ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಕನ್ನಡ ಜನಪದ ಕಲೆಗಳು
ಸ್ಥಳ: ಬ್ಲಾಗ್ಸ್ನನಗೆ ತೋಚಿದ್ದು   
ಬರಹಗಾರ: ನಾಗರಾಜ್ megarajnaga7/23/2008 5:52 PM
ಜನಪದ ಸಾಹಿತ್ಯದಲ್ಲಿ ಗೀತೆಯೊಂದು ಪ್ರಮುಖ ಪ್ರಕಾರ. ಅದು ಮುಟ್ಟದ ವಸ್ತುವಿಲ್ಲ, ಸಂಸಾರದ ಮುಖಗಳೆಲ್ಲವೂ ಇಲ್ಲಿ ಚಿತ್ರಣಗೊಂಡಿವೆ. ತಾಯಿ ಮಗಳು, ಅತ್ತೆ ಸೊಸೆ, ಅಣ್ಣ ತಂಗಿ, ಅತ್ತಿಗೆ ನಾದಿನಿ ಮೈದುನರು, ಸವತಿ ಓರಗಿತ್ತಿಯರು, ಪತಿ ಪತ್ನಿಯರು, ತಂದೆ ಮಗ, ತವರು ಸೂಳೆಗಾರಿಕೆ, ಹೆಣ್ಣು ಜನ್ಮ, ಮಕ್ಕಳು ಮೊಮ್ಮಕ್ಕಳು, ಬಸಿರು ಬಯಕೆ, ಗೆಣೆಯ ಗೆಣೆತಿಯರು, ಸಾವು ನೋವು, ಬಾಣಂತಿತನ, ನೆಂಟರು, ಬಂಜೆತನ, ಪ್ರೇಮ ದ್ವೇಷ, ಮುನಿಸು ಜಗಳ ಹೀಗೆ ನೂರಾರು ಸಂಗತಿಗಳು ಇಡೀ ಹಳ್ಳಿಯ ಬದುಕಿನ ಉಸಿರು ಹಾಡಾಗಿ ಹೊಮ್ಮುತ್ತವೆ. ಹಾಡಿನ ಜೋಡಿಯಿಲ್ಲದೇ ಯಾವ ಕೆಲಸವೂ ಸಾಗುವುದಿಲ್ಲ. ಕುಟ್ಟುವುದು, ಬೀಸುವುದು, ಮೊಸರು ಕಡೆಯುವುದು, ಅಡಿಕೆ ಸುಲಿಯುವುದು, ಹಚ್ಚೆ ಹೊಯ್ಯುವುದು, ಮಗು ಮಲಗಿಸುವುದು, ಯಾವ ಕೆಲಸವೇ ಆಗಲಿ ಹಾಡು ಕಲಿತರೆ ಸರಾಗವಾಗಿ ಆಗುತ್ತದೆ. ಬೇಸಾಯ, ನೇಯ್ಗೆ ಮೊದಲಾದ ವೃತ್ತಿಗಳ, ಕುಣಿತಗಳ ಒಂದು ಅವಿಭಾಜ್ಯ ಅಂಗವಾಗಿ ಹಾಡು ಬರುತ್ತದೆ. ಬಿತ್ತನೆ ಮಾಡುವಾಗ, ಕೂರಿಗೆ ಹೊಡೆಯುವಾಗ, ನಾಟಿ ಹಾಕುವಾಗ, ಕಳೆ ಕೀಳುವಾಗ, ಹೊಲ ಕೊಯ್ಯುವಾಗ, ಕಾಳು ಒಕ್ಕುವಾಗ, ಮಣ್ಣು ಹೊರುವಾಗ, ಗಾಡಿ ಹೊಡೆಯುವಾಗ ಸಾಮೂಹಿಕವಾಗಿಯೊ, ವೈಯುಕ್ತಿಕವಾಗಿಯೊ ಗೀತಾಪ್ರವಾಹ ಹರಿಯಲೇ ಬೇಕು. ಹಬ್ಬ ಹರಿದಿನ ಮದುವೆಯೊಸಗೆ ಯಾವುದೇ ಶುಭಕಾರ್ಯವಾಗಲೀ ಶಾಸ್ತ್ರವೇ ಆಗಲೀ, ದೇವರಕಾರ್ಯವೇ ಆಗಲೀ ಹಾಡಿನಿಂದ ಮೊದಲಾಗಬೇಕು. ಹಾಡಿನಿಂದಲೇ ಅಂತ್ಯ ವಾಗಬೇಕು. ಬಹುತೇಕವಾಗಿ ಜನಪದಗೀತೆಗಳೆಲ್ಲ ಕ್ರಿಯಾತ್ಮಕವಾದುವು; ಯಾವುದಾದರೊಂದು ಕ್ರಿಯೆಯ ಪ್ರೇರಣೆಯಿಂದ ಉಗಮಗೊಳ್ಳುತ್ತವೆ. ಕ್ರಿಯೆಯನ್ನು ಸೃಜನಾತ್ಮಕವನ್ನಾಗಿ ಮಾಡುತ್ತವೆ. ಹಳ್ಳಿಗರ ಆಸರು ಬೇಸರುಗಳಿಗೆ ಇವು ಹಿರಿಮದ್ದುಗಳಾಗಿವೆ.
ಜನಪದ ಕುಣಿತ ಮತ್ತು ಬಯಲಾಟಗಳು
* ಡೊಳ್ಳು ಕುಣಿತ
* ಯಕ್ಷಗಾನ
* ದೊಡ್ಡಾಟ
* ಶ್ರೀ ಕೃಷ್ಣ ಪಾರಿಜಾತ
* ಸಣ್ಣಾಟ
* ಸೋಮನ ಕುಣಿತ
* ಜಗ್ಗಲಿಗೆ ಮೇಳ
* ಕುದುರೆ ಕುಣಿತ
* ಬೀಸು ಕಂಸಾಳೆ ಕುಣಿತ
ಜನಪದ ಕರಕುಶಲ ಕಲೆಗಳು
* ತೊಗಲು ಬೊಂಬೆ ತಯಾರಿಸುವುದು
* ಹಬ್ಬಗಳಲ್ಲಿ ಬಣ್ಣಗಾರಿಕೆ ಮತ್ತು ಚಿತ್ರಗಾರಿಕೆ
* ಜನಪದ ಶೈಲಿಯ ನೇಯ್ಗೆ
* ಲಂಬಾಣಿಗರ ಕರಕುಶಲ ಕಲೆ
* ಜನಪದರ ಕಾಷ್ಠ ಉತ್ಪನ್ನಗಳು
Copyright ©2008 ನಾಗರಾಜ್ megarajnaga
 | 
  
ಉತ್ತರ: ಕನ್ನಡ ಜನಪದ ಕಲೆಗಳು  ಬಿ.ವಿ.ಎಲ್ ಅವರಿಂದ; ಸಮಯ: 7/25/2008 1:06 PM
ನಿಮ್ಮ ಸೃಜನಾತ್ಮಕ ವಿಚಾರವನ್ನು ಮೆಚ್ಚಲೇಬೇಕು......................

ಉತ್ತರ: ಕನ್ನಡ ಜನಪದ ಕಲೆಗಳು  ಚಿತ್ರ ಅವರಿಂದ; ಸಮಯ: 7/30/2008 4:37 PM
ನಾಗರಾಜ್ ರವರೆ ನಿಮ್ಮ ಬರಹಗಳು ತುಂಬಾ ಚೆನ್ನ ನಿಮ್ಮ ವಿಷಯಗಳ ಸಂಗ್ರಹಣೆಗೆ ಹ್ಯಾಟ್ಸ್ ಆಪ್

ಉತ್ತರ: ಕನ್ನಡ ಜನಪದ ಕಲೆಗಳು  ಪ್ರಸನ್ನ ಅವರಿಂದ; ಸಮಯ: 9/16/2008 10:43 AM
ತುಂಬಾ ಚೆನ್ನಾಗಿದೆ ಕಣ್ರೀ


ನಿಮ್ಮ ಹೆಸರು:
ಶೀರ್ಷಿಕೆ:
ಅಭಿಪ್ರಾಯ:
ಅಭಿಪ್ರಾಯ ಬರೆಯಿರಿ   ಇದು ಬೇಡ 

  
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use