ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಸಂಘಂ ರೇಡಿಯೋ 90.4
ಸ್ಥಳ: ಬ್ಲಾಗ್ಸ್ನನಗೆ ತೋಚಿದ್ದು   
ಬರಹಗಾರ: ನಾಗರಾಜ್ megarajnaga10/17/2008 11:54 AM
ಭಾರತದ ಮೊಟ್ಟಮೊದಲ ಸಮುದಾಯ ರೇಡಿಯೋ ಆಗಿ ಅಂದ್ರಪ್ರದೇಶದ "ಸಂಘಂ ರೇಡಿಯೋ" (ಸಂಘದ ರೇಡಿಯೋ) 90.4 ತರಂಗಗಳಲ್ಲಿ ಅಕ್ಟೋಬರ್ 15 ರಂದು ಪ್ರಾರಂಭವಾಯಿತು. ಇದು ಇರುವುದು ಅಂದ್ರಪ್ರದೇಶದ ಮೆದಕ್ ಜಿಲ್ಲೆಯ, ಜಹೀರಾಬಾದ್ ತಾಲ್ಲೂಕಿಗೆ ಸೇರಿದ ಪಸ್ತಾಪುರ್ ಹತ್ತಿರದ ಮಾಚನೂರು ಗ್ರಾಮದಲ್ಲಿ. ಇಲ್ಲಿಂದ ಸುಮಾರು 30 ಕಿ.ಮೀ ದೂರ ಹೋದರೆ ನಮ್ಮ ಕರ್ನಾಟಕದ ಬೀದರ್ ಸಿಗುತ್ತದೆ. ಮಾಚನೂರು ತಲುಪಲು ಅಂದ್ರಪ್ರದೇಶದ ರಾಜಧಾನಿಯಾದ ಹೈದರಾಬಾದ್ ನಿಂದ 3 ಘಂಟೆಗಳ ಕಾಲ ಬಸ್ ಪ್ರಯಾಣ ಮಾಡಬೇಕು ಅಥವಾ ಬೀದರ್ ನಿಂದ ಬರಬಹುದು. ಈ ಸಂಘಂ ರೇಡಿಯೋವನ್ನು ನಿರ್ವಹಿಸುತ್ತಿರುವವರು ದಲಿತ ಕುಟುಂಬದಿಂದ ಬಂದ ಇಬ್ಬರು ಹೆಣ್ಣುಮಕ್ಕಳು ಇವರು ಹೆಚ್ಚಾಗಿ ಸಹ ಓದಿಲ್ಲ ಕೇವಲ 10ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಮಾಡಿದ್ದು ಸುಮಾರು ವರ್ಷಗಳಿಂದ ಇಲ್ಲಿಯೇ ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ. ಇಲ್ಲಿಯ ಕಾರ್ಯಕ್ರಮಗಳು ಗ್ರಾಮೀಣ ರೀತಿಯಲ್ಲಿ ಇರುತ್ತದೆ. ಯಾವುದೇ ಸಂಗೀತ ಇಲ್ಲ, ಯಾವುದೇ ಚಲನ ಚಿತ್ರಗೀತೆ ಇಲ್ಲ, ಬದಲಾಗಿ ಪೂರ್ತಿಯಾಗಿ ಸ್ಥಳೀಯ ಜನರು ಹಾಡಿದ ಹಾಡುಗಳು, ಸಾವಯವ ಕೃಷಿ ಬಗ್ಗೆ, ಆರೋಗ್ಯದ ಬಗ್ಗೆ, ಹಬ್ಬಗಳ ಬಗ್ಗೆ, ಮತ್ತು ಆ ಭಾಗದಲ್ಲಿ ಹರಿಕಥೆಯಂತೆ ಹಾಡುವ ಕಲಾವಿದರಿಂದ ಹಾಡುಗಾರಿಗೆ ಮತ್ತು ಕಥೆ ಹೇಳುವುದು ಇತ್ಯಾದಿಗಳು.
ಇದರ ಜೊತೆಗೆ ಇವರು ವಿಡಿಯೋ ಸಹ ಮಾಡುತ್ತಿದ್ದಾರೆ. ಇದನ್ನು ಮಾಡುವವರು ಸಹ ಮಹಿಳೆಯರು ಇವರು ಸಹ 10 ರತನಕ ಸಹ ಓದಿಲ್ಲ ಇವರು ವಿಡಿಯೋ ಕ್ಯಾಮರ ಕೈಲ್ಲಿ ಹಿಡಿದರೆ ಯಾವ ಟಿ.ವಿ ರಿಪೋರ್ಟರ್ ಆಗಲಿ ಅಥವಾ ವಿಡಿಯೋ ಗ್ರಾಪರ್ ಆಗಲಿ ಸಹ ಇವರ ಹತ್ತಿರ ಅಷ್ಟಕ್ಕೆ ಅಷ್ಟೆ.
ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಡೆಕ್ಕನ್ ಡೆವಲಪ್ ಮೆಂಟ್ ಸೊಸೈಟಿ (ಡಿ.ಡಿ.ಎಸ್) ಯ ಹೆಸರಿಗೆ ಪರವಾನಗಿ ಸಿಕ್ಕಿದೆ. ಡಿ.ಡಿ.ಎಸ್ ಸಂಸ್ಥೆಯು ಈ ಭಾಗದಲ್ಲಿ ದಲಿತ ಮಹಿಳೆಯರೊಟ್ಟಿಗೆ ಹೆಚ್ಚು ಕೆಲಸಗಳನ್ನು ಮಾಡುತ್ತಿದ್ದು, ದಲಿತರ 100 ಮಹಿಳಾ ಸ್ವಸಾಯ ಸಂಘಗಳನ್ನು ಹುಟ್ಟು ಹಾಕಿದೆ. ಈ ಸಂಘಗಳಲ್ಲಿ ಸುಮಾರು 4000 ಸದಸ್ಯರಿದ್ದು, 75 ಗ್ರಾಮಗಳಲ್ಲಿ ಸಂಘಗಳು ಇವೆ. ಈ ಭಾಗದ ಜನ ಈಗಲೂ ರೂ.10 ರಿಂದ 15 ರೂಗಳಿಗೆ ಕೂಲಿಯನ್ನು ಮಾಡಿ ಜೀವನವನ್ನು ಸಾಗಿಸುತ್ತಿದ್ದಾರೆ. ಇಂತಹ ಜನರ ಏಳಿಗೆಗಾಗಿ ಸಂಘಂ ರೇಡಿಯೋ (ಸಂಘದ ರೇಡಿಯೋ) ಉತ್ತಮ ಕೆಲಸಗಳನ್ನು ಮಾಡಲು ಹೊರಟಿದೆ. ಒಟ್ಟಾರೆ ನಮ್ಮ ದೇಶದಲ್ಲಿ ಇತ್ತೀಚಿಗೆ ತಾನೇ ಸಮುದಾಯ ರೇಡಿಯೋಗಳಿಗೆ ಪರವಾನಗಿ ನೀಡಲು ಮುಂದಾಗಿದೆ. ಹೇಳಬೇಕೆಂದರೆ ನಮ್ಮ ದೇಶದಲ್ಲಿ ಈ ತರಹದ ಸಮುದಾಯ ರೇಡಿಯೋಗಳು ಹೆಚ್ಚು ಹೆಚ್ಚು ಪ್ರಾರಂಭವಾಗಬೇಕು. ಆಗ ಮಾತ್ರ ಸರ್ಕಾರದ ಈ ಯೋಜನೆ ಸ್ವಲ್ಪ ಕಾಲ ಇರಲು ಸಾಧ್ಯ. ಇದೆ ತಿಂಗಳು ನಮ್ಮ ಭಾರತದಲ್ಲಿ ಇನ್ನೊಂದು ಸಮುದಾಯ ರೇಡಿಯೋ ಕೆಂದ್ರ 25 ರಂದು ಮದ್ಯಪ್ರದೇಶದ ಓರ್ಚಾದಲ್ಲಿ ಪ್ರಾರಂಭವಾಗಲಿದೆ ಅದರ ಹೆಸರು "ಬುಂದೇಲ್ ಖಂಡಿ" 90.4 ಕಂಪನಾಂಕದಲ್ಲಿ. ಮುಂದಿನ ತಿಂಗಳು ನಮ್ಮ ಕರ್ನಾಟಕದಲ್ಲಿ "ನಮ್ಮಧ್ವನಿ" ಸಮುದಾಯ ರೇಡಿಯೋ ಕೆಂದ್ರ ಸಹ ತರಂಗಗಳಲ್ಲಿ ಪ್ರಸಾರವಾಗಲಿದೆ. ಇದು ಸಹ 90.4 ಕಂಪನಾಂಕಗಳಲ್ಲಿ ಪ್ರಸಾರವಾಗಲಿದೆ. ಇವರ ಕೆಲಸಗಳು ಯಶಸ್ಸಾಗಲಿ ಎಂದು ಅ ದೇವರಲ್ಲಿ ಕೇಳಿಕೊಳ್ಳೋಣ

ಇದರ ಕುರಿತಾದ ಸಣ್ಣ ವಿಡಿಯೋ ವಿಕ್ಷಿಸಿ: http://in.youtube.com/watch?v=k1Bofdx52Ss
 | 
  
ಉತ್ತರ: ಸಂಘಂ ರೇಡಿಯೋ 90.4  ಸವಿತಾ ಅವರಿಂದ; ಸಮಯ: 10/17/2008 2:20 PM
ನಾಗರಾಜ್ ರವರೆ ಈ ಬರಹ ಅಧ್ಬುತ ವಾಗಿದೆ. ಇದರ ಕುರಿತಾದ ಸಣ್ಣ ವಿಡಿಯೋವ‌ನ್ನು www.nammavideo.com ನ‌ಲ್ಲಿ ಹಾಕಿ, ನ‌ಮ್ಮ್ ಕಛೇರಿಯ‌ಲ್ಲಿ http://in.youtube.com/watch?v=k1Bofdx52ಶ್ಸ್ ಅನ್ನು ಬ್ಲಾಕ್ ಮಾಡಿರುತಾರೆ. ಹಾಗೆಯೇ www.nammavideo.coಮ್ ನಲ್ಲಿ ನಾವೆಲ್ಲಾ ಇಂಡಿಯಾದಾ ವಿಡಿಯೋಗನ್ನು ವಿಕ್ಷಿಸಬಹುದು.

ಉತ್ತರ: ಸಂಘಂ ರೇಡಿಯೋ 90.4  ನಾಗರಾಜ್ ಅವರಿಂದ; ಸಮಯ: 10/17/2008 2:36 PM
ಸವಿತಾರವರಿಗೆ ಧನ್ಯವಾದಗಳು <br>ಅಂದ ಹಾಗೆ ಇದರ ವಿಡಿಯೋ ನನ್ನ ಬಳಿ ಇಲ್ಲ ಅದರ ಬದಲಾಗಿ ನಾನು 15 ರಂದು ತೆಗೆದ ಪೋಟೋಗಳನ್ನು ಜೋಡಿಸಿ ಆಡಿಯೋ ಹಾಕಿ ಇದ್ದೇನೆwww.nammavideo.com ನಲ್ಲಿ ದಯವಿಟ್ಟು ವೀಕ್ಷೀಸಿ ನಿಮ್ಮ ಅಭಿಪ್ರಾಯ ತಿಳಿಸಿ

ಉತ್ತರ: ಸಂಘಂ ರೇಡಿಯೋ 90.4  megarajnaga ಅವರಿಂದ; ಸಮಯ: 10/17/2008 3:48 PM
ದಯವಿಟ್ಟು ಕ್ಷಮಿಸಿ ವಿಡಿಯೋ ಸರಿಯಾಗಿ ಅಪ್ ಲೋಡ್ ಆಗುತ್ತಿಲ್ಲ ಆದ್ದರಿಂದವರದಿಯನ್ನು ndವರದಿಯನ್ನು ಹಾಕುತ್ತಿದ್ದೇನೆ

ಉತ್ತರ: ಸಂಘಂ ರೇಡಿಯೋ 90.4  ಸವಿತಾ ಅವರಿಂದ; ಸಮಯ: 10/28/2008 11:56 AM
ನಾಗರಾಜ್ ರವರೆ ದಿಪಾವಳಿ ಹಬ್ಬದ ಶುಭಾಶಯಗಳು!

ಉತ್ತರ: ಸಂಘಂ ರೇಡಿಯೋ 90.4  ನಾಗರಾಜ್ ಅವರಿಂದ; ಸಮಯ: 10/30/2008 12:23 PM
ತಮಗೂ ಸಹ ದೀಪಾವಳಿ ಹಬ್ಬದ ಶುಭಾಷಯಗಳು


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use