದ ಫ್ರಾನ್ಸ್‌ನತ್ತ ಟೀಪು ತಿರುಗಿದನು. ಈ ಮೈತ್ರಿತ್ವದಿಂದ ಅವನು ಪಡೆದದ್ದಕ್ಕಿಂತಲೂ ಹೆಚ್ಚು ನೆರವನ್ನು ನಿರೀಕ್ಷಿಸಿ 1789 ರಲ್ಲಿ ಬ್ರಿಟಿಷರ ಕೈಯಲ್ಲಿದ್ದ ಟ್ರಾವಂಕೋರ್ ರಾಜ್ಯದ ಮೇಲೆ ಆಕ್ರಮಣ ನಡೆಸಿದ;ಇದರ ಪರಿಣಾಮ ಮೂರನೇ ಮೈಸೂರು ಯುದ್ಧ ನಡೆಯಿತು- ಇದರಲ್ಲಿ ಮೈಸೂರು ಸಂಸ್ಥಾನ ಬಲವಾಗಿ ಸೋತಿತು; ಇದೇ ಸಮಯದಲ್ಲಿ ಫ್ರಾನ್ಸ್ ದೇಶದಲ್ಲಿ ಕ್ರಾಂತಿ ಆರಂಭವಾಗಿ ಫ್ರಾನ್ಸ್ ದೇಶವು ಟೀಪುವಿನ ನೆರವಿಗೆ ಬರಲಾಗಲಿಲ್ಲ.
ಟೀಪುವಿನ ಮರಣ ನಾಲ್ಕನೇ ಮೈಸೂರು ಯುದ್ಧದ ಸಮಯದಲ್ಲಿ ನಡೆಯಿತು. 1798 ರಲ್ಲಿ ನೆಪೋಲಿಯನ್ ಈಜಿಪ್ಟ್ ವರೆಗೆ ಬಂದಿಳಿದದ್ದು ಮುಂದಕ್ಕೆ ಭಾರತದಲ್ಲಿ ಬ್ರಿಟಿಷರ ಮೇಲೆ ಆಕ್ರಮಣ ನಡೆಸಲು, ಮತ್ತು ಇದರ ಮುಂದಿನ ಹೆಜ್ಜೆ ಮೈಸೂರು ಸಂಸ್ಥಾನವಾಗಿದ್ದಿತು. ನೈಲ್ ಯುದ್ಧದಲ್ಲಿ ಆಂಗ್ಲ ಅಧಿಕಾರಿ ಹೊರೇಷಿಯೋ ನೆಲ್ಸನ್ ನೆಪೋಲಿಯನ್‌ನ ಕನಸನ್ನು ತಡೆದರೂ ಸಹ, ಮೂರು ಸೇನಾ ತುಕಡಿಗಳು - ಮುಂಬಯಿಯಿಂದ ಒಂದು ಮತ್ತು ಇನ್ನೆರಡು ಆಂಗ್ಲ ತುಕಡಿಗಳು (ಆರ್ಥರ್ ವೆಲ್ಲೆಸ್ಲಿ ಮತ್ತು ಡ್ಯೂಕ್ ಆಫ್ ವೆಲ್ಲಿಂಗ್ಟನ್ ನ ನೇತೃತ್ವದಲ್ಲಿ) ಮೈಸೂರಿನತ್ತ ಹೆಜ್ಜೆ ಇಟ್ಟವು. ರಾಜಧಾನಿಯಾದ ಶ್ರೀರಂಗಪಟ್ಟಣ ಕ್ಕೆ1799 ರಲ್ಲಿ ಈ ತುಕಡಿಗಳು ಮುತ್ತಿಗೆ ಇಟ್ಟವು. ಮೇ 4 ರಂದು ಈ ಸೇನೆಗಳು ಕೋಟೆ ಗೋಡೆಗಳನ್ನು ಭೇದಿಸಿ ಒಳಗೆ ನುಗ್ಗುತ್ತಿದ್ದಾಗ ಮುನ್ನುಗ್ಗಿದ ಟೀಪು ಮೃತನಾದ.
ಟೀಪು ಸೃಷ್ಟಿಸಿದ ಒಂದು ಮುಖ್ಯ ಸೇನಾ ಪ್ರಗತಿಯೆಂದರೆ ರಾಕೆಟ್‍ಗಳ ಮೂಲಕ ದೊಡ್ಡ ಮಟ್ಟದ ಆಕ್ರಮಣವನ್ನು ನಡೆಸುವುದು. ಮೂರನೇ ಹಾಗೂ ನಾಲ್ಕನೇ ಮೈಸೂರು ಯುದ್ಧಗಳಲ್ಲಿ ಇವುಗಳ ಬಳಕೆಯ ಪರಿಣಾಮವಾಗಿ ಆಂಗ್ಲರು ಸಹ ಇವನ್ನು ಬಳಕೆಗೆ ತಂದರು.
ಅನೇಕ ಚರಿತ್ರಜ್ಞರ ವಿಮರ್ಶೆಯ ಪ್ರಕಾರ ಟೀಪುವಿನ ಆಡಳಿತ ಜಾತ್ಯತೀತ ಹಾಗೂ ಸ್ವಾತಂತ್ರ್ಯಪೂರ್ಣ ಆದರ್ಶಗಳನ್ನು ಹೊಂದಿದ್ದಿತು. ಟೀಪುವಿನ ಜೀವನದ ಒಂದು ಆಸಕ್ತಿಕರ ಅಂಶವೆಂದರೆ ಅವನು ಜಾಕೊಬಿನ್ ಕ್ಲಬ್ ನ ಸಂಸ್ಥಾಪಕರಲ್ಲಿ ಒಬ್ಬನು. ಅದರ ಸದಸ್ಯತ್ವವನ್ನು ಸ್ವೀಕರಿಸುವಾಗ ಫ್ರಾನ್ಸ್‌ ಬಗ್ಗೆ ಮಾಡಿದ ಭಾಷಣದಲ್ಲಿ ಈ ಮಾತುಗಳಿದ್ದವು:
"ನಿಮ್ಮ ದೇಶದ ಸಂಸ್ಕೃತಿಯನ್ನು ನಾನು ಮೆಚ್ಚುತ್ತೇನೆ; ನಿಮ್ಮ ದೇಶ ನನಗೆ ಪ್ರಿಯವಾದದ್ದು, ಮತ್ತು ನಾನು ಅದರ ಮಿತ್ರ. ನಿಮ್ಮ ದೇಶ ಎಂದಿಗೂ ನನ್ನ ದೇಶದಲ್ಲಿ ಸಹಕಾರ ಕಾಣುತ್ತದೆ, ನನ್ನ ದೇಶಕ್ಕೆ ಇಲ್ಲಿ ಸಹಕಾರ ದೊರೆತಿರುವಂತೆ, ನನ್ನ ದೇಶದ ತಂಗಿ!"
ಟೀಪು ತನ್ನನ್ನು ನಾಗರಿಕ ಟೀಪು ಸುಲ್ತಾನ್ ಎಂದು ಕರೆದುಕೊಳ್ಳುತ್ತಿದ್ದ. ಆ ಕಾಲದ ಇತರ ಯಾವುದೇ ಸಮಾಜಶಾಹಿ ಅಥವಾ ಸ್ವಾತಂತ್ರ್ಯಪೂರ್ಣ ವಿಚಾರಗಳನ್ನು ಒಪ್ಪದ ರಾಜರ ಅಭಿಪ್ರಾಯಗಳಿಗೆ ಇದು ಸಂಪೂರ್ಣ ವಿರುದ್ಧವಾದದ್ದು.
Copyright ©2008 Naga raj
 | 
  
ಉತ್ತರ: ಮೈಸೂರು ಹುಲಿ ಟಿಪ್ಪು  ಭಾಸ್ಕರ‌ ಅವರಿಂದ; ಸಮಯ: 7/22/2008 2:54 PM
ಟೀಪುವಿನ ಇತಿಹಾಸದ ಪರಿಚಯ ಮಾಡಿಕೊಟ್ಟದ್ದಕ್ಕಾಗಿ ವಂದನೆಗಳು. ಹಾಗೆಯೆ ಮೈಸೂರು ಸಂಸ್ಥಾನದ ವಡಯರ ಬಗ್ಗೆ ದಯವಿಟ್ಟು ಮಾಹಿತಿ ನೀಡಬೇಕಾಗಿ ಕೋರುತ್ತೇನೆ.

ಉತ್ತರ: ಮೈಸೂರು ಹುಲಿ ಟಿಪ್ಪು  ದೀಪಕ್ ಅವರಿಂದ; ಸಮಯ: 7/22/2008 4:20 PM
ಧನ್ಯವಾದಗಳು ನಾಗರಾಜ್ ರವರಿಗೆ ನಿಮ್ಮ ಎಲ್ಲಾ ಲೇಖನಗಳು ತುಂಬಾ ಚೆನ್ನಾಗಿದೆ. ಇದೇ ರೀತಿಯಾಗಿ ಹೆಚ್ಚು ಹೆಚ್ಚು ಲೇಖನಗಳನ್ನು ಬರೆಯಿರಿ.


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:3
ಸದಸ್ಯರುಸದಸ್ಯರು:0
ಒಟ್ಟುಒಟ್ಟು:3

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use