ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಅಖಂಡ ಭಾರತ ರಂಗೋಲಿ ‍ ಕರ್ನಾಟಕ ಸುವರ್ಣ ಜಾನಪದ ಚಕ್ರ
ಸ್ಥಳ: ಬ್ಲಾಗ್ಸ್ಸುಮ್ನೆ ಸುದ್ದಿ   
ಬರಹಗಾರ: raju1/13/2008 5:25 AM
ಸುವರ್ಣ ಜ್ಯೋತಿ ಟ್ರಸ್ಟ್ ನ ಎರಡನೇ ವಿಶ್ವ ದಾಖಲೆಯ ಅಖಂಡ ಭಾರತ ರಂಗೋಲಿ ಸಶಕ್ತ,ಶಾಂತ,ಸಂಘಟಿತ,ಸಂಪತ್ಬರಿತ, ಜ್ಞಾನಭರಿತ, ವಿವಿಧತೆಯಲ್ಲಿ ಎಕತೆಯ ಅಖಂಡ ಭಾರತವನ್ನು ರಂಗೋಲಿಯಲ್ಲಿ ಬಿಡಿಸೋಣ ಬನ್ನಿ... ಆಗಸ್ಟ್ 15ರಂದು ನಡೆದ ಅತಿ ಉದ್ದದ ವಿಶ್ವ ದಾಖಲೆ ರಂಗೋಲಿ ಕಾರ್ಯಕ್ರಮದ ಚಿತ್ರಗಳನ್ನು ವೀಕ್ಷಿಸಲು www.chitrakuta.com ಭೇಟಿ ನೀಡಿ.
ರಂಗೋಲಿ ಬಿಡಿಸುವುದು:25-01-2008
ಸಾರ್ವಜನಿಕರ ವೀಕ್ಷಣೆ : 26-01-2008
ಸ್ಠಳ: ಅರಮನೆ ಮೈದಾನ, ತ್ರಿಪುರವಾಸಿನಿ, (ಮೇಕ್ರಿ ವೃತ್ತ) ಬಳ್ಳಾರಿ ರಸ್ತೆ ಬೆಂಗಳೂರು

ಎಲ್ಲಾ ವಯಸ್ಸಿನ, ಎಲ್ಲಾ ಭಾಷೆಯ , ಎಲ್ಲಾ ಜಾತಿ, ಧರ್ಮದ, ಎಲ್ಲಾ ರೀತಿಯ ಜನ ಅಂದರೆ ಸಾಹಿತಿಗಳು, ಸಂಗೀತಗಾರರು, ವೈದ್ಯರು, ವಕೀಲರು, ಆರಕ್ಷಕರು, ಅಧಿಕಾರಿಗಳು, ಕಾರ್ಮಿಕರು, ಗುಮಾಸ್ತರು, ಪತ್ರಕರ್ತರು, ರಾಜಕಾರಣಿಗಳು, ಕಿರುತೆರೆ-ಬೆಳ್ಳಿತೆರೆ ಕಲಾವಿದರು, ಹೀಗೆ ಸಮಾಜದ ಎಲ್ಲಾ ಸ್ತರದ ಜನರಿಂದ , ಹಾಗೆಯೇ ಎಲ್ಲಾ ರೀತಿಯ ವಿಕಲ ಚೇತನ ವ್ಯಕ್ತಿಗಳು ಮತ್ತು ಶೋಷಿತ ವ್ಯಕ್ತಿಗಳಿಂದ ರಂಗೋಲಿ ಬಿಡಿಸುತ್ತಿದ್ದೇವೆ. ಎಲ್ಲಾ ಭೇದ ಭಾವವನ್ನು ಮರೆತು ಈ ನಮ್ಮ ಭವ್ಯ ಭಾರತವನ್ನು ಕಟ್ಟುವ, ರಾಷ್ಟ್ರ ಭಕ್ತಿಯನ್ನು ಜಾಗೃತಿಗೊಳಿಸುವ ಈ ಬೄಹತ್ ಅಖಂಡ ಭಾರತ ರಂಗೋಲಿಯಲ್ಲಿ ಅಖಂಡ ಭಾರತದ ಭೂಪಟ, ರಾಷ್ಟ್ರೀಯ ಮಹಾ ಪುರುಷರು, ಲಾಂಛನಗಳು , ನದಿ , ಪರ್ವತ , ಸ್ಮಾರಕಗಳಿರುತ್ತವೆ.

ಎಲ್ಲಾ ಭಾಷೆಯಲ್ಲಿ "ಭಾರತ ಮಾತಾಕಿ ಜೈ" ಮತ್ತು ವಂದೇ ಮಾತರಂ " ಘೋಷ ವಾಕ್ಯವಿರುತ್ತದೆ. ಭಾರತವು ಜಗತ್ತಿಗೆ ನೀಡಿದಂತಹ ಕೊಡುಗೆಗಳು, ವಿವಿಧ ಕ್ಷೇತ್ರಗಳಲ್ಲಿ ಭಾರತವು ಸಾಧಿಸಿದ ವಿಷಯಗಳ ಬಗ್ಗೆ, ಹೆಮ್ಮೆ ಪಡುವ ಕಾರ್ಯಗಳ ಬಗ್ಗೆ ಒಂದುವರೆಲಕ್ಷ(೧೫೦೦೦೦) ಚದರ ಅಡಿಗೂ ದೊಡ್ಡದಾದ ರಂಗೋಲಿಯನ್ನು ಬಿಡಿಸಲಿದ್ದೇವೆ.ತಮಿಳುನಾಡಿನ ಹೊಸೂರಿನಲ್ಲಿ ೨೦೦೫ ಮೇನಲ್ಲಿ ೪೮೩೮೮ ಚದರ ಅಡಿ ರಂಗೋಲಿ ದಾಖಲೆಯನ್ನು ಮುರಿದು ನೂತನ ವಿಶ್ವ ದಾಖಲೆ ನಿರ್ಮಿಸುತ್ತಿದ್ದೇವೆ.

ಈ ಬೃಹತ್ ಅಖಂಡ ಭಾರತ ರಂಗೋಲಿ ಬಿಡಿಸಲು ೭೫೦ಕ್ಕೂ ಹೆಚ್ಚು ನುರಿತ , ಅನುಭವಿ ರಂಗೋಲಿ ಕಲಾವಿದರು ಬೇಕಾಗಿರುವುದರಿಂದ , ರಾಜ್ಯದೆಲ್ಲೆಡೆಯಿಂದ ಇದರಲ್ಲಿ ಭಾಗವಹಿಸಲು ಇಚ್ಚಿಸುವವರು ಕೆಳೆಗೆ ನೀಡಿರುವ ದೂರವಾಣಿ ಸಂಖ್ಯೆಗಳಲ್ಲಿ ಸಂಪರ್ಕಿಸಲು ಕೋರಲಾಗಿದೆ. ಸ್ಪರ್ಧಿಗಳಿಗೆ ಆಕರ್ಷಕ ಬಹುಮಾನಗಳಿರುತ್ತವೆ.

ಶನಿವಾರ ೨೬-೧-೨೦೦೮, ಬೆಳಿಗ್ಗೆ ಯಿಂದ ೨೭-೧-೨೦೦೮ ಭಾನುವಾರ ಸಂಜೆಯ ತನಕ ಈ ರಂಗೋಲಿಯನ್ನು ಸಾರ್ವಜನಿಕರು ವೀಕ್ಷಿಸಬಹುದು , ಮತ್ತು ಇದೇ ಸಂದರ್ಭದಲ್ಲಿ ದಿನಾಂಕ ೧೫-೮-೨೦೦೭ ರಂದು ಕಬ್ಬನ್ ಪಾರ್ಕಿನಲ್ಲಿ ಸುಮಾರು ೪೦೦೦ಕ್ಕೂ ಹೆಚ್ಚು ಜನರಿಂದ ಸುಮಾರು ೪.೫ ಕಿ.ಮೀ ಊದ್ದದ ರಂಗೋಲಿ ದಾಖಲೆಯಲ್ಲಿ ಭಾಗವಹಿಸಿದವರಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ಮತ್ತು ಬಹುಮಾನ ವಿತರಣೆ ಸಮಾರಂಭವಿರುತ್ತದೆ.

ಬನ್ನಿ ಭಾಗವಹಿಸಿ , ರಾಷ್ಟ್ರೀಯ ಏಕತೆಯನ್ನು ತೋರಿಸುವ , ಭಾವೈಕ್ಯತೆಯನ್ನು ಪ್ರದರ್ಶಿಸುವ ಮತ್ತು ರಾಷ್ಟ್ರಭಕ್ತಿಯ ವರ್ಧನೆಯ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.
ಸ‌ಂಪರ್ಕಿಸಿ: ಸುವರ್ಣ ಜ್ಯೋತಿ ಟ್ರಸ್ಟ್ (ರಿ)
ನಂ ೭, ೬ನೇ ಅಡ್ಡ ರಸ್ತೆ, ಆಜಾದ್ ನಗರ, ಬೆಂಗಳೂರು ೧೮.
ಇಮೇಲ್: janapadachakra@yahoo.co.in
ಮೊಬೈಲ್: 9341224368, 9901887674, 41470900, 9886825741, 9972032049, 9341242986
 | 
  

ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use