ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ.

Print
ಮೊದಲ ನಗು
ಸ್ಥಳ: ಬ್ಲಾಗ್ಸ್"ಮೊದಲ ನಗು"
ಬರಹಗಾರ: anantshayan sanjeev3/18/2008 1:42 AM
ನನಗೆ ತಿಳಿಯದ ಲೋಕದಲ್ಲಿ ನಾನು ಇದ್ದೆ. ಎಲ್ಲೊ ಒ0ದು ತರಹದ ಸದ್ದು. ಆ ಸದ್ದು ನನ್ನನ್ನು
ಕೆರಳಿಸುವ0ತೆ ಜೋರಗಿ ಆಗುತ್ತಿತ್ತು ಕೋನೆಗೆ ತಿಳಿಯಿತು ನಾನು ಮಲಗಿದ್ದೆ ಮತ್ತು ಆ ತಿಳಿಯದ ಲೋಕವೆ ಕನಸಿನ ಲೋಕ.ಆ ಸದ್ದೆ ಅಲಾರಾಮ.

ಎಚ್ಚರ ಆದ ತಕ್ಷಣವೆ ಇ0ದಿನ ಪ್ರವಾಸದ ನೆನಪು ಬ0ತು.ಸಮಯ ೬ ಗ0ಟೆ. ಬಸ್ಸು ೭.೩೦ ಕ್ಕೆ ಬರುತ್ತೆ. ಬೇಗನೆ ತಯಾರಾಗಿ ಹೆಗಲಿಗೆ ಬ್ಯಾಗು ಮತ್ತು ಕ್ಯಾಮರಾ ತೆಗೆದುಕೊ0ದು
ನಸುಕಿನ ೭.೨೦ ಕ್ಕೆ ಹೊರಟೆ.
ಹಸಿರು ಹಸಿರು ಕಾಣುವ ಆ ಗಿಡಗಳ ನಡುವೆ ಪ್ರಾಯದ ಹುಡುಗ‍‍‍‍ ಹುಡುಗಿಯರು ವಿಹಾರ ಮಡುತ್ತಿದ್ದರು.
ಮಳೆಗಲದಲ್ಲಿ ಬೆಳಗಾವಿ ತು0ಬಾ ಚೆನ್ನ.
ನಾವು ಗೋಗಟೆ ತಾ0ತ್ರಿಕ ಮಹಾವಿದ್ಯಾಲಯದ‌ ಕಾ0ಪ್ಯೂಟರ ಸಾಯಿನ್ಸ ವಿದ್ಯಾರ್ಥಿಗಳು ಹಮ್ಮಿಕೊ0ಡ ಪ್ರವಾಸ.
ಬೆಳಗಾವಿಯಿ0ದ ಗೋಕಾಕ ಜಲಪಾತಕ್ಕೆ ನಮ್ಮ ಅನ0ನ ಪ್ರವಾಸ ೮ ಕ್ಕೆ ತಡವಾಗಿ ಪ್ರಾರ0ಭವಾಯಿತು.
ನನ್ನ ಗೆಳೆಯ ಪ್ರಜ್ವಲ ತ0ದಿದ್ದ ತಿ0ಡಿಗಳನ್ನು ಹತ್ತೆ ನೀಮಿಷದಲ್ಲಿ ಖಾಲಿ ಮಾಡಿಬಿಟ್ಟೆವು. ಅದೆನೊ ಗೊತ್ತಿಲ್ಲಾ ನಮ್ಮ ಗೆಳೆಯರಿಗೆ ಆ0ಗ್ಲ ಭಾಷೆಯ ಹಾಡುಗಳೆ0ದರೆ ಪ0ಚಪ್ರಾಣ. ಅವರಿಗೆನು ಗೊತ್ತು ಇಲ್ಲಿ ನಮ್ಮ ಪ್ರಾಣ ಹೋಗುತ್ತಿತ್ತು ಎ0ದು.
ಸರಿಯಾಗಿ ೧0 ಕ್ಕೆ ಜಲಪಾತ ಮುಟ್ಟಿದೆವು. ಮಳೆಗಾಲ, ತು0ಬಿದ ನೀರು. ನೋಡುತ್ತಿ0ದತೆಯೆ ಮನಸು ಸಹ ಆನ0ದದಿ0ದ ತು0ಬಿತು. ಎಲ್ಲರು ಅವರವರ ಮನಬ0ದತ್ತೆ ಚದುರಿದರು. ನಾನು ಯಾದವಾಡ( ಹತ್ತಿರದ ಗ್ರಾಮ) ದಿ0ದ ಬ‍೦ದಿದ್ದರಿ0ದ ನನಗೆ ಇ ಜಲಪಾತದ ಇತಿಹಾಸ ಗೊತ್ತಿತ್ತು.ಎಲ್ಲರನ್ನು ಕರೆದು ಜಲಪಾತತ ಬೆಗ್ಗೆ ಹೇಳಬೇಕೆ0ದು ಕರೆದೆ. ಆದರೆ ಯಾರು ಬರಲ್ಲಿಲ್ಲಾ. ನನಗೆ ತು0ಬಾ ಬೇಸರವಾಗಿ ತೂಗು ಸೇತುವೆ ದಾಟಿ ಒ0ದು ಕಲ್ಲು ಬ0ಡೆ ಮೇಲೆ ಕುಳಿತು ಆ ರಭಸದ ಜಲಪಾತವನ್ನು ನೋಡುತ್ತಿತ್ತೆ.

ಯಾರೊ " ಎಕ್ಸ್ ಕ್ಯೊಸ್ ಮಿ" ಎ0ದ0ತೆ ಕೇಳಿಸಿತು. ನೋಡಿದರೆ "ಆಶಾ".
ಅವಳು ಜಲಪಾತದ ಇತಿಹಾಸ ಹೇಳು ಎ0ದಳು. ನಾನು ಮೊದಲು ನಿರಾಕರಿಸಿದರು ಅವಳ ನಗುವಿನ ಮೋಡಿಗೆ ಎಲ್ಲಾ ಹೇಳಲೆಬೇಕಾಯಿತು. ಕ್ಲಾಸನಲ್ಲಿ ಮೊದಳು ಭೇಟಿಯಾದ ಹುಡುಗಿ ಇವಳೆ. ಅವಳು ನನ್ನ ನೋಡಿ ನಕ್ಕ ಆ "ಮೊದಲ ನಗು" ನಾನು ಎ0ದೆ0ದು ಮರೆಯಲ್ಲಾ ಅನ್ನಿಸುತ್ತೆ. ಸುಮಾರು ೨ ಗ0ತೆಗಳ ಕಾಲ ನಮ್ಮ ಸ0ವಾದ ನಡೆಯಿತು. ನನಗೆ ಬೇಸರ ಬ0ದಾಗ ಬ0ದು ನನ್ನ ಮನಸಿಗೆ ಖುಷಿ ತ0ದು ಕೊಟ್ಟ ಆಶಾಳಿಗೆ ಧನ್ಯವಾದ ಹೇಳಿದೆ.
ಎಲ್ಲ ವಿದ್ಯಾರ್ಥಿಗಳು ನಮ್ಮನ್ನು ಊಟಕ್ಕೆ ಕರೆದರು. ನಾವು ಎದ್ದು ನಗು ನಗುತ್ತಾ ಎಲ್ಲರ ಕಡೆಗೆ ಧಾವಿಸಿದೆವು. ಊಟ ಮುಗಿಯಿತು. ಸಮಯ ೧ ಗ0ಟೆ . ಎಲ್ಲರು ಹಸಿರು ಹುಲ್ಲು ಹಾಸಿಗೆಯ ಮೇಲೆ ನಗು ನಗುತ್ತಾ, ಮಿಮಿಕ್ರಿ ಮಡುತ್ತಾ ಕುಳಿತ್ತಿದ್ದೆವು.
ದೂರದಲ್ಲಿ "ಆಶಾ" ಒಬ್ಬಳೆ ಅಳುತ್ತಾ ಕುಳಿತ್ತಿದ್ದಲು. ನನಗೆ ಆಶ್ಚರ್ಯವಾಯಿತು.
ನನ್ನ ಬೇಸರದ ಸಮಯದಲ್ಲಿ ಅವಳು ಬ0ದಳು ಈಗ ನಾನು ಹೋಗಿ ವಿಚಾರಿಬೇಕು ಎ0ದು ಅವಳ ಹತ್ತಿರ ಹೋದೆ.
"ಹೆಲ್ಲೊ ಆಶಾ" ಎ0ದೆ.
ಅವಳು "ಇದೆ ಕೋನೆ ನೀನು ನನ್ನ ಮತನಾಡಿಸ ಬೇಡ" ಎ0ದು ಹೋರಟೆ ಬಿಟ್ಟಳು.
ನನಗೆ ತಿಳಿಯಲೆ ಇಲ್ಲಾ.ಅಷ್ತರಲ್ಲಿ ನನ್ನ ಗೇಳೆಯರು ಅವಳಿಗು ನನಗೂ ಪ್ರೇಮಿಗಳೆ0ದು ಹೆಸರು ಕಲ್ಪಿಸಿ ಮಾತನಾಡತೊಡಗಿದರು. ನಾನು ಅದನು ಖ0ಡಿಸಿ ನಮ್ಮದು ಒಳ್ಳೆಯ ಸ್ನೆಹ ಮಾತ್ರಾ ಆ ರೀತಿಯ ಭಾವನೆಗಳಿಲ್ಲಾ ಎ0ದೆ.ಅಷ್ಟರಲ್ಲಿ ಸ್ವಾತಿ ಬ0ದು. ನನಗೆ ಕಾಡಿದ ಹಾಗೆ ಆಶಾಳಿಗು ಎಲ್ಲ ಹುಡುಗಿಯರು ಕಾಡಿಸಿದರ0ತೆ. ನನಗೆ ಎಲ್ಲಿಲ್ಲದ ಬೇಸರ.ಆಶಾ ತು0ಬಾ ಸೂಕ್ಷ್ಮ ಮನಸಿನವಳು ಒಳ್ಳೇ ಸುಸ0ಕೃತ ಮನೆತನದಿ0ದ ಬ0ದವಳು ಮೇಲಾಗಿ ಬೇಳಗಾವಿಯಲ್ಲಿ ಅವಳು ಕನ್ನಡತಿ ನನ್ನ ನೆಚ್ಚಿನ ಗೆಳತಿ. ಇ ವಿಶಯದ ಬಗ್ಗೆ ನನಗೆ ಚಿ0ತೆಯಾಯಿತು.ಆದರು ನಾಳೆ ಎಲ್ಲ ಸರಿ ಹೋಗಬಹುದು ಎ0ದು ಸ್ವಯ0 ಸಮಧಾನ ಮಾಡಿಕೊ0ಡು ಬಸ್ಸು ಹತ್ತಿದೆ.

ಸಮಯ ೩ ಗ0ಟೆ. ಎಲ್ಲರು ಮರಳಿ ಬೆಳಗಾವಿಗೆ ಪ್ರಾಯಾಣ ಬೆಳೆಸಿದೆವು.
ಅವತ್ತಿನ ದಿನ ನನ್ನ ಪಾಲಿಗೆ ಮುಗಿಯಿತು. ನಾಳೆ ಹೊಸ ಉತ್ಸಾಹದೊ0ದಿಗೆ ಕಾಲೇಜಿಗೆ ನಡೆದೆ.
ಕಾಲೇಜಿನ ಬಸ್ಸಿಗೆ ಕಾಯುತ್ತಾ ಕುಳಿತೆ.

ದೂರದಿ0ದಾ ಆಶಾ ಸ್ಚೂಟಿ ಮೇಲೆ ಬರುತ್ತಾ ಇದ್ದಳು
ನಾನು ಅವಳನ್ನು ನಗುವಿನ ಸನ್ನೆಯಲ್ಲೆ ಹೆಲ್ಲೊ ಅ0ದೆ.

ಆದರೆ ಅವಳ ಮರು ಉತ್ತರ ಬರಲೆ ಇಲ್ಲಾ. ಆ ನಗು ನನಗೆ ಮತ್ತೆ ಕಾಣಲೆ ಇಲ್ಲಾ.
ಆ ಮರೆಯದ ಮೊದಲ ನಗು ಮತ್ತೆ ನನ್ನ ಜೀವನದಲ್ಲಿ ಬರುವುದೆ?
ಮತ್ತೆ ಅ0ತಹ ಅಶಾಕಿರನ ನನ್ನ ಬದುಕಲ್ಲಿ ಸಿಗುವುದೆ?

ಆ ಮೊದಲ ನಗುವಿಗೆ ನಗುನಗುತಾ ಕಾಯುತ್ತಿರುವ‍
ನಿನ್ನ ಸ್ನೇಹಿತ‌

ಉತ್ತರ: ಮೊದಲ ನಗು  anantshayan_aim@yahoo.com ಅವರಿಂದ; ಸಮಯ: 3/18/2008 2:18 AM

ಉತ್ತರ: ಮೊದಲ ನಗು  ಶ್ಹ್ರೀಕಾಂತ್ ಅವರಿಂದ; ಸಮಯ: 3/18/2008 10:02 AM
ಚಿಂತಿ ಯಾಕ ಮಾಡುತಿ
"ಕುಛ್ ತೊ ಲೊಗ್ ಕಹೇಂಗೆ......" ಹಾಡಿಲ್ಲವೇ.

ಉತ್ತರ: ಮೊದಲ ನಗು  ಶ‌ಂಕರ್ ಅವರಿಂದ; ಸಮಯ: 3/18/2008 4:09 PM
ಚಿಂತೆ ಯಾಕೋ ಮಾಡುತಿಯೋ ಗೆಳೆಯ, ಕೇಳಯ್ಯಾ... ನಿಮಗೆ ಆಶಾ ನಗು ಸಿಕ್ಕೆ ಸಿಗುತ್ತದೆ.

ಉತ್ತರ: ಮೊದಲ ನಗು  ಅನ0ತಶಯನ‌ ಅವರಿಂದ; ಸಮಯ: 3/18/2008 9:22 PM
ಶ್ರೀಕಾ0ತ ಅವರೆ ಆಡಿಕೊ0ಡಿದ್ದು "ಲೋಗ್" ಅಲ್ಲಾ. ನನ್ನ ಮತ್ತು ಅವಳ ಸ್ನೇಹಿತರು.

ಗೇಳೆಯಾ ಶ0ಕರ ಅವಳ ನಗುವಿಗೆನೆ ಕಾಯುತ್ತಾ ಇರುವೆ.

ಧನ್ಯವಾದಗಳು.

ಉತ್ತರ: ಮೊದಲ ನಗು  ಅನ0ತಶಯನ‌ ಅವರಿಂದ; ಸಮಯ: 3/18/2008 9:43 PM
ಶ್ರೀಕಾ0ತ ಅವರೆ ಆಡಿಕೊ0ಡಿದ್ದು "ಲೋಗ್" ಅಲ್ಲಾ. ನನ್ನ ಮತ್ತು ಅವಳ ಸ್ನೇಹಿತರು.

ಗೇಳೆಯಾ ಶ0ಕರ ಅವಳ ನಗುವಿಗೆನೆ ಕಾಯುತ್ತಾ ಇರುವೆ.

ಧನ್ಯವಾದಗಳು.

ಉತ್ತರ: ಮೊದಲ ನಗು  ಅನ0ತಶಯನ‌ ಅವರಿಂದ; ಸಮಯ: 3/19/2008 8:41 PM

ಉತ್ತರ: ಮೊದಲ ನಗು  ಭಾಸ್ಕರ‌ ಅವರಿಂದ; ಸಮಯ: 3/18/2008 10:26 PM
ಅನಂತ್, ತಪ್ಪು ನಿಮ್ಮದೂ ಅಲ್ಲ, ನಿಮ್ಮ ಸ್ನೇಹಿತರದ್ದೂ ಅಲ್ಲ! ನಮ್ಮ ಭರತೀಯ ಜೀವನ ವಿಧಾನದ್ದು! ಸಾವಿರಾರು ವರ್ಷಗಲಿಂದಲೂ ಭಾರತೀಯರು ಮದುವೆಗೆ ಹೆಚ್ಚಿನ ಮಹತ್ವ ಕೊಡುತ್ತಾ ಬಂದಿದ್ದಾರೆ. ಒಂದು ಗಂಡು, ಒಂದು ಹೆಣ್ಣು ಇರುವುದು ಮದುವೆ ಆಗುವುದಕ್ಕೆ ಮತ್ತು ಮಕ್ಕಳು ಮಾಡುವುದಕ್ಕೆ! ಸ್ನೇಹಕ್ಕೆ, ಸಾಧನೆಗೆ, ಸಂಶೋಧನೆಗೆ, ಹೆಚ್ಚಿನ ಒತ್ತು ಇಲ್ಲ. ಸಿನೆಮಾಗಳು ಕೂಡ ಇದನ್ನೇ ಚಿತ್ರಿಸುತ್ತಾ ಬಂದಿವೆ. ಆದರೆ ಅಮೆರಿಕಾದಲ್ಲಿ ಇದರ ತದ್ವಿರುದ್ದ! ಸ್ವಲ್ಪ ಯೋಚಿಸಿ ನೋಡಿ.
ನಮ್ಮ ಮನೋಭಾವ ಬದಲಾಗ ಬೇಕು, ಏನಂತೀರಿ?

ಉತ್ತರ: ಮೊದಲ ನಗು  ಭಾಸ್ಕರ‌ ಅವರಿಂದ; ಸಮಯ: 3/18/2008 10:33 PM

ಉತ್ತರ: ಮೊದಲ ನಗು  ಭಾಸ್ಕರ‌ ಅವರಿಂದ; ಸಮಯ: 3/18/2008 10:34 PM

ಉತ್ತರ: ಮೊದಲ ನಗು  dhruva ಅವರಿಂದ; ಸಮಯ: 4/3/2008 10:45 PM
ಬೇಜರ್ ಮಾದ್ಕೋಬೇಡಾ ಗೆಲೆಯ

ಉತ್ತರ: ಮೊದಲ ನಗು  manju.s ಅವರಿಂದ; ಸಮಯ: 10/10/2008 8:40 PM
ನಮಸ್ಕರ ಅನ0ತು ಅವರಿಗೆ,

ತು0ಬಾ ತಡವಗಿ ನಿಮಗೆ ನನ್ನ ಅಭಿಪ್ರಾಯ ತಿಳಿಸುತ್ತೀರುವೆ.
ಆ ಆಶಾ ಕಿರಣ ಮತ್ತೆ ನಿಮ್ಮ ಮೆಲೆ ಬಿಳಲಿ.
ಆ ಮೊದಲ ನಗು ಮತ್ತೆ ಸಿಗಲಿ ಎ0ದು ಅಶಿಸುತ್ತೀರುವೆ.

ಇ0ತಿ ನಿಮ್ಮ ಗೆಳೆಯ,
ಮ‌0ಜು.

ಉತ್ತರ: ಮೊದಲ ನಗು  ಅನ0ತಶಯನ‌ ಅವರಿಂದ; ಸಮಯ: 10/11/2008 2:53 AM
ಧನ್ಯವಾದಗಳು ಮ0ಜು

ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ

ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
Print
ಇಮೇಲ್ ಬ್ಲಾಗ್
Print
ಪ್ರಶ್ನೆ
Print
ನಮ್ಮ ವಿಡಿಯೋ
Print
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:5
ಸದಸ್ಯರುಸದಸ್ಯರು:0
ಒಟ್ಟುಒಟ್ಟು:5

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
Print

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use