ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಕರ್ನಾಟಕ ದ್ವಜದ ಅರ್ಥವೇನು?
ಸ್ಥಳ: ಬ್ಲಾಗ್ಸ್ಸುಮ್ನೆ ಸುದ್ದಿಕನ್ನಡ ಕನ್ನಡ‌   
ಬರಹಗಾರ: raju1/6/2008 11:08 PM
ನೀವೆಲ್ಲರೂ ಕರ್ನಾಟಕದ ದ್ವಜವನ್ನು ನೋಡಿರುತ್ತೀರಿ. ಅ ದ್ವಜದ ಬಣ್ಣ ಹಳದಿ ಮತ್ತು ಕೆಂಪು. ಅದರ ಅರ್ಥ‌ವೇನೆಂದು ನಿಮಗೆ ಗೊತ್ತೇ? ತಿಳಿದುಕೊಳ್ಳಬೇಕಾದರೆ ಮುಂದೆ ಓದಿ.
ನಾವು ನೋಡುವ ಕರ್ನಾಟಕದ ದ್ವಜ ನಿಜವಾಗಲೂ ನಮ್ಮ ರಾಜ್ಯದ ದ್ವಜವೇ? ನಮ್ಮ ಭಾರತ ದೇಶದಲ್ಲಿ ಒಂದೇ ದ್ವಜ ಇರುವುದು. ಅದು ಕೇಸರಿ, ಬಿಳಿ, ಹಸಿರು ಹಾಗು ನಡುವೆ ಅಶೋಕ ಚಕ್ರವಿರುವ ರಾಷ್ಟ್ರ ದ್ವಜ. ಯಾವ ರಾಜ್ಯಗಳಿಗು ಅಧಿಕೃತವಾಗಿ ದ್ವಜವಿಲ್ಲ. ಆದರೆ ನಮ್ಮ ಕರ್ನಾಟಕದಲ್ಲಿ ಮಾತ್ರ ಒಂದು ಸುಂದರವಾದ ದ್ವಜವಿದೆ. ಅದು ನಮ್ಮ ಕರ್ನಾಟಕವನ್ನು ಅಷ್ಟೇ ಅಲ್ಲ, ನಮ್ಮ ಅಭಿಮಾನವನ್ನೂ ವ್ಯಕ್ತಪಡಿಸುತ್ತದೆ. ಆದರೆ ಈ ದ್ವಜ ಹೇಗೆ ಬಂತು?

೧೯೬೫ ರಲ್ಲಿ ಕನ್ನಡ ಪಕ್ಷವನ್ನು ಮಾನ್ಯ ರಾಮಮೂರ್ತಿಯವರು ಸ್ಥಾಪಿಸಿದ್ದರು. ಈ ಪಕ್ಷದ ಗುರುತು ಈಗಿರುವ ಈ ಕರ್ನಾಟಕದ ದ್ವಜ. ಅವರ ಪಕ್ಷ ಅಷ್ಟು ಕಾಲ ಉಳಿಯಲಿಲ್ಲವಾದರೂ ಅವರ ದ್ವಜ ಕರ್ನಾಟಕದಲ್ಲಿ ಉಳಿಯಿತು. ಜನರ ಮನಸ್ಸಿನಲ್ಲಿ ಹಾಗೂ ಭಾವನೆಗಳಲ್ಲಿ ಅದು ಕರ್ನಾಟಕದ ಸ‍ಂಕೇತವಾಗಿ ಹಾಸು ಹೊಕ್ಕಿತು. ಈ ದ್ವಜವನ್ನು ರಾಜ್ಯೊತ್ಸವದಲ್ಲಿ, ಚಳುವಳಿಗಳಲ್ಲಿ, ಬೆಂಗಳೂರಿನ ಆಟೊಗಳಲ್ಲಿ ಉಪಯೋಗಿಸುತ್ತಿದ್ದಾರೆ. ನಮ್ಮ ನಾಡಿನ ಒಗ್ಗಟ್ಟಿಗೆ ಈ ದ್ವಜವು ಕಾರಣವಾಗಿದೆ.

ನಮ್ಮ ರಾಷ್ಟ್ರ ದ್ವಜದ ಹಾಗೆಯೇ ನಮ್ಮ ದ್ವಜಕ್ಕೂ ಒಂದು ಅರ್ಥವಿದೆ. ಈ ದ್ವಜದ ಬಣ್ಣಗಳ ಅರ್ಥವೇನೆಂದರೆ, ಹಳದಿ ಅರಿಶಿನ ಹಾಗೂ ಕೆಂಪು ಕುಂಕುಮವನ್ನು ಪ್ರತಿಬಿಂಬಿಸುತ್ತದೆ.

ಈಗ ನಿಮಗೆ ನಮ್ಮ ಕರ್ನಾಟಕ ದ್ವಜ ಸಂಕ್ಷಿಪ್ತ ಮಾಹಿತಿ ತಿಳಿದಿದೆಯಲ್ಲವೇ. ಈ ವಿಷವದ ಬಗ್ಗೆ ನಿಮಗೇನಾದರೂ ಅನಿಸಿಕೆಗಳಿದ್ದರೆ ಅಭಿಪ್ರಾಯವನ್ನು ಬರೆಯಿರಿ.
 | 
  
ಉತ್ತರ: ಕರ್ನಾಟಕ ದ್ವಜದ ಅರ್ಥವೇನು?  ಭಾಸ್ಕರ‌ ಅವರಿಂದ; ಸಮಯ: 1/7/2008 5:25 AM
ನಮ್ಮ ಕರ್ನಾಟಕ ಧ್ವಜದ ಹಿಂದೆ ಇಷ್ಟೆಲ್ಲಾ ಕಥೆ ಇದೆ ಅಂತ ಗೊತ್ತಿರ್ಲ್ಲಿಲ್ಲ. ನಿಮ್ಮಿಂದ ಇವತ್ತು ಒಂದು ಹೊಸ ವಿಚಾರ ತಿಳ್ಕೊಂಡೆ. ತುಂಬ ಥ್ಯಾನ್ಕ್ಸ್ ಗುರು!

ಉತ್ತರ: ಕರ್ನಾಟಕ ದ್ವಜದ ಅರ್ಥವೇನು?  ವೆಂಕಟೇಶ‌ ಅವರಿಂದ; ಸಮಯ: 1/8/2008 1:13 PM
ಇಲ್ಲಿ ಚಿಕ್ಕದಾಗಿ ಚೊಕ್ಕದಾಗಿ ತಿಳಿಸಿರುವುದಕ್ಕೆ ಧನ್ಯವಾದಗಳು. ನಾನೂ ಕರ್ನಾಟಕದ ಧ್ವಜದ ಬಣ್ಣಗಳನ್ನು ಹೀಗೆಂದು ಊಹಿಸಿದ್ದೆ. ಅದು ಸರಿಯೆಂದು ತಿಳಿದು ಸಂತೋಷವಾಯ್ತು.

ಉತ್ತರ: ಕರ್ನಾಟಕ ದ್ವಜದ ಅರ್ಥವೇನು?  ಅಕಷಯಶೇಖರ್ ಅವರಿಂದ; ಸಮಯ: 1/8/2008 10:38 PM
ಒಳೆಯ ವಿಷಯ ತಿಳಿದುಕೊ೦ಡ ಈ ದಿನ‌

ಉತ್ತರ: ಕರ್ನಾಟಕ ದ್ವಜದ ಅರ್ಥವೇನು?  manju.s ಅವರಿಂದ; ಸಮಯ: 1/8/2008 11:44 PM
ಇದರ ಅರ್ಥ ನಮಗೆ ಗೊತ್ತಿರಲಿಲ್ಲ ಇದನ್ನು ತಿಲಿಸಿದ್ದಕ್ಕೆ ತು0ಬ ದನ್ಯವಾದಗಳು.....

ಉತ್ತರ: ಕರ್ನಾಟಕ ದ್ವಜದ ಅರ್ಥವೇನು?  ಚಂದ್ರು ಅವರಿಂದ; ಸಮಯ: 1/9/2008 8:01 AM
ವಿಷಯವನ್ನು ತಿಳಿಸಿದ್ದಕ್ಕೆ ತುಂಬ ದನ್ಯವಾದಗಳು

ಉತ್ತರ: ಕರ್ನಾಟಕ ದ್ವಜದ ಅರ್ಥವೇನು?  ಪ್ರಸನ್ನ ಕುಮಾರ್ ಅವರಿಂದ; ಸಮಯ: 1/9/2008 8:51 AM
ಆರ್ಥ ಗೊತ್ತಿರಲಿಲ್ಲ, ತಿಳಿಸಿದ್ಡಾಕ್ಕಾಗಿ ಧನ್ಯವಾದಗಳು.

ಉತ್ತರ: ಕರ್ನಾಟಕ ದ್ವಜದ ಅರ್ಥವೇನು?  ಅನ್ನಪೂರ್ಣಮ್ಮ ಅವರಿಂದ; ಸಮಯ: 1/11/2008 9:42 AM
ಕರ್ನಾಟಕ ಧ್ವಜದ ಮಾಹಿತಿ ತಿಳಿದು ನಿಜಕ್ಕೂ ಸಂತೋಷವಾಯಿತು. <br>

ಉತ್ತರ: ಕರ್ನಾಟಕ ದ್ವಜದ ಅರ್ಥವೇನು?  ಮೋಹನ್ ಕುಮಾರ್ ವೈ ಎಸ್ ಅವರಿಂದ; ಸಮಯ: 1/15/2008 11:53 PM
ಆರ್ಥ ಗೊತ್ತಿರಲಿಲ್ಲ, ತಿಳಿಸಿದ್ಡಾಕ್ಕಾಗಿ ಧನ್ಯವಾದಗಳು ಮತ್ತು ನನಗೆ ಇದನ್ನು ತಿಲಿದು ನಿಜಕ್ಕೂ ಸಂತೋಷವಾಯಿತು.

ಉತ್ತರ: ಕರ್ನಾಟಕ ದ್ವಜದ ಅರ್ಥವೇನು?  dotc ಅವರಿಂದ; ಸಮಯ: 1/16/2008 6:44 AM
ರಾಜು ಅವ್ರೆ ತುಂಬ ಒಳ್ಳೆ ವಿಷಯವನ್ನು ತಿಳಿಸಿ ಕೊಟ್ಟಿದಕ್ಕೆ ಧನ್ಯವಾದಗಳು.ಹೀಗೆ ಒಳ್ಳೆ ಒಳ್ಳೆ ವಿಷಯಗಳನ್ನು ಬರಿತಾಯಿರಿ !.

ಉತ್ತರ: ಕರ್ನಾಟಕ ದ್ವಜದ ಅರ್ಥವೇನು?  anantshayan ಅವರಿಂದ; ಸಮಯ: 2/4/2008 11:58 AM
ಧನ್ಯವಾದಗಳು,<br><br>ನನಗೆ ಧ್ವಜದ ಅರ್ಥ ಗೊತ್ತಿತ್ತಾದರು ಅದರ ಸ0ಸ್ಥಾಪರು ಗೊತ್ತಿರಲ್ಲಿಲಾ.


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:5
ಸದಸ್ಯರುಸದಸ್ಯರು:0
ಒಟ್ಟುಒಟ್ಟು:5

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use