ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಭಟ್ಟರು ಮಾಡಿದ ಗಾಳಿಪಟ... ಬಣ್ಣದ ಹಾಳೆಯ ಗಾಳಿಪಟ‌
ಸ್ಥಳ: ಬ್ಲಾಗ್ಸ್ಚಿತ್ರ ವಿಮರ್ಶೆ   
ಬರಹಗಾರ: ರು. ಶಿ.1/24/2008 4:43 AM
"ಮಿಂಚಂತೆ ನೀನು ಬರಲು..." ಎಂದು ಚಿತ್ರ ಆರಂಭವಾದ ಸ್ವಲ್ಪ ಹೊತ್ತಿನ ನಂತರ ಹಾಡೊಂದು ಶುರುವಾಗುತ್ತದೆ. ತಣ್ಣಗೆ ತರಲೆ ಮಾಡಿಕೊಂಡಿದ್ದ ಮೂವರು ಹುಡುಗರು ಮಲೆನಾಡಿನ ಮನೆಯೊಂದಕ್ಕೆ ಔಟಿಂಗ್ ಗೆಂದು ಹೋಗಿರುವಾಗ, ಜಡಿ ಮಳೆಯ ನಡುವೆ ಆ ಮೂವರು ಹುಡುಗರ ಜೇವನದಲ್ಲಿ ಮಿಂಚಿನಂತೆಯೇ ಹುಡುಗಿಯರು ಆಗಲೇ ಪ್ರವೇಶಿಸುತ್ತಾರೆ.
ತನ್ನ ಮೊದಲ ಪ್ರೀತಿಯನ್ನು ಕಳೆದುಕೊಂಡು, ಗಡ್ಡ ಬಿಟ್ಟುಕೊಂಡು ನದಿ ತೀರದಲ್ಲಿ ಕುಳಿತು ಹಾಡುವ ಹುಡುಗನ ಹಿಂದೆ ಮನೆಯ ಕಿರಿಯ ಹುಡುಗಿ ಬಿದ್ದರೆ, ಡಾಕ್ಟರ್ ದಿಗಂತನಿಗೆ ಹೋಮಿಯೋಪತಿ ಡಾಕ್ಟರ್ ರಾಧಾ (ನೀತು) ಮುನಿಸಿಕೊಳ್ಳುತ್ತಲೇ ಮನಸ್ಸು ನೀಡುತ್ತಾಳೆ. ಇನ್ನು ಪಟ ಪಟ ಅಂತ ಪಟಾಕಿ ಸಿಡಿದಂತೆ ಮಾತಡುತ್ತ, ಗಾಳಿಪಟ ಹಾರಿಸುತ್ತ ಓಡಾಡುವ ಹುಡುಗ ಗಣೇಶನಿಗೆ ಅದೇ ಮನೆಯ ವಿಧವೆಯಾದ ಸೊಸೆಯ ಮೇಲೆ ಮನಸ್ಸಾಗುತ್ತದೆ.

ಹೀಗೆ ಮೂರು ಹುಡುಗ ಹಾಗೂ ಹುಡುಗಿಯರ ಪ್ರೀತಿ ಪ್ರೇಮದ ತಲ್ಲಣಗಳನ್ನು ಭಟ್ಟರು ಬಣ್ಣ ಬಣ್ಣದ ಕಥೆಯಾಗಿ ಹೆಣೆದು ಗಾಳಿಪಟ ಹಾರಿಸುತ್ತಾರೆ. ಹಾದಿಗೂ ಸಾಗದೆ, ಇತ್ತ ತೀರಾ ಸಿಲ್ಲಿಯೂ ಅನಿಸದೆ, ಒಂದು ಸುಂದರ ಟ್ರಿಪ್ ನಂತೆ ಚಿತ್ರ ಮುದ ನೀಡುತ್ತದೆ.

ಕೊಡಚಾದ್ರಿ ಬೆಟ್ಟ, ಜೋಗದ ಸಿರಿ... ಎಲ್ಲವನ್ನೂ ಎರಡೂವರೆ ಗಂಟೆಯಲ್ಲಿ ಸುತ್ತಿ, ಸವಿದು ಬರಬಹುದು. ಚಿತ್ರದ ತುಂಬಾ ತಮಾಷೆಯ ಸಂಭಾಷಣೆ ತುಂಬಿರುವುದರಿಂದ ಪ್ರಯಾಣ ಎಲ್ಲಿಯೂ ಒಂಚೂರೂ ಬೇಸರವೆನಿಸದು. ಸಂಭಾಷಣೆ ಹಾಗೂ ಸಾಹಿತ್ಯದಲ್ಲೂ ಯೋಗರಾಜ್ ಭಟ್ಟರ ಕೈಚಳಕವಿದೆ. 'ಮುಂಗಾರು ಮಳೆ'ಯ ಯಶಸ್ಸಿನ ಸೂತ್ರವನ್ನು ಬಲ್ಲ ನಿರ್ದೇಶಕರು, ಅದೇ ಸೂತ್ರಕ್ಕೊಂದು ಬಾಲಂಗೋಚಿ ಸೇರಿಸಿ, ಒಂದಿಷ್ಟು ಮೊಹಬ್ಬತ್ ತುಂಬಿ ಹಾರಿ ಬಿಟ್ಟಿದ್ದಾರೆ. ಹೀಗಾಗಿ ಈಗ ಇಲ್ಲಿ ಇನ್ನೊಂದು ಮಳೆಯಲ್ಲಿ ನೆನೆಯುವಾಗಲೂ ಅದು ಹೊಸ ಅನುಭವವನ್ನು ನೀಡುತ್ತದೆ.

ಪಾತ್ರಗಳ ಆಯ್ಕೆಯಲ್ಲಿಯೂ ನಿರ್ದೇಶಕರ ಜಾಣ್ಮೆಯಿದೆ. ಅಭಿನಯದಲ್ಲಿ ಇನ್ನೂ ಎಳೆಯಾದ ದಿಗಂತ್ ಹಾಗೂ ರಾಜೇಶ್ ರನ್ನು ಅವರು "ಬೆದರು ಬೊಂಬೆ" ಗಳಂತೆ ಬಳಸಿಕೊಂಡಿದ್ದಾರೆ. ಗಣೇಶ್ ಎಂದಿನಂತೆ ಮಾತಿನ ಮಲ್ಲ!

ಕೊಡಚಾದ್ರಿ ಹಸಿರಿನ ಗಿರಿಗಳ ನಡುವೆಯೆಲ್ಲಾ ಭಟ್ಟರು ಗಾಳಿಪಟ ಹಾರಿಸುತ್ತಾರೆ. ಆದರೆ ಅಷ್ಟು ದೊಡ್ಡ ಬೆಟ್ಟದ ತುದಿಯಲ್ಲಿ ಏಕೆ ಗೋರಿಯೊಂದನ್ನು ಕಟ್ಟಿದರೋ ಗೊತ್ತಿಲ್ಲ! ಮಲೆನಾಡು, ಜೋಗ ಎಲ್ಲವೂ ರತ್ನವೇಲು ಅವರ ಕ್ಯಾಮೆರಾದಲ್ಲಿ ಸೊಗಸಾಗಿ ಮೂಡಿ ಬಂದಿವೆ. ಚಿತ್ರಕ್ಕೆ ಮೂವರು ನಾಯಕಿಯರು. ಇದ್ದ ಮೂವರಲ್ಲಿ ಎಲ್ಲರೂ ಹೃದಯ ಕದಿಯುತ್ತಾರೆ!

ಹರಿಕೃಷ್ಣರ ಸಂಗೀತರದಲ್ಲಿ ಎರಡು ಹಾಡುಗಳು ಮನಸ್ಸಿಗೆ ತಟ್ಟುತ್ತವೆ. ಸುಧಾ ಬೆಳವಾಡಿ, ಅನಂತ್ ನಾಗ್ ರ ದಕ್ಷ ಪೋಷಕ ಪಾತ್ರ ಚಿತ್ರಕ್ಕಿದೆ. ಕಿರಿಯ ಪಾತ್ರದಲ್ಲೂ ರಂಗಾಯಣ ರಘು ಹಿರಿಯರೆನಿಸುತ್ತಾರೆ.

"ಕಾಡು ಹಂದಿ" ಚಿತ್ರದ ಮತ್ತೊಂದು ಮರೆಯಲಾಗದ ಪಾತ್ರ!

ಬೇಸಿಗೆ ಶುರುವಾಗುತ್ತಿದೆ. ಗಾಳಿಪಟವೂ ಹಾರುತ್ತಿದೆ. ಒಂದು ಸವಿಯಾದ ಪ್ರವಾಸಕ್ಕೆ ತಡಮಾಡಬೇಡಿ.

"ಯು ವಿಲ್ ಎಂಜಾಯ್ ದಿಸ್ ಜರ್ನೀ"
 | 
  
ಉತ್ತರ: ಭಟ್ಟರು ಮಾಡಿದ ಗಾಳಿಪಟ... ಬಣ್ಣದ ಹಾಳೆಯ ಗಾಳಿಪಟ‌  megarajnaga ಅವರಿಂದ; ಸಮಯ: 7/18/2008 10:42 AM
ಚನ್ನಾಗಿದೆ ಕನ್ರಿ


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:6
ಸದಸ್ಯರುಸದಸ್ಯರು:0
ಒಟ್ಟುಒಟ್ಟು:6

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use