ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಪುಟ್ಟ ಪ್ರಪಂಚ‌
ಸ್ಥಳ: ಬ್ಲಾಗ್ಸ್ಭಾವ ತರಂಗ‌   
ಬರಹಗಾರ: rekhamurthy10/6/2008 7:01 PM
ನನ್ನ ಪ್ರಪಂಚದ ಪರಿದಿ
ನನ್ನ ಮನೆ, ನನ್ನ ಪ್ರೀತಿಯ ಗಂಡ ಹಾಗು ಮುದ್ದು ಮಕ್ಕಳ ಲಾಲನೆ, ಪೋಷಣೆಯ ಜವಾಬ್ದಾರಿಗಳು ಮತ್ತು ನನ್ನ ಪ್ರೀತಿಯ ಹವ್ಯಾಸವಾದ ಅಂತರ್ ಜಾಲ ಪರಿವೀಕ್ಷಣೆ ಇದೇ ನನ್ನ ಪುಟ್ಟ ಪ್ರಪಂಚ. ಈ ಪ್ರಪಂಚದಲ್ಲಿ ನಾನು ಅತ್ಯಂತ ಸುಖಿ. ಸಮಯ ಅರಿವಿಗೆ ಬಾರದಂತೆ ಉರುಳಿ ಹೋಗುತ್ತಿದೆ. ಈ ಸುಖೀ ಪ್ರಪಂಚದ ಪರದಿಯ ಹೊರಗೆ ಇನ್ನೊ ನನ್ನ ಮಹತ್ವಾಕಾಂಕ್ಷೆಯ ಕನಸುಗಳಿವೆ. ಸಾಧಿಸಬೇಕಾದ ಗುರಿಗಳಿವೆ. ಆದರೆ ಸಮಯ.......
ಸಮಯವಿಲ್ಲವೆ ಹೇಳು
ನಿನ್ನ ಹೆಣ್ತನದೊಳಗೆ ನನ್ನ ಹೊಂಗನಸುಗಳ
ಬಿತ್ತಿ ಬೆಳೆಯಲಿಕ್ಕೆ.....
ಎಲ್ಲಿಯೋ ಓದಿದ ಕವನ ನೆನಪಾಗುತ್ತದೆ. ನಿಜ ನಾಳೆ ಎಂಬುದು ನನಗಿಲ್ಲ ಎಂಬ ಅವಸರ ನನಗೇಕಿಲ್ಲ ಎನ್ನುವ ಆತ್ಮವಿಮರ್ಶೆಯಲ್ಲಿ ಅನೇಕ ಬಾರಿ ತೊಡಗಿರುತ್ತೇನೆ. ಬದುಕಿನ ಆದ್ಯತೆಗಳನ್ನು ಗುರುತಿಸಿಕೊಳ್ಳಲು, ಬಯಸ್ಸಿದ್ದನ್ನು ಮಾಡಲು, ಮರೆತು ಹೋದ ಕೈಗೆ ಕುಂಚ ಹಿಡಿಯಲು "ಅಯ್ಯೊ ! ಟೈಮೇ ಇಲ್ಲ " ಎನ್ನುವ ಸಬೂಬು ಸಮಾದಾನಕರವಲ್ಲವೆಂಬುದು ಸತ್ಯ.
ಚಿರಾಯುವೆಂಬಂತೆ ಮುಂದೂಡುವುದನ್ನು ಬಿಟ್ಟು, ಕನಸುಗಳ ಬೆನ್ನತ್ತಬೇಕು. ಕನಸನ್ನು ನನಸಾಗಿಸಬೇಕು. ಅದಮ್ಯಗುರಿಯನ್ನು ತಲುಪಿ ನನ್ನ ಪುಟ್ಟ ಪ್ರಪಂಚದ ಪರದಿಯನ್ನು ವಿಸ್ತರಿಸಬೇಕು.
 | 
  
ಉತ್ತರ: ಪುಟ್ಟ ಪ್ರಪಂಚ‌  ಶ್ರೀಕಾಂತ್ ಜಿ ಎನ್ ಅವರಿಂದ; ಸಮಯ: 10/7/2008 9:44 AM
ಕನಸುಗಳ ಬೆನ್ನತ್ತಬೇಕು ‍‍.........<br> ತುಂಬ ಸೊಗಸಾಗಿ ವಿವಿರಿಸಿದ್ದೀರ.<br>ಕಲಾಂ ಅವರು ಹೇಳಿದಂತೆ<br>"ಕನಸು‍‍‍‍‍‍‍ ಕಾಣಬೇಕು>>>>>ಕನಸುಗಳು‍ ಆಲೋಚನೆಗಳಾಗವವು>>>>>>>>>>>>ಆಲೋಚನೆಗಳು ಕ್ರುತಿಗಿಳಿಯುವುದು.

ಉತ್ತರ: ಪುಟ್ಟ ಪ್ರಪಂಚ‌  antaraala ಅವರಿಂದ; ಸಮಯ: 10/7/2008 12:27 PM
ನಿಮ್ಮ ಪ್ರಪಂಚದ ಅನಾವರಣದ ಪರಿಯೆ ಮನವ ಹಾಗೆ ಸುಮ್ಮನೆ .....ಸೆಳದಿದೆ...

ಉತ್ತರ: ಪುಟ್ಟ ಪ್ರಪಂಚ‌  ಸುಬ್ರಮಣ್ಯ ಅವರಿಂದ; ಸಮಯ: 12/6/2008 7:59 PM
ಕನಸು ಕಾಣಬೇಕು ನಿಜ, ಅದು ನನಸಾಗ ದಿರುವಾಗ, ಇನ್ನೊಬ್ಬರ ಜೋತೆ ಸೇರಿ ಸಹಾಯ ಮಾಡಬೇಕು.. ಆ ಬುದ್ದಿಯನ್ನು ಕರುಣಿಸು ದೇವರೇ....


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:3
ಸದಸ್ಯರುಸದಸ್ಯರು:0
ಒಟ್ಟುಒಟ್ಟು:3

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use