ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಪಾವಂಜೆಯ ಆಷಾಢದ ಮಳೆ
ಸ್ಥಳ: ಬ್ಲಾಗ್ಸ್ರಘು ಚಿಂತನೆ   
ಬರಹಗಾರ: raghava pavanje9/15/2008 8:22 PM
ನಿತ್ಯ ಹರಿ ಹೊಯ್ಯುವ ಮಳೆಗೆ ಛತ್ರಿಯ ಭಯವೇ ?
ಸುಬ್ರಾಯ ಭ‌ಟ್ಟರ ಒಬೀರಾಯನ ಯುಗದ ಮರದ ಕೊಡೆ
ಮುರಿದ ಕಾಮನಬಿಲ್ಲಾಗಿದೆ..
ಮಗಳು ವಾಸಂತಿ ಬೆಳೆಸಿದ ಜಾಜಿ ಮಲ್ಲಿ
ಕೊಟ್ಟಿಗೆಯ ಕಾಮಧೇನು ಬಿಡಿಸಿದ ಸಗಣಿಯ ರಂಗವಲ್ಲಿ ನೀರುಪಾಲಾಗಿದೆ..
ಭಟ್ಟರ ಇಳಿಸಂಜೆಯ ಪಾರಾಯಣಕ್ಕೆ
ಸತ್ಯಭಾಮೆ ರಾಜೀವಮ್ಮ ಗುನುಗುವ ಶೋಭನದ ಪದಗಳಿಗೆ
ಆಕಾಶವಾಣಿಯಲ್ಲಿ ಧಿಗಣಿಸುವ ತಾಳಮದ್ದಲೆಯ ಚಂಡೆಮೃದಂಗಗಳ ಧಿಕ್ ತಕಿಟಕ್ಕೆ
ಆರ್ಭಟಿಸಿ ಹೆಜ್ಜೆಹಾಕುವ ಮುಸ್ಸಂಜೆ ಮಳೆ.. ಧೂಮ್ರಾಕ್ಷನ ರಂಗಪ್ರವೇಶವೋ..
ಅಹೋರಾತ್ರಿ ಜೀರುಂಡೆಗಳ ಸದ್ದು ಗದ್ದಲಗಳನ್ನ ಲೆಕ್ಕಿಸದೆ
ಮುಗಿಲು ಧಾರಾಕಾರ ನದಿಯು ಹರೋಹರ‌
ಪ್ರಹಾರವೋ ಪ್ರವಾಹವೋ !
ಹಿನ್ನೀರಿನ ಕೆಂಪು ಕಡಲ ಸೆರಗಿನಲ್ಲಿ ಇಳೆಯ ಕೊಳಕನ್ನೆಲ್ಲಾ ನಿವಾಳಿಸಿ ತೆಗೆವ‌
ಅಲೆಗಳ ಭೋರ್ಗರೆತ‌
ಬಲೆಗೆ ಸಿಕ್ಕಿದ ಸಿಗಲಾರದ ಜೀವ‌ ರಾಶಿಗಳೆಲ್ಲಾ ಅಯೋಮಯ‌
ಹಸಿರೋ ಉಸಿರೋ ಅಲ್ಲಾ ಭೂದೇವಿಯ ಸ್ರವಿಸಿದ ಬಸಿರೋ
ನೇಸರನಿಗೆ ಭುವಿಯತ್ತ ಇಣುಕಿ ನೋಡಲೂ ಬಿಡದ ಮೋಡಗಳ ಮಿಂಚು ಸಂಚುಗಳ ನಡುವೆ
ಗುಡುಗುಡಿಸಿ ಸುರಿಯುವ ಹೊಯ್ಯೋ ಹೊಯ್ಯೋ ಮಳೆ
ನದಿಗಡಲ ನಡುವಿನಂತರವ ಕತ್ತರಿಸುವ ಹುನ್ನಾರವೋ..
ಭೂದೇವಿಗೆ ಕೆನ್ನೀರಿನ ಅಭಿಷೇಕದ ಬಾನು ಹೊತ್ತ ಹರಕೆಯ ಚಿತ್ತಾರವೋ..
ವಟಗುಟ್ಟುವ ಕ‌ಪ್ಪೆಗ‌ಳ‌ ಆರ್ತನಾದ‌ವೋ ಅಥವಾ ಆನ‌ಂದ‌ದ‌ ಸುಗ‌ಮ‌ ಸ‌ಂಗೀತ‌ದ‌ ಅತಿರೇಕ‌ವೋ..
ವಾಸ‌ಂತಿ ಮಾತ್ರ ಹೊದಿಕೆಯೊಳಗೆ ಮುದುಡಿ ಮಲಗಿಕೊಂಡು ಮಳೆರಾಯನ ರೌದ್ರ ಜೋಗುಳದಿ ನಿದ್ರಾದೇವಿಯ ಮಡಿಲಲ್ಲಿ ನಿನ್ನೆ ನಾಳೆಗಳನ್ನರಿಯದ ಮುಗುದ ಬಾಲೆ..



Copyright ©2008 Pavanje Raghavendra Bhat
 | 
  

ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use