ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಚಿತ್ರ ಗೀತೆ ಪರಮೇಶಿ ಕೈಯಲ್ಲಿ ಸಿಕ್ಕಿ ಲಿರಿಕ್ಸ್ ಆದಾಗ‌
ಸ್ಥಳ: ಬ್ಲಾಗ್ಸ್ಅನಿಸಿಕೆ   
ಬರಹಗಾರ: Srikanth sriki7/2/2008 11:50 AM
ಸಾರ್ ನಮಸ್ಕಾರ ನಾನು ಪರಮೇಶಿ
ಸಾರ್ ನಮಸ್ಕಾರ ನಾನು ಪರಮೇಶಿ ,
ಕವಿ :ಬಾರಯ್ಯ್ ಬಾ ಎನು ಸಮಾಚಾರ,
ಪರಮೇಶಿ :ಸಿ ಡಿ ಬಿಡುಗಡೆ ಇತ್ತು, ಇಲ್ಲೆ ಪಕ್ಕದ ರಸ್ತೆಯಲ್ಲಿ, ಸರಿ ಹಾಗೆ ಮಾತಾಡಕೊಂಡ ಹೋಗೋಣ ಅಂಥ ಬಂದೆ, ಏನೋ ಬರೀತಾ ಇದ್ದೀರ‌.
ಕವಿ : ಹೌದಪ್ಪ ಚಿತ್ರಗೀತೆ ಬರೀತಾ ಇದ್ದೀನಿ, ಹೊಟ್ಟಿ ಪಾಡು!
ಪರಮೇಶಿ :ಸಾರ್ ನಾನು ನಿಮಗೆ ಬಹಳ ದಿವಸದಿಂದ ಹೇಳ್ತಾ ಇದ್ದೆ, ಕಥೆ ಕವಿತೆ ಬಿಟ್ಟು ಬಿಡಿ, ಲಿರಿಕ್ಸ್ ಬರೀರಿ ಅಂಥ, ಕೊನೆಗೂ...
ಕವಿ : ನಾಲ್ಕು ಸಾಲು ಕೇಳಿ, ಹೇಗಿದೆ ಹೇಳು.

ಅನುದಿನವು ಅನುಕ್ಷಣವು ಹಾತೊರೆಯುತ್ತಿದೆ ನನ್ನ ಮನವು
ನಿನ್ನ ಸವಿ ನುಡಿಯ ಕೇಳಲು, ಜಗವ ಮರೆಯಲು
ಸಿಂಗಾರ ನಿನಗೇಕೆ, ಕಿರುನಗೆ ಸಾಕು, ಮೀರಿಸಲು
ಸೂರ್ಯಾಸ್ತವನು, ಹುಣ್ಣಿಮೆ ಚೆಂದಿರನ ಸೊಬಗನು ......

ಪರಮೇಶಿ : ಸಾರ್ ಪ್ರತಿ ಸಾಲಿನಲ್ಲೂ ಮಿಸ್ಟೇಕ್ಸೋ ಮಿಸ್ಟೇಕ್ಸು.
ಕವಿ: ಏನು ತಪ್ಪುಗಳು ಪರಮೇಶಿ.
ಪರಮೇಶಿ : ಹೀಗೆ ನೀವು ಬರದ್ರೆ ಜನ ರಿಜೆಕ್ಟ್ ಮಾಡ್ತಾರೆ. ಜನಾನ ಇಂಪ್ರೆಸ್ಸ್ ಮಾಡೋಕೆ ಮೊದಲ ಎರಡು ಸಾಲುಗಳು ತುಂಬ ಇಂಪಾರ್ಟೆಂಟು, ಆಮೇಲ್ ಎನು ಬರೆದ್ರು .. ಜನ ಮ್ಯೂಸಿಕ್ನಲ್ ಕಳೆದು ಹೋಗಿರ್ತಾರೆ.ನಿಮಗೆ ಲೇಟೆಸ್ಟ್ ಟ್ರೆಂಡ್ ಹೇಳ್ತೀನಿ ಸಾರ್, ಚಿತ್ರ ಗೀತೆಗಳಲ್ಲಿ ಒಂದೆರಡು ಹಿಂದಿ ಇಂಗ್ಲೀಷ್ ಪದ ಇದ್ರೇನೆ ಚೆನ್ನ.
ಕವಿ: ಲೋ ಪರಮೇಶಿ ಹಿಂದಿ ಇಂಗ್ಲೀಷ್ ಉಪಯೋಗಿಸಿದ್ರೆ ಅದು ಕನ್ನಡ ಹೇಗೆ ಆಗುತ್ತೆ. ಕನ್ನಡ ಪದಗಳ ಬಳಕೆ ಕಡಿಮಯಾಗಿ, ಕೆಲವು ಕನ್ನಡ ಪದಗಳು ನಶಿಸಿ ಹೋಗಬಹುದು...
ಪರಮೇಶಿ : ಮೊದಲನೆ ಸಾಲನ್ನು ಸ್ವಲ್ಪ ಆಲ್ಟ್ ರ್ ಮಾಡಿಕೊಳ್ಳಿ, 'ಅನುದಿನವು ಅನುಕ್ಷಣವು' ಬದಲು ಹರಪಲ್, ಮತ್ತೆ ಹಾತೊರೆಯುತ್ತಿದೆ ಅಂದ್ರೆ ಯಾರಿಗು ಗೊತ್ತಾಗೊಲ್ಲ ಸಾರ್, ಈಗ ಏನಿದ್ದರು ಕಾಡುವ ಕಾಲ ಸಾರ್, ರಾಜಕಾರಣಿ ಸಾಮಾನ್ಯ ಜನರನ್ನ ಕಾಡೋದು,ಶ್ರೀಮಂತರು ಬಡವರನ್ನ, ಗ್ಲೋಬಲೈಸೇಷನ್ ನೆಪದಲ್ಲಿ ರೈತರನ್ನು ಮತ್ತು ಸಣ್ಣ ಕೈಗಾರಿಕೆ ಯವರನ್ನ. ಹಾತೊರೆಯುತ್ತಿದೆ ಬದಲು ಕಾಡ್ತಾಳವಳು,ಅಂಥ ಪ್ರಯೋಗ ಮಾಡೋಣ.
ಎರಡನೆಯ ಸಾಲಿನಲ್ಲಿ ಒಂದು ಚಿಕ್ಕ ಬದಲಾವ‌ಣೆ ಮಾಡಿ ಸಾರ್, ಜಗವ ಬದಲು 'ದುನಿಯಾ' ಬೇಡ 'ಪಾಪಿ ದುನಿಯಾ'.
ಕವಿ: ಲೋ ಪರಮೇಶಿ ಇದು ಪ್ರಣಯ ಗೀತೆ,ನೋವಿನಿಂದ ಕೂಡಿದ ಗೀತೆ ಅಲ್ಲ, ಪಾಪಿ ಅಂಥ ಪ್ರಯೋಗ ಮಾಡುವುದಕ್ಕೆ.
ಪರಮೇಶಿ : ನಂಗೂ ಗೊತ್ತು ಸಾರ್, ಆದ್ರೆ ಹೋದ ವರ್ಷ ಒಂದು ಹಾಡು ಹಿಟ್ ಆಯ್ತು ಸಾರ್ "ಈ ಪಾಪಿ ದುನಿಯಾ".
ಕವಿ: ಆದ್ರೆ ಸಂದರ್ಭಕ್ಕೆ ತಾಳೆ ಆಗ್ದೇ ಇದ್ರೆ ಚೆನ್ನಗಿರೊಲ್ಲ....(ಇನ್ನು ಇವನ ಹತ್ತಿರ ವಾದ ಮಾಡಿ ಪ್ರಯೋಜನ ಇಲ್ಲ‌)
ಪರಮೇಶಿ : 'ಸಿಂಗಾರ' ಬೇಡ ಸಾರ್ ಮತ್ತೆ ಹಳೇ ಸ್ಟೈಲು, ಮೇಕಪ್ ನಿನಗೇಕೆ ಎಂದು ಬದಲಾವಣೆ ಮಾಡೋಣ, ಇಂಗ್ಲೀಷ್ ಪದ ಬಂದಂಗೂ ಆಗುತ್ತೆ.
ಕವಿ: ಅಯ್ಯೋ ಪರಮೇಶಿ ನಿನ್ನ ಯೋಚನೆಯ ಧಾಟಿ ನನಗೆ ತಿಳೀತಾ ಇಲ್ಲ.
ಪರಮೇಶಿ : ಕಿರು ನಗೆ ಇರಲಿ ಸಾರ್ ತುಂಬ ಚೆನ್ನಾಗಿದೆ, ಕಾಯ್ಕಿಣಿಯವರ ಒಂದು ಹಾಡು ಹಿಟ್ ಆಯ್ತು.‌
ಪರಮೇಶಿ : ಇನ್ನ ನಾಲ್ಕನೆ ಸಾಲು 'ಸೂರ್ಯಾಸ್ತ, ಹುಣ್ಣಿಮೆ ಚೆಂದಿರ' ಇವೆಲ್ಲಾ ಚೌಧವೀಕಾ ಚಾಂದ, ಚಿ: ಉದಯಶಂಕರ, ಆರ್ ಎನ್ ಜೆ ಕಾಲಕ್ಕೆ ಆಗೋಯ್ತು. ಈಗಿನ ಕಾಲಕ್ಕೆ ಹೋಲಿಕೆ ಅಂದ್ರೆ 'ಬಿಲ್ಗೇಟ್ಸ್ ಬಂಗ್ಲೆ' ಈ ರೀತಿ ಇರಬೇಕು ಸಾರ್ ...
ಸಾರ್ ಆಮೇಲೆ, ನೀವು ಶುರುಮಾಡಿರೋದು ಇಂಪ್ರೆಸ್ಸಿವ್ ಆಗಿಲ್ಲ, ಜನ ಡಿಫ್ರೆಂಟ್ ಕೇಳ್ತಾರೆ ,ಫಾರ್ ಎಗ್ಸಾಂಪಲ್ಲು ( ಆತ್ಮ ಗತಂ ಗಾಳಿ ಪಟ 'ನೈ ನೈ ನ ನ ನೈ' ಮತ್ತೆ 'ಜಿಂಕೆ ಮರಿ ನಾ ನೀ ಜಿಂಕೆ ಮರೀನಾ' )
ತುಂಬಾ ವಿಚಿತ್ರವಾಗಿರಬೇಕು, 'ಕುಯ್ ಕುಯ್ ಕುಯ್ಕುಯ್ ಕುಯ್, ನೀ ನವಿಲು ಗರಿ ನಾ ನೀ ನವಿಲು ಗರಿ ನಾ'.
ಕವಿ: ಏನೋ ಇದು ನಮ್ಮ ರಾಜರತ್ನಂ ನಾಯಿ ಮರಿ ಅಳ್ತಾ ಇರೋ ಹಾಗಿದೆಯಲ್ಲೋ
ಪರಮೇಶಿ : ಈಗ ನೋಡಿ ಸಾರ್ ಎಲ್ಲ ಸೇರಿಸ್ದಾಗ.
( ಜಿಂಕೆ ಮರಿ ಹಾಡಿನ ದಾಟಿ ಯಲ್ಲಿ ಇದನ್ನು ಓದಿ)

ಕುಯ್ ಕುಯ್ ಕುಯ್ಕುಯ್ ಕುಯ್, ನೀ ನವಿಲು ಗರಿ ನಾ ನೀ ನವಿಲು ಗರಿ ನಾ
ಹರಪಲ್ ಕಾಡ್ತಾಳವಳು ನನ್ ಮನಸನ್ ಕಾಡ್ತಾಳವಳು
ಅವಳ ಸವಿ ನುಡಿಯ ಕೇಳಲು, ಪಾಪಿ ದುನಿಯಾ ಮರೆಯಲು
ಮೇಕಪ್ ನಿನಗೇಕೆ,ಮೇಕಪ್ ನಿನಗೇಕೆ,ನಿನ್ ಕಿರು ನಗೆ ಮುಂದೆ
ಏನೂ ಇಲ್ಲ ಬಿಲ್ಗೇಟ್ಸ್ ಬಂಗ್ಲೇ, ಅಮಿತಾಬ್ ಶೋಲೆ

ಕವಿ ಕುಳಿತಲ್ಲೆ ಕುಸಿದು ಬೇಳುವನು.
 | 
  
ಉತ್ತರ: ಚಿತ್ರ ಗೀತೆ ಪರಮೇಶಿ ಕೈಯಲ್ಲಿ ಸಿಕ್ಕಿ ಲಿರಿಕ್ಸ್ ಆದಾಗ‌  ಮದು ಅವರಿಂದ; ಸಮಯ: 7/2/2008 12:28 PM
ಚೆನ್ನಗಿದ ..... ನಿನ್ನದೇನಾ ಕದ್ದಿದ್ದಾ?

ಉತ್ತರ: ಚಿತ್ರ ಗೀತೆ ಪರಮೇಶಿ ಕೈಯಲ್ಲಿ ಸಿಕ್ಕಿ ಲಿರಿಕ್ಸ್ ಆದಾಗ‌  srikgn ಅವರಿಂದ; ಸಮಯ: 7/2/2008 12:35 PM
ಹಹಹಹಹಹಹ್.<br>ಇಂದಿನ ಕೆಲವು ಕನ್ನಡ ಚಿತ್ರ ಗೀತೆಗಳು ಬರೆಸಿದ್ದು.<br>

ಉತ್ತರ: ಚಿತ್ರ ಗೀತೆ ಪರಮೇಶಿ ಕೈಯಲ್ಲಿ ಸಿಕ್ಕಿ ಲಿರಿಕ್ಸ್ ಆದಾಗ‌  ಭಾಸ್ಕರ್ ಅವರಿಂದ; ಸಮಯ: 7/6/2008 4:27 PM
ಮುಗಾಂಬೋಗೆ ಮಜ ಬಂತು.....ಜೈ ಕರ್ನಾಟಕ!!


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use