ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಜನರು ತಾವು ಎಸಗುವ ತಪ್ಪುಗಳಿಗೆ ಹಚ್ಚುವ ಹಣೆಪಟ್ಟಿ 'ಅನುಭವ'.

 Print   
ನಿಮ್ಮ ಜೀವನದಲ್ಲಿ ನೆಮ್ಮದಿ ಹೆಚ್ಚಿಸುವ ವಿಧಾನಗಳು
ಸ್ಥಳ: ಬ್ಲಾಗ್ಸ್ನನಗೆ ತೋಚಿದ್ದು   
ಬರಹಗಾರ: ನಾಗರಾಜ್ megarajnaga9/19/2008 2:57 PM
ಜೀವನ ಸರಳವಾಗಿದ್ದಷ್ಟೂ ನೆಮ್ಮದಿ ಹೆಚ್ಚುತ್ತದೆ. ಹಾಗೆ ಜೀವನವನ್ನು ಸರಳಗೊಳ್ಳಿಸುವ ವಿಧಾನ ಇಲ್ಲಿದೆ!

1. ಇಷ್ಟವಿಲ್ಲದ ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ಹೆಚ್ಚು ತೊಡಗಿಸಿಕೊಳ್ಳಬೇಡಿ.
2. ಎಲ್ಲಾ ಕೆಲಸವನ್ನು ಪರ್ಪೆಕ್ಟ್ ಅಥವಾ ನಿಖರವಾಗಿ ಮಾಡಲು ಹೋಗಬೇಡಿ.
3. ಮನೆಯನ್ನು ಸ್ವಚ್ಚಗೊಳಿಸುವ ಕೆಲಸವನ್ನು ಸರಳವಾಗಿಸಿಕೊಳ್ಳಿ. ಹಾಗು ಅದನ್ನು ಪ್ರತಿ ಬಾರಿಯೂ ಅನುಸರಿಸಿ.
4. ಫೋನ್, ವಾಟರ್, ಕ್ರೆಡಿಟ್ ಕಾರ್ಡ್ ಇತ್ಯಾದಿಗಳಿಗೆ ಆನ್ ಲೈನ್ ನಿಂದ ಬಿಲ್ಲು ಪಾವತಿಸುವುದನ್ನು ರೂಡಿಸಿಕೊಳ್ಳಿ. ಇದು ನಿಮ್ಮ ಸಮಯ ಉಳಿಸುತ್ತದೆ. ಅನಗತ್ಯವಾಗಿ ತಡವಾಗಿದ್ದಕ್ಕೆ ದಂಡ ಕಟ್ಟುವುದು ತಪ್ಪುತ್ತದೆ.
5. ನಿಮ್ಮ ಹಾಡು, ಚಲನಚಿತ್ರ, ಪುಸ್ತಕ ಇತ್ಯಾದಿ ಸಂಗ್ರಹಗಳಲ್ಲಿ ನಿಮಗೆ ತುಂಬ ಇಷ್ಟವಾದುದನ್ನು ಮಾತ್ರ ಇಟ್ಟುಕೊಳ್ಳಿ ಉಳಿದದ್ದನ್ನು ಬಿಟ್ಟು ಬಿಡಿ.
6. ನಿಮ್ಮ ಪರ್ಸ್ ಅನ್ನು ಕ್ಲೀನ್ ಮಾಡಿ. ಅದರಲ್ಲಿ ಅನಗತ್ಯವಾದುದನ್ನು ತೆಗೆದು ಬಿಡಿ.
7. ನಿಮಗೆ ಬೇಡವಾದ ಪೋಸ್ಟ್ ಗಳನ್ನು ನಾಶಪಡಿಸಿ. ಬೇಡವಾದ ಕಾಲ್, ಎಸ್. ಎಂ.ಎಸ್, ಮೇಲ್ ಗಳ ಮೇಲೆ ಸಮಯ ವ್ಯರ್ಥ ಮಾಡದಿರಿ.
8. ನಿಮ್ಮ ವಾರ್ಡ್ ರೋಬ್ ಅನ್ನು ನೀಟಾಗಿ ಇಟ್ಟುಕೊಳ್ಳಿ.
9. ನೀವು ಉಪಯೋಗಿಸದ ಮೇಲ್ ಅಥವಾ ಸೋಶಿಯಲ್ ನೆಟ್ ವರ್ಕ್ ಅಕೌಂಟ್ ಅನ್ನು ಅಳಿಸಿಹಾಕಿ.
10. ಜಾಹೀರಾತುಗಳು ನಿಮ್ಮ ಫೋನ್ ಗೆ ಬರುತ್ತಿದ್ದರೆ ಅವರಿಗೆ ಇನ್ನು ಮುಂದೆ ಕಾಲ್ ಮಾಡಬಾರದೆಂದು ತಿಳಿಸಿ.
11. ನಿಮ್ಮ ಕಾರು ಹಾಗು ಬೈಕುಗಳ ಸರ್ವೀಸ್ ಅನ್ನು ಪ್ಲಾನ ಮಾಡಿ. ಅದರ ಪ್ರಕಾರ ಮಾಡುತ್ತಿರಿ.
12. ನಿಮ್ಮ ಬಿಲ್, ಡಾಕ್ಯುಮೆಂಟ್ ಗಳ ಫೈಲ್ ಮಾಡಿ.
13. ಪ್ರತಿದಿನ ಬೆಳಿಗ್ಗೆ ಉತ್ತಮ ತಿಂಡಿಯನ್ನು ತಿನ್ನಿ.
14. ನಿಮಗೆ ಶಾಂತಿ, ನೆಮ್ಮದಿ ಬೇಕಾದಾಗ ನಿಮ್ಮ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ.
15. ಒಂದು ಉತ್ತಮ ಗುರಿ ಇಟ್ಟ ಕೊಂಡು ಅದನ್ನು ಸಾಧಿಸಲು ಶ್ರಮ ಪಡಿ.
16. ನಿಮ್ಮ ಕೆಟ್ಟ ಚಟಗಳನ್ನು ನಿಯಂತ್ರಿಸಲು ಪ್ರಯತ್ನ ಪಡಿ.
17. ಜಾಹೀರಾತು ನೋಡುವದನ್ನು, ಓದುವದನ್ನು ಕಡಿಮೆ ಮಾಡಿ.
18. ಸಂತೋಷಕ್ಕಾಗಿ, ಮನೋರಂಜನೆಗಾಗಿ ಓದಿ.
19. ಯಾವಾಗಲೂ ಒಂದು ಕೆಲಸವನ್ನು ಒಮ್ಮೆ ಮಾಡಿ.
20. ಸಹಾಯಕ್ಕಾಗಿ ಇನ್ನೊಬ್ಬರನ್ನು ಕೇಳಲು ಸಂಕೋಚ ಪಡದಿರಿ.
 | 
  
ಉತ್ತರ: ನಿಮ್ಮ ಜೀವನದಲ್ಲಿ ನೆಮ್ಮದಿ ಹೆಚ್ಚಿಸುವ ವಿಧಾನಗಳು  ಗುರುಪ್ರಸಾದ್ ಅವರಿಂದ; ಸಮಯ: 9/19/2008 7:25 PM
ಸರಳ ಸೂತ್ರಗಳು ನಿಜಕ್ಕೂ ಚೆನ್ನಾಗಿದೆ.<br>

ಉತ್ತರ: ನಿಮ್ಮ ಜೀವನದಲ್ಲಿ ನೆಮ್ಮದಿ ಹೆಚ್ಚಿಸುವ ವಿಧಾನಗಳು  ಶೈಲ‌ ಅವರಿಂದ; ಸಮಯ: 10/28/2008 12:40 PM
ಬಹಳ ಚೆನಾಗಿದೆ

ಉತ್ತರ: ನಿಮ್ಮ ಜೀವನದಲ್ಲಿ ನೆಮ್ಮದಿ ಹೆಚ್ಚಿಸುವ ವಿಧಾನಗಳು  ನಾರದ‌ ಅವರಿಂದ; ಸಮಯ: 10/30/2008 4:01 AM
ನಿಮ್ಮಿಂದ ತಪ್ಪಾಗಿದ್ದರೆ ಒಪ್ಪಿಕೊಳ್ಳಲು ಹಿಂಜರಿಯದಿರಿ.

ಉತ್ತರ: ನಿಮ್ಮ ಜೀವನದಲ್ಲಿ ನೆಮ್ಮದಿ ಹೆಚ್ಚಿಸುವ ವಿಧಾನಗಳು  ಕನ್ನಡಿಗ‌ ಅವರಿಂದ; ಸಮಯ: 11/10/2008 3:42 PM
ಇದು ವಿಸ್ಮಯ ನಗರಿ ತಾಣದಲ್ಲಿ ಬಂದದ್ದು. ಅಲ್ಲಿನಿಂದ ಕಾಪಿ ಮಾಡುವದು ಅಪ‌ರಾದ.


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:kusumakara
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:1
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:0
ಸದಸ್ಯರ ಅಕೌಂಟ್ಒಟ್ಟು:180

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use