ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ನಕ್ಷತ್ರಗಳನ್ನ ಭೂಮಿ ಮೇಲೆ ನೋಡ್ದೆ!
ಸ್ಥಳ: ಬ್ಲಾಗ್ಸ್ಕೈಲಾಸದಿಂದ...   
ಬರಹಗಾರ: shankar kailasa1/13/2008 4:31 PM
ಇದೇನು, ಹುಚ್ಚುಚ್ಚಾಗಿ ಏನೇನೋ ಬರ್ದಿದಾರೆ ಅಂತ ಅನ್ಕೊನ್ಡ್ರಾ? ನಾನ್ ಮಾತಾಡ್ತಾ ಇರೋದು ಆಮಿರ್ ಖಾನ್ ನಟಿಸಿ ನಿರ್ದೇಶಿಸಿರುವ "ತಾರೆ ಜಮೀನ್ ಪರ್" ವಿಶಯವಾಗಿ.
ಸ್ನೇಹಿತರು ಕರ್ದಾಗ, "ನಾನ್ ಬರೋಲ್ಲ. ಇದು ಮಕ್ಕಳ ಸಿನೆಮಾ" ಅಂತ ಹೇಳ್ದೆ. ಬಲವಂತ ಮಾಡಿ ಕರ್ಕೊಂಡ್ ಹೋದ್ರು. ಪಿ.ವಿ.ಆರ್ ನಲ್ಲಿ ಸಿನೆಮಾ ನೋಡಿರ್ಲಿಲ್ಲ; ಅದಕ್ಕೆ ಹೋದೆ.

ಸಿನೆಮಾ ಶುರು ಆಯ್ತು. ಹೆಸರು ತೊರ್ಸೊದಿಕ್ಕೆ ಶುರು ಮಾಡ್ರು,ಪೆದ್ಪೆದ್ದಾಗಿ. ನಿದ್ದೆ ಮಾಡೊದಿಕ್ಕೆ ಶುರು ಮಾಡ್ಬೊದು ಅಂತ ಅನ್ಕೊನ್ಡೆ.

ಆದರೆ ಆ ಹುಡುಗ, ಹರ್ಶೀಲ್, ಯಾವಗ ತನ್ನ ಚೇಷ್ಟೆ ಶುರು ಮಾಡ್ತಾನೆ, ಆಗೆ ನಾನ್ ಹುಶಾರ್ ಆದೆ. ಆ ಹುಡುಗುತನ ನೋಡ್ದಾಗ, ನಾವು ಚಿಕ್ಕ ಹುಡುಗರಾಗಿದ್ದಾಗಿನ ದಿನಗಳು ನೆನಪಿಗೆ ಬರುತ್ತೆ. ಸಂತೋಶ ಆಗತ್ತೆ. ಹರ್ಶೀಲ್ ಎಷ್ಟು ಸಹಜವಾಗಿ ಅಭಿನಯಿಸಿದ್ದಾನೆ ಅಂತೀರ. ಅದು ನಟನೆ ಅಂತ ನಮಗೆ ಅನ್ಸೋದೆ ಇಲ್ಲ! ಹಿರಿಯ ನಟರನ್ನೂ ನಾಚಿಸೊ ಹಾಗಿದೆ ಅವನ ನಟನೆ!

ಆಮಿರ್ ಖಾನ್ ಪಾತ್ರ ತೆರೆ ಮೇಲೆ ಬಂದಾಗ, ಚಿತ್ರ ಇನ್ನೂ ಕಳೆ ಏರತ್ತೆ .

ಚಿತ್ರದ ಕಥೆ ತುಂಬ ಸರಳ - ದಡ್ಡನಂತೆ ಕಾಣುವ ಒಬ್ಬ ಹುಡುಗನ ಜೊತೆ ಅವನ ತಂದೆ-ತಾಯಿ, ಶಾಲೆ, ಸಮಾಜ ಹೇಗೆ ನಡಕೊಳ್ಳತ್ತೆ; ಆ ಹುಡುಗ ತನ್ನ ಖಾಯಿಲೆಯನ್ನ, ಗುರುವಿನ ಸಹಾಯದಿಂದ, ಮೆಟ್ಟಿ ನಿಂತಾಗ ಸಮಾಜ ತೋರೊ ಪ್ರತಿಕ್ರಿಯೆ - ಇದನ್ನ ಚಿತ್ರಿಸಿದೆ. ಆದರೆ ಇಂತ ಸರಳ ಕಥೆಯನ್ನೂ ಕೂಡ ಮನಮೋಹಕವಾಗಿ ಚಿತ್ರಿಸಿದ್ದಾರೆ, ಆಮಿರ್ ಖಾನ್. ಕೆಲವು ಸನ್ನಿವೇಶಗಳಂತೂ ಕಣ್ಣನ್ನ ಹನಿಗೂಡಿಸುತ್ತೆ.

ಈ ಚಿತ್ರ ನೋಡಿದ ನಂತರ ಸ್ನೇಹಿತರಿಗೆ ನನ್ನ "ಥ್ಯಾಕ್ಸ್ " ಹೇಳ್ದೆ.

ಕನ್ನಡದಲ್ಲೂ ಕೂಡ ಇಂತ ಪ್ರಯೋಗಗಳು ನಡೀಲಿ ಅಂತ ಆಶಿಸ್ತೀನಿ.
 | 
  
ಉತ್ತರ: ನಕ್ಷತ್ರಗಳನ್ನ ಭೂಮಿ ಮೇಲೆ ನೋಡ್ದೆ!  anantshayan ಅವರಿಂದ; ಸಮಯ: 2/5/2008 1:01 AM
ಈಗಿನ ಪೀಳಿಗೆಗಳಿಗೆ, ಮೋಬೈಲು, ಇ0ಟರನೆಟ, ಎಲ್ಲಾ ಸವಲತ್ತು, ಬೇಕು, ಇದು ಪ್ರಗತಿಯ ಸ0ಕೇತ ಕೂಡಾ ಹೌದು. ಆದರೆ ನಮ್ಮ ತ0ದೆಯ ಕಾಲದಲ್ಲಿ ನೋಡಿದರೆ ಇವುಗಳ ಬಗ್ಗೆ ಚಿ0ತೆಯೆ ಇರಲ್ಲಿಲ್ಲಾ, ಆ ಕಾಲದಲ್ಲಿ ನಮ್ಮ ಭಾರತ ಸರ್ಕಾರ ಇದೆ. ನಮಗೆ ಸ್ವಾತ0ತ್ರ್ಯ ಬ0ದು 61 ವರ್ಶ ವಾದ್ರು 61 ವಯಸ್ಸಿನ್ ಹಳೇಯ ಬುದ್ದಿ ಇನ್ನು ಹೋಗಿಲ್ಲಾ. ಅದು ಇಗಿನ ಯುವಕರಿ0ದ ಮಾತ್ರಾ ಸಾಧ್ಯ.

ಉತ್ತರ: ನಕ್ಷತ್ರಗಳನ್ನ ಭೂಮಿ ಮೇಲೆ ನೋಡ್ದೆ!  ಲೋಹಿತ‌ ಅವರಿಂದ; ಸಮಯ: 3/20/2008 1:54 PM
...<br>...


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:6
ಸದಸ್ಯರುಸದಸ್ಯರು:0
ಒಟ್ಟುಒಟ್ಟು:6

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use