ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ತರ್ಲೆ ಮಾತು
ಸ್ಥಳ: ಬ್ಲಾಗ್ಸ್ಅನಿಸಿಕೆ   
ಬರಹಗಾರ: Srikanth sriki8/13/2008 11:07 AM
1) ಒಲಿಂಪಿಕ್ ಕೂಟದ ಆರಂಭ ಸಮಾರಂಭದ ದಿನದಂದು, ಏಳು ವರುಷದ ಹುಡುಗಿಯೆಬ್ಬಳು ಎಲ್ಲರೆದುರಿಗೆ ಹಾಡು ಹಾಡಬೇಕಾಗಿತ್ತು, ಕಾಣಲು ಸುಂದರವಾಗಿಲ್ಲದ ಕಾರಣ, ಅವಳ ಬದಲು ಮತ್ತೊಬ್ಬ ಸುಂದರವಾದ ಅದೇ ವಯಸ್ಸಿನ ಹುಡುಗಿಯೊಬ್ಬಳು ತುಟಿ ಹೊಂದಾಣಿಕೆ ಮಾಡಿದಳಂತೆ. (ಛೇ ಎಂಥಹ ತಪ್ಪು ಸಂದೇಶ ಪ್ರಪಂಚಕ್ಕೆ. ಅಂತರಂಗ ಸೌಂದರ್ಯಕ್ಕೆ ಬೆಲೆಯಿಲ್ಲ ಎಂದು ಸಾರಿದಂತಿದೆ.)
......
ಇದಕ್ಕೆ ನಮ್ಮ ಪರಮೇಶಿ "ನಮ್ಮ ದೇಶದ ಉನ್ನತ ಮಟ್ಟದಲ್ಲಿ ಇದು ನಡೆಯುತ್ತಿದೆಯಲ್ಲ" ಅಂದ, ಅದಕ್ಕೆ ನಾನು ಎನೋ ಪರಮೇಶಿ ಇದರ ಅರ್ಥ ಅಂದೆ, ಅದಕ್ಕೆ ಅವನು,
ಉದಾ: ಕೆಲವೊಮ್ಮೆ ಸೋನಿಯಾ ಹಾಡುವಳು, ಮನಮೋಹನ ತುಟಿ ಹೊಂದಾಣಿಕ ಮಾಡುವನು.
ಮತ್ತೊಮ್ಮೆ ಅಮರ್ ಸಿಂಗ್ ಹಾಡುವನು, ಸೋನಿಯಾ ತುಟಿ ಹೊಂದಾಣಿಕ ಮಾಡುವಳು.
ನಮ್ಮ ರಾಜ್ಯದಲ್ಲಿ,
*)ಹಾಡುವುದು ರೆಡ್ದಿ, ತುಟಿಯಾಡಿಸುವುದು ಯೆಡ್ದಿ
*)ಕೆಲವೊಮ್ಮೆ ಸದಾನಂದ ಗೌಡರು ಯೆಡ್ದಿಯ ಬಳಿ ಬೇಸರದ ಹಾಡನ್ನು ಹಾಡುವರು, ಅದಕ್ಕೆ ಯೆಡ್ಡಿಯದು ರೆಡಿಮೇಡ್ ಉತ್ತರ, ಕೇವಲ ತುಟಿಯಾಡಿಸುವುದು.
*)ಇನ್ನು ಕೆಲವರು ಅದೇ ಹಳೆಯ ಹಾಡುನ್ನು, "ಮಣ್ಣಿನ ಮಗ ನಾನು" ಹಾಡಿ ಹಾಡಿ, ಈಗವರಿಗೆ ಹಾಡು, ಬರಿಯ ತುಟಿಯಾಡಿಸಿದಂತೆ.

ಒಟ್ಟಿನಲ್ಲಿ ತುಟಿಯಾಡಿಸುವವರೆ ಹಾಡಿದರೆ ಚೆನ್ನ.

2) ಮೊನ್ನೆ ಪ್ರಜವಾಣಿಯ ಮುಖಪುಟದಲ್ಲಿ "ಜಿಹಾದಿ ಸಾಹಿತ್ಯ ವಶ" ಎಂದಿತ್ತು.
ಅದಕ್ಕೆ ನಮ್ಮ ಪರಮೇಶಿ, ಇದರೊಟ್ಟಿಗೆ
"ಕನ್ನಡ ಅತಿ ಆಧೂನಿಕ ಸಿನಿ ಸಾಹಿತ್ಯ ವಶ" ಎಂದು ಇದ್ದಿದ್ದರೆ ಇನ್ನೂ ಚೆನ್ನ ಅಂದ.

3) "ಬೆಂದರೆ ಬೇಂದ್ರೆ"(ಅಷ್ಟು ಸುಲಭವಾಗಿ ಬೇಂದ್ರೆ ಆಗುವದಕ್ಕೆ ಆಗೊಲ್ಲ ಅಂಥ), ಅದಕ್ಕೆ ನಮ್ ಪರಮೇಶಿ ಹೇಳ್ದಾ,
ಬೆಂದರೆ ಬೇಂದ್ರೆ
ಇಲ್ಲದಿದ್ದರೆ ದೇಕುರೇ
( ಅದೇ ಸಾರ್,ದೇಕುರೇ,ದೇವೆಗೌಡ ಕುಮಾರಣ್ಣ ರೇವಣ್ಣ).

4) ನಮ್ಮ ಕರ್ನಾಟಕದ ಶಾಸಕರೆಲ್ಲ ಶರಣರಾದರೆ ....., ಅಲ್ಲೆ ಇದ್ದ ಪರಮೇಶಿ, ಥೂ ಬಿಡ್ತು ಅನ್ನಿ, ಅವರೆಲ್ಲ ಶರಣಾ(ರಾ)ಗಿದ್ದಾರೆ ಆಗಲೆ, ಎಂ.ಎಲ್.ಎ ಸೀಟಿಗೆ.
 | 
  
ಉತ್ತರ: ತರ್ಲೆ ಮಾತು  ಮಧು ಅವರಿಂದ; ಸಮಯ: 8/13/2008 11:22 AM
ಚನಗಿದೆ.

ಉತ್ತರ: ತರ್ಲೆ ಮಾತು  sailasree ಅವರಿಂದ; ಸಮಯ: 8/13/2008 12:44 PM
ತು೦ಬ ಸರಿ.........

ಉತ್ತರ: ತರ್ಲೆ ಮಾತು  ಮ‌ಂಜುನಾಥ್ ಬಿ ಲ್ ಅವರಿಂದ; ಸಮಯ: 8/13/2008 2:39 PM
ಬ್ಲಾಗ್ ಸೂಪ್ರರ್ ಆಗಿದೆ, ಮುಂದುವರಸಿ


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use