ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ.

Print
ನಲಿವಿನ ಮಡಿಲು ಗೆಲುವಿನ ಕಡಲು
ಸ್ಥಳ: ಬ್ಲಾಗ್ಸ್ಸಂಗ್ರಹ‌
ಬರಹಗಾರ: ಸೌಮ್ಯ ಎಸ್ ಎಸ್5/17/2008 2:33 PM
ಈ ಕವ‌ನ ಅಜ್ಜಿ ‍ಮೊಮ್ಮಕ್ಕಳ ಮ‌ಧುರ ಭಾಂಧ‌ವ್ಯವ‌ನ್ನು ಬಿಂಬಿಸುತ್ತದೆ..
ಕಲ್ಪವ್ಱುಕ್ಷದ ತೆರದಿ ಬಾಳಹಾದಿಯ ಸಾಗಿ/
ಹಣ್ಣಾಗಿಹುದು ಈ ಜೀವ ಅನುಭವದಿ ಮಾಗಿ//

ವಾರ್ಧಕ್ಯದಿಂದಾದರು ಮೊಗ ನೆರಿಗೆ ಪದರ /
ಸಾರ್ಥ‌ಕ್ಯದಿಂದ‌ಹುದು ನಗೆ ನ‌ಲಿವ ಚಿತ್ತಾರ//

ಸ‌ರ‌ಳ‌ತೆ, ಮುಗ್ದತೆಗ‌ಳ ಮೂರುತಿಯೆ ಮೊಮ್ಮಗು/
ಅದ‌ರ‌ ಮೊಗ‌ವ‌ನು ಬೆಳ‌ಗಿದ ಚೆಲು ಹೂನ‌ಗು //

ಮುದ್ದು ಕ‌ಂದ‌ಮ್ಮ ಬೀರುತಿದೆ ಸ‌ಂತ‌ಸ‌ದ ಒಸ‌ಗೆ /
ಮುತ್ತಜ್ಜಿಗೀಗ ಆಸರೆಯೇ ಪ್ರೀತಿಯ ಬೆಸುಗೆ//

ಎಳಮೆಯಿಂದಲೆ ದೊರೆಯೆ ನಲಿವಿನ ಮಡಿಲು /
ಮುಪ್ಪಿನಲ್ಲೂ ಉಕ್ಕುವುದು ಗೆಲುವಿನ ಕಡಲು//

ಉತ್ತರ: ನಲಿವಿನ ಮಡಿಲು ಗೆಲುವಿನ ಕಡಲು  ಶ್ರೀಕಾಂತ್ ಅವರಿಂದ; ಸಮಯ: 5/21/2008 5:22 PM
ಕವನ ಸೊಗಸಾಗಿದೆ. ಇದರಿಂದೆ ಅಡಗಿರುವ ವಿಪರ್ಯಾಸವೆಂದರೆ.
ತಾಯಿಯನ್ನು ವ್ರುದ್ಧಾಶ್ರಮಕ್ಕೆ ಅಟ್ಟುವ ಮಕ್ಕಳು ಇದ್ದಾಗ, ಹೇಗೆ ತಾನೆ ಮೊಮ್ಮಗು ಅಜ್ಜಿಯೊಂದಿಗೆ ಸಂಪರ್ಕ ಬೆಳೆಸೀತು.
"ಹಣ್ಣಾಗಿಹುದು ಈ ಜೀವ ಅನುಭವದಿ ಮಾಗಿ"
ಅಗಾಧ ಸಂಯಮದಿಂದ ಕೂಡಿದ ಶಿಕ್ಷಣ ಅಪ್ಪ ಅಮ್ಮಂದಿರಂತು ನೀಡಲು ಸಾಧ್ಯವಿಲ್ಲ, ಬಿಡುವಿರಬೆಕಲ್ಲ ಇವರಿಗೆ.
ಇದು ಇಪ್ಪತ್ತೊಂದನೆಯ ಅಜ್ಜ ಅಜ್ಜಿಯರಿಗೆ ಮೊಮ್ಮಕ್ಕಳಿಗೆ ಶಿಕ್ಷೆಯೇನೊ. ದೈವಿಕ ಶಿಕ್ಷೆ.

ಉತ್ತರ: ನಲಿವಿನ ಮಡಿಲು ಗೆಲುವಿನ ಕಡಲು  umapati ಅವರಿಂದ; ಸಮಯ: 5/26/2008 7:52 AM
ಒಲಯ ಕಾವಯಯ‌

ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ

ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
Print
ಇಮೇಲ್ ಬ್ಲಾಗ್
Print
ಪ್ರಶ್ನೆ
Print
ನಮ್ಮ ವಿಡಿಯೋ
Print
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:7
ಸದಸ್ಯರುಸದಸ್ಯರು:0
ಒಟ್ಟುಒಟ್ಟು:7

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
Print

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use