ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ.

Print
ಡಾ|ದ.ರಾ.ಬೇಂದ್ರೆ
ಸ್ಥಳ: ಬ್ಲಾಗ್ಸ್ಕೈಲಾಸದಿಂದ...ವ್ಯಕ್ತಿ ಪರಿಚಯ‌
ಬರಹಗಾರ: shankar kailasa4/12/2008 10:07 AM
ಸಾಹಿತ್ಯ ಕ್ಷೇತ್ರದಲ್ಲಿ 'ಬೇಂದ್ರೆ' ಎಂದೇ ಚಿರಪರಿಚಿತರಾಗಿರುವ ದತ್ತಾತ್ರೇಯ ರಾಮಚಂದ್ರ ಬೇಂದ್ರೆ,1896 ಜನವರಿ 31ರಂದು ಧಾರವಾಡದಲ್ಲಿ ಜನಿಸಿದರು.
ತಂದೆ ರಾಮಚಂದ್ರ;ತಾಯಿ ಅಂಬವ್ವ.ಅಂತೆಯೇ ಇವರು 'ಅಂಬಿಕಾತನಯದತ್ತ'.ಕಾವ್ಯ ಸ್ರುಷ್ಟಿಯನ್ನು ಉಸಿರಾಟದಷ್ಟು ಸಹಜ ಮಾಡಿಕೊಂಡ ಈ 'ವರಕವಿ'ಯ ಪ್ರಥಮ ಕವನ ಸಂಕಲನ 'ಗರಿ'.ನಂತರದಲ್ಲಿ ಸಖೀಗೀತ, ನಾದಲೀಲೆ,ಗಂಗಾವತರಣ,ಅರಳು ಮರುಳು,ಮೆಘದೂತ,ಜಾತ್ರೆ,ಸಾಯೋ ಆಟ,ಸಾಹಿತ್ಯ ವಿರಾಟ್ ಸ್ವರೂಪ,ಇತ್ಯಾದಿ ಇವರ ಇನ್ನಿತರೆ ಕ್ರುತಿಗಳು.

ಇವರ 'ನಾಕು ತಂತಿ' ಕವನ ಸಂಕಲನವು 1973ರಲ್ಲಿ ಕನ್ನಡಕ್ಕೆ 2ನೇ ಜ್ನಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟಿತು.

'ನೋಡಲು ಚಿಕ್ಕದು,ತೋಡಿದಷ್ಟು ಅರ್ಥ'ವನ್ನು ನೀಡುವ ಕವನಗಳನ್ನು ರಚಿಸಿರುವ ಈ ಕವಿಪುಂಗವ ಕಾಲನರಮನೆ ಸೇರಿದ್ದು 1981 ಅಕ್ಟೋಬರ್ 26 ರಂದು.

ಉತ್ತರ: ಡಾ|ದ.ರಾ.ಬೇಂದ್ರೆ  anantshayan sanjeev ಅವರಿಂದ; ಸಮಯ: 4/13/2008 1:30 PM
really good to know about Dr.Bendre.

He is my favorite Kavi.

Thanks kailas

ಉತ್ತರ: ಡಾ|ದ.ರಾ.ಬೇಂದ್ರೆ  ಶ್ರೀಕಾಂತ್ ಅವರಿಂದ; ಸಮಯ: 4/14/2008 3:31 PM
"ಬೆಂದರೆ ಬೇಂದ್ರೆ" ಅಂಥ.
ಆವರ "ಬೆಳಗು" ಕವಿತೆಯಲ್ಲಿ ಬರುವ ಈ ಸಾಲುಗಳು
" ಗಿಡ ಗಂಟೆಗಳ ಕೊರಳೊಳಗಿಂದ ಹೊರಟೀತು ಹಕ್ಕಿಗಳ ಹಾಡು" ಇವರನ್ನು ಜಗತ್ತಿನ ಯಾವುದೆ ವಿಶ್ವ ಶ್ರೇಷ್ಟ ಕವಿಗಳ ಸಾಲಿಗೆ ಸೇರಿಸಲು ಸಾಕು ಎಂದು ಬಿ ಎಮ್ ಶ್ರೀ ಒಂದು ಕಡೆ ಹೇಳಿರುವರು .ಅಂದರೆ ಮಿಲ್ಟನ್ , ವರ್ಡಸ್ವರ್ಥ ......
ನಾ ಇವರ ಬಗ್ಗೆ ಓದಿದ್ದ ಒಂದು ಸ್ವಾರಸ್ಯಕರ ಘಟನೆ.
ಒಬ್ಬ ಬೂಟ್ ಪಾಲಿಷ್ ಮಾಡುವವನು ಇವ್ರನ್ನ ಎಷ್ಟು ಅಚ್ಚಿಕೊಂಡಿದ್ದನೆಂದರೆ, ಬೇಂದ್ರೆ ಆ ಕಡೆ ಹೋದಾಗಲೆಲ್ಲ ಇವರನ್ನು ಎಳೆದು ತಂದು, ಅಕ್ಕರೆಯಿಂದ ಚಪ್ಪಲಿ ಪಾಲಿಷ್ ಮಾಡಿ , ರೊಕ್ಕ ಒಲ್ಲೆ ಅಂತಿದ್ದನಂತೆ, ಆಗ ಸಾಧನಕೇರಿಯ ಮೋಡಿಗಾರ ಅವರ ಜೋಡಿಯಿದ್ದ ಸ್ನೇಹಿತರಿಗೆ ಹೇಳಿದ್ದ್ರಂತೆ,
" ನೋಡ್ರಿ ಎಲ್ಲರು ತಮ್ಮ ತಮ್ಮ ಚಪ್ಪಲಿ ಪಾಲಿಷ್ ಮಾಡ‌ಕೋತಾರೆ, ತಮ್ಮನ್ನ ತಾವು ಪಾಲಿಷ್ ಮಾಡಿಕೊಳ್ಳುವವರು ಬಹಳ ವಿರಳ" ಅಂದ್ರಂಥೆ.

ಉತ್ತರ: ಡಾ|ದ.ರಾ.ಬೇಂದ್ರೆ  ಶ್ರೀಕಾಂತ್ ಅವರಿಂದ; ಸಮಯ: 4/14/2008 3:39 PM
ಕ್ಷಮಿಸಿ! ಕೈಲಾಸ್ ನಿಮಗೆ ಧನ್ಯವಾದಗಳನ್ನು ಹೇಳಬೇಕು, ನಿಮ್ಮಿಂದ ಒಳ್ಳೆ ವಿಷಯಗಳು ತಿಳಿಯುತ್ತಿವೆ.

ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ

ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
Print
ಇಮೇಲ್ ಬ್ಲಾಗ್
Print
ಪ್ರಶ್ನೆ
Print
ನಮ್ಮ ವಿಡಿಯೋ
Print
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
Print

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use