| ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ.
| | |
| ಸ್ಥಳ: ಬ್ಲಾಗ್ಸ್ ಅನಿಸಿಕೆ |
 | | ಬರಹಗಾರ: Srikanth sriki | 4/24/2008 2:29 PM | ಇಂದು ಅಣ್ಣಾವ್ರ ಜನ್ಮದಿನ. 1893 ರಲ್ಲಿ ಸ್ವಾಮಿ ವಿವೇಕಾನಂದರು ಚಿಕಾಗೋ ವಿಶ್ವ ಸರ್ವ ಧರ್ಮ ಸಮ್ಮೇಳನದಲ್ಲಿ ತಮ್ಮ ಭಾಷಣವನ್ನು " ಬ್ರದರ್ಸ್ ಅಂಡ್ ಸಿಸ್ಟರ್ಸ" ಎಂದು ಶುರು ಮಾಡಿದಾಗ, ಅಲ್ಲಿ ನೆರೆದಿದ್ದವರಲ್ಲಿ ಮಿಂಚಿನ ಸಂಚಾರವಾಯಿತಂತೆ. ಅದೊಂದು ಅನುಭವವೆ ಸರಿ, "ಬ್ರದರ್ಸ" ಪದದಲ್ಲಿ ಅಡಗಿದ್ದ ಪ್ರೀತಿ, ಭಾವನೆ, ವಿವೇಕಾನಂದರ ದಿವ್ಯ ಸ್ವರೂಪ ಅಂಥದ್ದು. ನಮಗೆಲ್ಲ ಇಂಥದ್ದೆ ಒಂದು ಅವರ್ಣನೀಯ ಅನುಭವವಾಗುವದು ನಮ್ಮ ಪ್ರೀತಿಯ ಡಾ!! ರಾಜಕುಮರ್ ರವರನ್ನು "ಅಣ್ಣಾವ್ರು" ಎಂದು ಕರೆದಾಗ. ಇಂದು ಅವರ ಜನ್ಮದಿನ. ಕೇವಲ ಚತುರ, ಮೇರು ನಟರಾಗಿದ್ದಿದ್ದರೆ ನಮಗೆಲ್ಲ ಪೂಜ್ಯ ಭಾವನೆ ಮೂಡುತ್ತಿರಲಿಲ್ಲ. ಹಿಮಾಲಯ ಪರ್ವತಕ್ಕೂ ದೊಡ್ದದು ಅಣ್ಣಾವ್ರ ವ್ಯಕ್ತಿತ್ವ. ಉದಾ: ಒಮ್ಮೆ ಒಂದು "ಡಿಸ್ಟಿಲರಿ" ಉದ್ಗಾಟನೆಗೆ ಒಪ್ಪಿಕೊಂಡಿದ್ದರಂತೆ, ಆವಾಗ ಪರಿಚಯಸ್ಥರೊಬ್ಬರು, ನೀವು ಕುಡಿಯೋದು ಇಲ್ಲ ಮತ್ತೆ ಜನಕ್ಕೆ ತಪ್ಪು ಸಂದೇಶ..., ಅವರ ಮುಗ್ದತೆ ನೋಡಿ, ಅಯ್ಯೋ ಎಂದು ಮರುಗಿ, ಕ್ಯಾನ್ಸ್ ಲ್ ಮಾಡಿದ್ರಂತೆ.ಮನುಷ್ಯನು ಬೆಳೆಯುತ್ತ ತನ್ನ ಸುತ್ತ ಮುತ್ತಲ ಪರಿಸರದ ಪ್ರಭಾವದಿಂದ ಮುಗ್ದತೆಯನ್ನು ಕಳೆದು ಕೊಳ್ಳುತ್ತ ಹೋಗುತ್ತಾನೆ. ಮತ್ತೆ ನೀವುಗಳು ಯೋಚಿಸಬೇಕು ಅಣ್ಣಾವ್ರು ಇದ್ದ ಪರಿಸರ ಯಾವುದು, ಸಿನಿಮ..., ಆದರೆ ಅಣ್ಣಾವ್ರು ತಮ್ಮ ಜೀವಿತಾವಧಿಯ 80 ವರ್ಷಗಳವರೆಗು ಅದನ್ನು ಉಳಿಸಿಕೊಂಡರು. ಮುಗ್ದತೆಯಿದ್ದಲ್ಲಿ ದೆವರು ಇರುತ್ತಾನೆ ಅಲ್ಲವೆ. ಇದಷ್ಟೆ ಅಲ್ಲ, ಸಾರಸ್ವತ ಲೋಕವು ಇವರಿಗೆ ಗೌರವ ಸಲ್ಲಿಸಿದೆ, ನನಗೆ ತಿಳಿದಂತೆ, ಇಡೀ ಭಾರತ ಇತಿಹಾಸದಲ್ಲಿ ಯಾವ ಸಿನಿಮಾ ನಟನಿಗೂ ಈ ರೀತಿಯ ಮನ್ನಣೆ ದೊರಕಿಲ್ಲ. ಗೋಕಾಕ ಚಳುವಳಿ, ಅಣ್ಣಾವ್ರ ಕೊಡುಗೆ ನಿಮಗೆಲ್ಲ ತಿಳಿದಿದೆ. ಆಗಿನ ಕಾಲದಲ್ಲಿ 2 ಲಕ್ಷ ಜನರನ್ನು ಒಂದೇ ದಿವಸದಲ್ಲಿ ಸೇರಿಸಿದ್ದರಂತೆ, 25/30 ಸಾವಿರ ಜನರನ್ನು ಸೇರಿಸಲು ಈಗಿನ ರಾಜಕೀಯ ಪುಡಾರಿಗಳು ಎಷ್ಟೆಲ್ಲ ಹಣ ಚೆಲ್ಲುತ್ತಾರೆ. ಇರಲಿ ಆ ಜನ ಸಮೂಹ, ಅವರಲ್ಲಿದ್ದ ಪ್ರೀತಿಯನ್ನು ತೋರಿಸುತ್ತದೆ. ಬ್ರದರ್/ಅಣ್ಣ ಎಂಬ ಪದಕ್ಕೆ ಚ್ಯುತಿ ಬಾರದಂತೆ ನೋಡಿಕೊಂಡರು. ಅಣ್ಣಾವ್ರ ನಟನೆಗೆ, ಅದಕ್ಕಿಂತಲೂ ಮೀರಿದ ಅವರ ವ್ಯಕ್ತಿತ್ವಕ್ಕೆ ನನ್ನ ನಮನ. | | | | |
| ಉತ್ತರ: ಜನಮನ ಗೆದ್ದ ದಿನ | ಮಧು ಅವರಿಂದ; ಸಮಯ: 4/24/2008 2:56 PM | | ಬಹಳ ಚನಗಿದೆ |
|
| ಉತ್ತರ: ಜನಮನ ಗೆದ್ದ ದಿನ | ಶಂಕರ್ ಅವರಿಂದ; ಸಮಯ: 4/24/2008 9:46 PM | | ನಟ ಸಾರ್ವಭೌಮನಿಗೆ ನನ್ನ ನಮನ....ಕನ್ನಡದ ಕಲಾವಿದರಿಗೆ ಅವರು ಸದಾ ಸ್ಪೂರ್ತಿಯ ಸೆಲೆ... |
|
| ಉತ್ತರ: ಜನಮನ ಗೆದ್ದ ದಿನ | ಶಾರದಾ ಪ್ಯಾಟಿಗೌಡರ್ ಅವರಿಂದ; ಸಮಯ: 4/28/2008 5:21 PM | | ಲೇಖನ ಉತ್ತಮವಾಗಿದೆ. ಶೀರ್ಷಿಕೆ ಕೂಡಾ , ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರು ಹೆಸರು ಮಾಡಲು ಚಡಪಡಿಸುತ್ತಿರುವುದನ್ನು ನೋಡಿದರೆ ವಿಚಿತ್ರ ವೆನಿಸುತ್ತದೆ. ಜೀವನದಲ್ಲಿ ಯಶಸ್ಸು ಹೊಂದಲು ಪ್ರಾವೀಣ್ಯತೆಯೊಂದಿಗೆ ನಯವಿನಯತೆ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು ಎನ್ನುವುದಕ್ಕೆ ಪದ್ಮ ಭೂಷಣ ಡಾ|| ರಾಜ್ಕಕುಮಾರ ಮಾದರಿಯಾಗಿದ್ದಾರೆ ಅಂದರೆ ಅತಿಶಯೋಕ್ತಿಯಾಗಲಾರದು.<br> |
|
 | | |
|
|  | ಸದಸ್ಯತ್ವ: |  | ಇತ್ತೀಚಿನ ಸದಸ್ಯರು:tharakeshwar |  | ಇಂದಿನ ಹೊಸ ಸದಸ್ಯರು:0 |  | ನೆನ್ನೆಯ ಹೊಸ ಸದಸ್ಯರು:1 |  | ಒಟ್ಟು:194 |
 | ಆನ್‌ಲೈನ್ ಇರುವ ಸದಸ್ಯರು: |  | ಅತಿಥಿಗಳು:4 |  | ಸದಸ್ಯರು:0 |  | ಒಟ್ಟು:4 |
ಈಗ ಆನ್‌ಲೈನ್ ಇರುವವರು:
|
| | |
|