ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಜನರು ತಾವು ಎಸಗುವ ತಪ್ಪುಗಳಿಗೆ ಹಚ್ಚುವ ಹಣೆಪಟ್ಟಿ 'ಅನುಭವ'.

 Print   
ತರ್ಲೆ ಮಾತು.
ಸ್ಥಳ: ಬ್ಲಾಗ್ಸ್ಅನಿಸಿಕೆ   
ಬರಹಗಾರ: Srikanth sriki10/6/2008 2:59 PM
*) ಮೊನ್ನೆ ರೇಡಿಯೋಸಿಟಿಯ ಕಾರ್ಯಕ್ರಮದಲ್ಲಿ, ಕೇಳಿದ ಪ್ರಶ್ನೆ ಇದು
*) ಮೊನ್ನೆ ರೇಡಿಯೋಸಿಟಿಯ ಕಾರ್ಯಕ್ರಮದಲ್ಲಿ, ಕೇಳಿದ ಪ್ರಶ್ನೆ ಇದು
ಬೆಂಗಳೂರಿನ ರೇಡಿಯಸ್ ( ತ್ರಿಜ್ಯ, ವ್ಯಾಸಾರ್ಧ) ಎಷ್ಟು ?
ಅದಕ್ಕೆ ನಾನು ೨೫ದೋ ೩೦ತ್ತೋ ಕಿ ಮಿ ಎಂದೆ, ಆದ್ರೆ ನಮ್ ಪರಮೇಶಿ ನಗುತ ಅಂದ,
ಬೆಂಗಳೂರಿನ ರೇಡಿಯಸ್ ಎಷ್ಟು
ರಿಯಲ್ ಎಸ್ಟೇಟ್ ದಾಹದಷ್ಟು

*) ಪ್ರಜಾವಾಣಿಯ ಮುಖಪುಟದಲ್ಲಿ ( ಅಕ್ಟೋಬರ್ ಐದು) ..
"ಶಾಸನಕ್ಕೆ ಬುಷ್ ಸಹಿ ಇಲ್ಲ: ಭಾರತದ ಲೆಕ್ಕಾಚಾರದ ನಡೆ"

ಅದಕ್ಕೆ ರೈಸ್-ಅಕ್ಕನವರು, "ಇದು ಆಡಳಿತಾತ್ಮಕ ತೊಡಕು" ಎಂದು ಸಮಜಾಯಿಶಿ ನೀಡಿದರು.
ನಮ್ ಪರಮೇಶಿ ಸಮಜಾಯಿಶಿ ಹೀಗಿದೆ,
"ನಮ್ಮವರು ಇಲ್ಲಿ ಬುಷ್ ಸಹಿ ಇಲ್ಲ ಅಂಥ ಹೇಳಿದರೆ, ಅಲ್ಲಿ ಅಮೇರಿಕದವರು
ಕೇವಲ ಮನಮೋಹನನ ಸಹಿ ಒಂದೆ ಸಾಕಾಗುವುದಿಲ್ಲ, ಸೋನಿಯಾಳ ಹಾಗು ರಾಹುಲ್ಲರ ಸಹಿ ಕೂಡ ಆಗಬೇಕು ಎಂದು ಪಟ್ಟು ಹಿಡಿದಿದ್ದಾರಂತೆ, ಆಗಲೆ ಅಣು ಒಪ್ಪಂದ ಅಧಿಕ್ರುತವಂಥೆ".

*) ಇತ್ತೀಚೆಗೆ ನಡೆದ ಕೆ ಎ ಎಸ್ ಪರೀಕ್ಷೆಯಲ್ಲಿ, ಒಂದು ಪ್ರಶ್ನೆ
-) ಅತ್ಯಂತ ದಟ್ಟವಾದ( ಡೆನ್ಸ್ ) ಗ್ರಹ ಯಾವುದು ?.
ಆಯ್ಕೆಗಳನ್ನು ಹೇಳುವುದಕ್ಕೆ ಮುನ್ನ, ಪರಮೇಶಿ ತಟ್ ಅಂಥ ಭೂಮಿ ಎಂದು ಉತ್ತರ ಹೇಳಿದ, ಅದಕ್ಕೆ ನಾನು ಲೋ ಉತ್ತರ ಸರಿಯಾಗಿದೆ, ನಿನಗೆ ಮೊದಲೆ ತಿಳಿದಿತ್ತೋ ಅಥವಾ ಊಹೆಯೋ ಎಂದು ಕೇಳಿದೆ. ಅದಕ್ಕೆ ಪರಮೇಶಿ ಅಂದ, ಎರಡು ಅಲ್ಲ "ವಾಯು ಮಾಲಿನ್ಯ"

*) ಸರ್ಕಾರದ (ದಿಟ್ಟ) ಹೇಳಿಕೆ ಸ್ವಾಗತಿಸುವಂತದ್ದು ಅಲ್ವೇನೊ ಪರಮೇಶಿ ಎಂದೆ, ಯಾವುದು ಅಂಥ ಕೇಳ್ದ, ಅದೆ ಕಣೊ
"ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇದ"....
ಅದಕ್ಕೆ ನಮ್ ಪರಮೇಶಿ ಅಂದ, ಹೌದ್ ಸುಮಾರು ಐವತ್ ವರ್ಸಾ ಆದ್ ಮೇಲ್ ಧೈರ್ಯ ಮಾಡವ್ರೇ, ಸರ್ಕಾರನ ಮೆಚ್ಚಬೇಕಾದ್ದೆ.
ಇದರೊಟ್ಟಿಗೆ ಇನ್ನು ಒಂದೆರೆಡು ಹೇಳಿಕೆಗಳನ್ನು ಹೊರಡಿಸಬೇಕು.
"ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳಿಗೆ ತೊಂದರೆ ಕೊಡಬಾರದು (ಮರೆಯಲ್ಲಿ ತೊಂದರೆ ನೀಡಿ)".
"ಸಾರ್ವಜನಿಕ ಸ್ಥಳಗಳಲ್ಲಿ ಲಂಚ ತೆಗೆದುಕೊಳ್ಳಬಾರದು ( ಮರೆಯಲ್ಲಿ ತೆಗೆದುಕೊಳ್ಳಿ)".
( ಸುಮಾರು ೬ ದಶಕಗಳಾದರು, ಮೇಲಿನ ವಿಷಯಗಳಲ್ಲಿ ಒಂದು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿರುವುದು ನಾಚಿಕೆಗೇಡಲ್ಲವೆ. ಇದರಲ್ಲಿ ಸಾರ್ವಜನಿಕರ ಪಾಲು ಇದೆ. )

*)
ಆರು ಹಿತವರು ನಿನಗೆ ಈ ಮೂವರೊಳಗೆ.
-) ರೆಡ್ಡಿ ಬ್ರದರ್ಸೋ
-) ಚಡ್ಡಿ ಬ್ರದರ್ಸೋ ( ಸದಾನಂದ ಗೌಡ, ಅನಂತ ಕುಮಾರ್ ...)
-) ಷಡ್ಕಪಿ ಬ್ರದರ್ಸೋ ( ಅಲ್ಲಿಂದಿಲ್ಲಿಗೆ ಎಗುರಿ ಬಾಜಪ ಸೇರಿರುವ ಪಕ್ಷೇತರರು)
ಈ ಮೂವರ ತಾಳಕ್ಕೆ ಕುಣಿಯದೆ ನೀ ಸರ್ಕಾರ ನಡೆಸೋ, ಆಗ ಐದು ಕೋಟಿ ಜನರಿಗೆ ನೀನೊಬ್ಬನೆ ಹಿತವಾಗುವೆ.




 | 
  
ಉತ್ತರ: ತರ್ಲೆ ಮಾತು.  ನಾಗರಾಜ್ ಅವರಿಂದ; ಸಮಯ: 10/7/2008 10:07 AM
ತುಂಬಾ ಚೆನ್ನಾಗಿದೆ ಶ್ರೀಕಾಂತ್ ಹೀಗೆ ಮುಂದುವರೆಯಲಿ...... :)

ಉತ್ತರ: ತರ್ಲೆ ಮಾತು.  ಸೌಮ್ಯ ಅವರಿಂದ; ಸಮಯ: 10/7/2008 7:36 PM
ತುಂಬ ಚೆನ್ನಾಗಿದೆ.


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:kusumakara
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:1
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:0
ಸದಸ್ಯರ ಅಕೌಂಟ್ಒಟ್ಟು:180

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use