ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಈ ಪ್ರೀತಿ ಏಕೆ ಭೂಮಿ ಮೇಲಿದೆ?
ಸ್ಥಳ: ಬ್ಲಾಗ್ಸ್ಚಿತ್ರ ವಿಮರ್ಶೆ   
ಬರಹಗಾರ: ರು. ಶಿ.12/31/2007 2:26 AM
ಈ ಪ್ರೀತಿ ಏಕೆ ಹೀಗಿದೆ?

"ಈ ಪ್ರೀತಿ ಏಕೆ ಭೂಮಿ ಮೇಲಿದೆ?" ಇದು ಚಿತ್ರದ ಆರಂಭದಲ್ಲೇ ನಿರ್ದೇಶಕ ಕಮ್ ನಾಯಕ ಪ್ರೇಮ್ ರನ್ನು ಕಾಡುವ ಪ್ರಶ್ನೆ. ಅದಕ್ಕಾಗಿ ಅವರು ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರನ್ನು ಸೇರಿದಂತೆ ಅನೇಕರ ಅಭಿಪ್ರಾಯವನ್ನು ಪಡೆದುಕೊಳ್ಳುತ್ತಾರೆ. ಜೊತೆಗೆ ಅಂಬರೀಶ್ ಹಾಗೂ ವಿನಯಾಪ್ರಾಸಾದ್ ಇಬ್ಬರೂ ಸ್ಮಶಾನವೊಂದರಲ್ಲಿ ಕುಳಿತು "ಈ ಪ್ರೀತಿ ಏಕೆ ಭೂಮಿ ಮೇಲಿದೆ?" ಎಂದು ಚರ್ಚೆ ಮಾಡುತ್ತಾರೆ. ನಂತರವಷ್ಟೇ ಪ್ರೇಮ್ ತೆರೆಯ ಮೇಲೆ ಬಂದು "ಈ ಪ್ರೀತಿ ಏಕೆ ಭೂಮಿ ಮೇಲಿದೆ?" ಎಂದು ಹಾಡಿ ಕುಣಿಯುತ್ತಾರೆ. "ದೇವರು ತನಗಾಗಿಯೆ ಹೆಣ್ಣೊಬ್ಬಳನ್ನು ಸ್ಱುಷ್ಟಿಸಿದ್ದಾನೆ. ಅವಳು ನನಗೇ ಮೀಸಲು. ಅವಳೇ ನನ್ನ ಜೀವನ ಸಂಗಾತಿ" ಇದು ಪ್ರೇಮ್ ಎಂಬ ಪ್ರೇಮಿಯ ವಾದ.
ಗೆಳೆಯರೂ, ಊರಿನವರೆಲ್ಲರೂ ಬುದ್ದಿ ಹೇಳಿದರೂ ಆತನ ಈ ಬುದ್ದಿಭ್ರಮಣೆಯನ್ನು ಸರಿಪಡಿಸಲಾಗುವುದಿಲ್ಲ. ಇದೇ ಬಗೆಯ ನಂಬಿಕೆಯನ್ನಿಟ್ಟುಕೊಂಡು ಮತ್ತೊಬಳು ಹುಡುಗಿಯೂ ಕಾದಿದ್ದಾಳೆ. "ಚಂದ್ರನೇ ಬಂದು ನಿನ್ನ ವರಿಸುತ್ತಾನೆ" ಎಂದು ಹೇಳುವ ತಂದೆಯ ಮಾತಲ್ಲಿ ನಂಬಿಕೆಯಿಟ್ಟಿದ್ದಾಳೆ. ಅದಕ್ಕಾಗಿಯೇ ಯಾರೇ ತನ್ನನ್ನು ವರಿಸಲು ಬಂದರೂ ಆಕೆ ಆಗಸದೆಡೆ ನೋಡುತ್ತಾಳೆ. ಆಕಾಶದಲ್ಲಿ "ಮೂನ್" ಮೂಡಿದರಷ್ಟೇ ಅವಳಿಗೆ "ಹನಿಮೂನು"!

ಈ ಜೋಡಿಗಳಿಬ್ಬರೂ ಹತ್ತಿರ ಬಂದಾಗ ಶಂಖನಾದ ಕೇಳುತ್ತದೆ, ವಾದ್ಯ ಮೊಳಗುತ್ತದೆ. ಕಥೆ ವಿಚಿತ್ರವಾಗಿದೆ. ಚಿತ್ರಕಥೆ ಇನ್ನೂ ವಿಚಿತ್ರವಾಗಿದೆ. "ಒಂದಿಷ್ಟು ರೌಡಿಸಂ, ತಾಯಿಯ ಸೆಂಟಿಮೆಂಟು, ಐಟಂ ಸಾಂಗು" ಗಳಿದ್ದರೆ ಸಿನೆಮಾವನ್ನು ಗೆಲ್ಲಿಸಬಹುದು ಎಂದು ಪ್ರೇಮ್ ಬಲವಾಗಿ ನಂಬಿದಂತಿದೆ. ಕಥೆಗೆ ಪೂರಕವಲ್ಲದಿದ್ದರೂ ಬಲವಂತವಾಗಿ ಇವಗಳನ್ನು ಅವರು ಚಿತ್ರದಲ್ಲಿ ತುರುಕಿದ್ದಾರೆ. ಕತೆ ಒಮ್ಮಿಂದೊಮ್ಮೆಲೇ ಯಾವ ಮುನ್ಸೂಚನೆಯನ್ನೂ ಕೊಡದೆ ಫ್ಲಾಷ್ ಬ್ಯಾಕ್ ಗೆ ಜಾರಿಕ್ಕೊಳ್ಳುತ್ತದೆ. ಇದ್ದಕ್ಕಿದ್ದಂತೆಯೇ "ಡುಶುಂ ಡುಶುಂ" ದ್ರುಶ್ಯಗಳು ಪ್ರತ್ಯಕ್ಷವಾಗುತ್ತವೆ. ಮೊದಲಾರ್ಧ ಪರವಾಗಿಲ್ಲ ಅಂದರೆ, ಎರಡೆನೇ ಭಾಗವನ್ನು ಸಹಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಗ್ರಾಫಿಕ್ಸ್ ಬಳಕೆ, ಧ್ವನಿಯಲ್ಲಿನ ಅಬ್ಬರತೆ ತೀರಾ ಕಿರಿಕಿರಿಯೆನಿಸಿ ತಲೆನೋವು ತರಿಸುತ್ತದೆ.

ಯಾವುದೊ ಸಿದ್ಧಾಂತ ಹೇಳಲು ಹೊರಟಂತೆ ಪ್ರೇಮ್ ಅನಿಸುತ್ತಾರೆ. ಆದರೆ ಕತೆಯನ್ನು ಸಿನೆಮಾ ಎರಡೂವರೆ ಗಂಟೆಯ ಚೌಕಟ್ಟಿನಲ್ಲಿ ಸಂಪೂರ್ಣವಾಗಿ ಹಿಡಿದಿಡಲು ಅವರಿಂದ ಸಾಧ್ಯವಾಗಿಲ್ಲ. ಚಿತ್ರದ ಅನೇಕ ಹಾಡುಗಳೂ ಸಹ ಅನಿರೀಕ್ಷಿತವಾಗಿ ಉದ್ಭವವಾಗುತ್ತವೆ.

ಶೀರ್ಶಿಕೆ ಗೀತೆ ಸೇರಿದಂತೆ ಒಂದೆರಡು ಹಾಡುಗಳು ಕೇಳಲು ಹಿತವಾಗಿವೆ. ಇನ್ನುಳಿದವು ಸರಿಯಾಗಿ ಕೇಳಿಸುವುದೇ ಇಲ್ಲ. ಸಂಗೀತ ನಿರ್ದೇಶಕ ಆರ್.ಪಿ.ಪಾಟ್ನಾಯಕ್ ಫಿಫ್ಟಿ-ಫಿಫ್ಟಿ. ಕೆಲವೊಂದು ಗೀತೆಗಳಿಗೆ ಜಾನಪದದ ಸ್ಪರ್ಶವಿದೆ.

ಮೆಜೆಸ್ಟಿಕ್ ನ ಸಂದಿಗೊಂದಿಗಳ್ಳಲಿಯೂ ಸೀನು; ಸೊಗಸಾಗಿ ಕ್ಯಾಮರಾ ಹಿಡಿದ್ದಿದ್ದಾರೆ. ನಾಯಕ ಪ್ರೇಮ್ ಸಹ ನಟನೆಯಲ್ಲಿ ಇನ್ನೂ ಸಾಕಷ್ಟು ಪಳಗಬೇಕಿದೆ. ರೋಹಿಣಿ ರೂಪ ಹಾಗೂ ನಟನೆ ಎರಡರಲ್ಲೂ ಗುಡ್!

ಮರ್ಡರ್ ಮಲ್ಲಿಕಾಳ ನಿರೀಕ್ಷೆಯಿಟ್ಟುಕೊಂಡು ಹೊದ ಪ್ರೆಕ್ಷಕರಿಗೆ ನಿರಾಸೆಗೊಳಿಸಿದ ನಿರ್ದೇಶಕರು ಎದುರಿಗೆ ಸಿಕ್ಕರೆ ಪ್ರೇಕ್ಷಕರು ಅವರನ್ನು ಮರ್ಡರ್ ಮಾಡಬಹುದು!

ನವ ನಾಯಕಿ ನಮ್ರತಾ ಸಹ ಹಿಡಿಸುತ್ತಾಳೆ. ಜೂನಿಯರ್ ಸಧುಕೋಕಿಳರ ಕಾಮಿಡಿ ಖುಷಿ ಕೊಡುತ್ತದೆ.

"ಈ ಪ್ರೀತಿ ಏಕೆ ಭೂಮಿಮೆಲಿದೆ?" - ಈ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ.

ಚಿತ್ರ ನೋಡಿದ ಮೇಲೆ ಇನೊಂದು ಪ್ರಶ್ನೆ ಏಳುತ್ತದೆ - "ಈ ಪ್ರೀತಿಯೇಕೆ....." ಹೀಗಾಗಿದೆ?
 | 
  
ಉತ್ತರ: ಈ ಪ್ರೀತಿ ಏಕೆ ಭೂಮಿ ಮೇಲಿದೆ?  ಮಂಜು ಅವರಿಂದ; ಸಮಯ: 1/2/2008 3:54 AM
ಹೌದು ನಿಜ....ನಿಮ್ಮ ಅಬಿಪ್ಱಾಯ ಸರಿಯಾಗಿದೆ

ಉತ್ತರ: ಈ ಪ್ರೀತಿ ಏಕೆ ಭೂಮಿ ಮೇಲಿದೆ?  ರಾಜು ಅವರಿಂದ; ಸಮಯ: 1/20/2008 3:45 AM
ಈ ವಿಮರ್ಶೆ ಚೆನ್ನಾಗಿದೆ...


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:7
ಸದಸ್ಯರುಸದಸ್ಯರು:0
ಒಟ್ಟುಒಟ್ಟು:7

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use