| ಕಾವ್ಯ ಸರಪಳಿ | |
| raghava pavanje ಸಮಯ9/16/2008 8:49 PM | |
| ಇದೊಂದು ಸಣ್ಣ ಪ್ರಯತ್ನ. ಇಲ್ಲಿ ಎಲ್ಲರೂ ಕವಿತೆಯ ಮುಂದಿನ ಸಾಲನ್ನು ಬರೆಯುತ್ತಾ ಹೋಗ ಬಹುದು. ತಮ್ಮ ತಮ್ಮ ಸಾಲನ್ನು ಸೇರಿಸುವಾಗ ಆ ಹಿಂದಿನ ಸಾಲುಗಳನ್ನು ಬರೆದು ಮತ್ತೆ ಮುಂದುವರಿಸಿಕೊಂಡು ಹೋಗಬೇಕು. ಪ್ರಾರಭಿಸೋಣ ಗೆಳೆಯ ಗೆಳತಿಯರೇ......
|  | | ಅಭಿಪ್ರಾಯ (3) |
ಮುಂದೆ ಓದಿ... |
|
| ಮಿನಿಗವನ "ವಿಪರ್ಯಾಸ" | |
| raghava pavanje ಸಮಯ9/15/2008 8:28 PM | |
| ಕನಸೋ ನನಸೋ ಎಂದು ಖಾತರಿಪಡಿಸಲು ಮೈಯನ್ನು ಚಿವುಟಿಕೊಂಡು ಇದು ಕನಸಲ್ಲ ಎಂದು ಸ್ಪಷ್ಟಪಡಿಸಿಕೊಂಡಂತೆ ನಿದ್ರೆಯಲ್ಲಿ ಕನಸು ಬೀಳಬೇಕೇ !!!
|  | | ಅಭಿಪ್ರಾಯ (2) |
|
|
| ಮಿಡಿಗವನ | |
| raghava pavanje ಸಮಯ9/15/2008 8:28 PM | |
| ಮಿಡಿ ಮಾವಿನಕಾಯಿ ಸಿಡಿಮಿಡಿಗೊಳುವ ಕನ್ಯೆ, ಆದರೂ ಗಡಿ ಮೀರದ ಶರಣ್ಯೆ ಒಮ್ಮೊಮ್ಮೆ ಕಿಡಿಕಿಡಿ ಆಟ ತುಂಟಾಟ ಗಡಿಬಿಡಿಯಲಿ ಮಾಡಿಕೊಳ್ಳುವ ರಾದ್ದಾಂತಗಳ ಸರಮಾಲೆ ಒಮ್ಮೆ ತುಂಡು ಮಿಡಿಲಂಗ, ಇನ್ನೊಮ್ಮೆ ಅರೆಸೀರೆ ಕೆಲವೊಮ್ಮೆ ಬಣ್ಣ ಬಣ್ಣದ ಪಂಜಾಬಿ ಉಡುಗೆ ದಿನಕ್ಕೊಮ್ಮೆ ಹುಟ್ಟುಡುಗೆ ಜಳಕ ಮಾಡುವಾಗ ತೆರೆಮರೆಯಲ್ಲಿ, ನೋಡುವ ಭಾಗ್ಯವಿಲ್ಲ ಎನಗೆ.
ಬಾನಿನ ಚಂದಿರಗೊಂದು ಸವಾಲು ಅವಳು, ಕೆಲವೊಮ್ಮೆ ಪ್ರಶ್ಹ್ನಾತೀತ ಅತೀತಕ್ಕೆ ನಿಲುಕದ ಸ್ನಿಗ್ಧ ಸುಮಧುರ ಭಾವನೆಗಳಿಗೆ ಪ್ರಣೀತ ನನ್ನ ಬದುಕಿಗೊಂದು ಸ್ಪೂರ್ತಿ ಸೆಲೆ ಸವಾಲು ನಿರಂತರ ಎದೆ ತೆನೆಗೊಳುವ ಕವಲು ಛಾಯಚಿತ್ರ ಮುಟ್ಟಿದರೆ ಮುನಿ, ಮುತ್ತಿಕಬೇಕೆನ್ನುವ ಅಸೆಗೆ ಧ್ವನಿ ನಾರಿ ರೂಪದ ಒಗಟು, ಮರೆಯಲಾಗದ ಜೀವವುಳ್ಳ ಆ ಸಗಟು ಇದ್ದಕ್ಕಿದ್ದಂತೆ ಮರೆಯಾಗಿಬಿಟ್ಟಳೇ ....... ಬಾನ ಚಂದಿರನ ತೆಕ್ಕೆಯಲಿ ಸ್ಥಿರವಾಗಿಬಿಟ್ಟಳೇ ... ಏನೆನ್ನಲಿ ಹ್ಯಾಗನ್ನಲಿ ಮನದೊಳಗೆ ಹತ್ತಿಕ್ಕಲಾಗದೆ ನಿರ್ದನಿಯಲಿ ಅಳಲೆ ? ಅಥಾವ ಧ್ವನಿ ಎತ್ತಿ ಬೊಬ್ಬಿಡಲೆ !!!
|  | | ಅಭಿಪ್ರಾಯ (1) |
|
|
| ಮಿನಿಗವನ | |
| raghava pavanje ಸಮಯ9/15/2008 8:26 PM | |
| ಕನಸುಗಳ ರಾಜವೈಭವ ಕಂಡು ನನಸುಗಳು ಬೆಕ್ಕಸ ಬೆರಗಾದವು ತಮಗಿಲ್ಲ ಆ ಭಾಗ್ಯ, ಬರೀ ಬವಣೆ ಎಂಬ ಕಸಿವಿಸಿಯಲ್ಲಿ
|  | | ಅಭಿಪ್ರಾಯ (0) |
|
|
| ಅನಿರುದ್ಧ | |
| raghava pavanje ಸಮಯ9/15/2008 8:26 PM | |
| ಅನಿರುದ್ಧ ನನ್ನ ಮಗ ಚೋಟುದ್ದ ಇದ್ದವನು ಇಂದು ಬೆಳೆದಿದ್ದಾನೆ ನನ್ನೆದೆಗೆ ಸಮನಾಗಿ ನನ್ನೆದೆಯೊಳಗಿನ ಪ್ರೀತಿಯ ಎರಕದಲ್ಲಿ ಮಿಂದೆದ್ದು ಬಂದವನಂತೆ ಪ್ರಚಂಡ, ಮಾತೆತ್ತಿದರೆ ಸಿಟ್ಟು ಛಲಗಳ ಅಗ್ನಿಕುಂಡ ಮಗುವಿನಲಿ ಮುದ್ದಾಗಿದ್ದ ಬೆಳೆದಂತೆ ಇಲ್ಲ ಅಂದರೆ ಒಲ್ಲೆ ಅನ್ನುವನಾದ
|  | | ಅಭಿಪ್ರಾಯ (0) |
|
|
| ಪಾವಂಜೆಯ ಆಷಾಢದ ಮಳೆ | |
| raghava pavanje ಸಮಯ9/15/2008 8:22 PM | |
| ನಿತ್ಯ ಹರಿ ಹೊಯ್ಯುವ ಮಳೆಗೆ ಛತ್ರಿಯ ಭಯವೇ ? ಸುಬ್ರಾಯ ಭಟ್ಟರ ಒಬೀರಾಯನ ಯುಗದ ಮರದ ಕೊಡೆ ಮುರಿದ ಕಾಮನಬಿಲ್ಲಾಗಿದೆ.. ಮಗಳು ವಾಸಂತಿ ಬೆಳೆಸಿದ ಜಾಜಿ ಮಲ್ಲಿ ಕೊಟ್ಟಿಗೆಯ ಕಾಮಧೇನು ಬಿಡಿಸಿದ ಸಗಣಿಯ ರಂಗವಲ್ಲಿ ನೀರುಪಾಲಾಗಿದೆ.. ಭಟ್ಟರ ಇಳಿಸಂಜೆಯ ಪಾರಾಯಣಕ್ಕೆ ಸತ್ಯಭಾಮೆ ರಾಜೀವಮ್ಮ ಗುನುಗುವ ಶೋಭನದ ಪದಗಳಿಗೆ ಆಕಾಶವಾಣಿಯಲ್ಲಿ ಧಿಗಣಿಸುವ ತಾಳಮದ್ದಲೆಯ ಚಂಡೆಮೃದಂಗಗಳ ಧಿಕ್ ತಕಿಟಕ್ಕೆ ಆರ್ಭಟಿಸಿ ಹೆಜ್ಜೆಹಾಕುವ ಮುಸ್ಸಂಜೆ ಮಳೆ.. ಧೂಮ್ರಾಕ್ಷನ ರಂಗಪ್ರವೇಶವೋ.. ಅಹೋರಾತ್ರಿ ಜೀರುಂಡೆಗಳ ಸದ್ದು ಗದ್ದಲಗಳನ್ನ ಲೆಕ್ಕಿಸದೆ ಮುಗಿಲು ಧಾರಾಕಾರ ನದಿಯು ಹರೋಹರ ಪ್ರಹಾರವೋ ಪ್ರವಾಹವೋ ! ಹಿನ್ನೀರಿನ ಕೆಂಪು ಕಡಲ ಸೆರಗಿನಲ್ಲಿ ಇಳೆಯ ಕೊಳಕನ್ನೆಲ್ಲಾ ನಿವಾಳಿಸಿ ತೆಗೆವ ಅಲೆಗಳ ಭೋರ್ಗರೆತ ಬಲೆಗೆ ಸಿಕ್ಕಿದ ಸಿಗಲಾರದ ಜೀವ ರಾಶಿಗಳೆಲ್ಲಾ ಅಯೋಮಯ ಹಸಿರೋ ಉಸಿರೋ ಅಲ್ಲಾ ಭೂದೇವಿಯ ಸ್ರವಿಸಿದ ಬಸಿರೋ ನೇಸರನಿಗೆ ಭುವಿಯತ್ತ ಇಣುಕಿ ನೋಡಲೂ ಬಿಡದ ಮೋಡಗಳ ಮಿಂಚು ಸಂಚುಗಳ ನಡುವೆ ಗುಡುಗುಡಿಸಿ ಸುರಿಯುವ ಹೊಯ್ಯೋ ಹೊಯ್ಯೋ ಮಳೆ ನದಿಗಡಲ ನಡುವಿನಂತರವ ಕತ್ತರಿಸುವ ಹುನ್ನಾರವೋ.. ಭೂದೇವಿಗೆ ಕೆನ್ನೀರಿನ ಅಭಿಷೇಕದ ಬಾನು ಹೊತ್ತ ಹರ ...
|  | | ಅಭಿಪ್ರಾಯ (0) |
ಮುಂದೆ ಓದಿ... |
|
| ಮೊಬೈಲ್ ಮತ್ತು ಹುಡುಗಿಯೊಬ್ಬಳ ಅಳಲು | |
| raghava pavanje ಸಮಯ9/13/2008 6:04 PM | |
| ಮೊಬೈಲ್ ನ ರಿಂಗಣದಲ್ಲಿ ಮೋಟರ್ ಬೈಕ್ ಏರಿ ಗುಡುಗುಡಿಸಿ ಬರುವ ಹುಡುಗ ಚಿಗುರುಮೀಸೆಯವ ಮಿಸ್ ಕಾಲ್ ಗಳ ಸರಮಾಲೆಯಲ್ಲಿ ಗೋಳುಹೊಯಿಸಿಕೊಳ್ಳುತ್ತಾನೆ ನಾನೇ ಮಿಸ್ ವರ್ಲ್ದ್ ಅನ್ನುವ ಭ್ರ ಮೆಯಲ್ಲಿ ಲೀನಗೊಂಡವನಂತೆ ಬೇಡವೆಂದರೂ ಕಾಡುತ್ತಾನೆ ಹೊತ್ತುಗೊತ್ತಿಲ್ಲದವನಂತೆ.. ಕಾಲ್ ಗಳಿಂದ ತಪ್ಪಿಸಿಕೊಳ್ಳಲು ಸೈಲೆಂಟ್ ಮೋಡ್ ಗೆ ಶರಣಾದರೂ ಕಿವಿಯೊಳಗೆಲ್ಲ ಅದೇ ಮೊಬೈಲ್ ನ ರಿಂಗಣ.. ಅಪ್ರಯತ್ನವಾಗಿ ಬೆರಳುಗಳು ಸರಿದಾಡುತ್ತವೆ ನಿಶ್ಯಬ್ದವನ್ನು ಮುರಿಯಲು ಮತ್ತೆ ಆ ಕಾತರತೆಯಲ್ಲಿ ರಿಂಗಣದ ಬೆನ್ನು ಹತ್ತಿ..
ಕಣ್ಣಿಲ್ಲದಿರಬಹುದು ಕೈಕಾಲುಗಳಿಲ್ಲದಿರಬಹುದು ಆದರೆ ಮೊಬೈಲ್ಲಿಲ್ಲದವರುಂಟೆ ಈ ಜಗದಲ್ಲಿ ಇದ್ದರೂ ಅವರು ಅಂಗವಿಕಲರಂತೆ ದೇಹದ ಒಂದು ಭಾಗವಾಗಿದೆ ಈ ಮೊಬೈಲ್ ಪಂಚೇಂದ್ರಿಯವನ್ನು ಮೀರಿದ ಷಷ್ಟ್ಯೇಂದ್ರಿಯದಂತೆ ಅಂಥಹ ಹುಡುಗನ ಕೈಯಲ್ಲಿ ಮೊಬೈಲ್ ಮಾಣಿಕ್ಯವೇ ? ಹೀಗೊಂದು ಸಿದ್ಧಾಂತಕ್ಕೆ ಬರಲು ನಾನೇನು ಸಂತಳೇ ಸನ್ಯಾಸಿನಿಯೇ ! ಕಾಲದೇಶಗಳ ಪರಿವೆ ಇಲ್ಲದೆ ಕಾಡುತ್ತಾನೆ ಹುಡುಗ.. ನಾನು ಮತ್ತೆ ಆ ರಿಂಗಣದ ಬೆನ್ನು ಹತ್ತಿ....
|  | | ಅಭಿಪ್ರಾಯ (0) |
|
|
|
| ಅನನ್ಯ | |
| raghava pavanje ಸಮಯ9/9/2008 7:52 PM | |
| ಅನನ್ಯ .... ನಮ್ಮ ಮುದ್ದಿನ ಮಗಳು ಪೂರ್ಣ ಚಂದ್ರಮನ ತುಂಬಿದ ಬೆಳದಿಂಗಳು ಈಗಿನ್ನೂ ವರುಷ ಎರಡಾಗಿಲ್ಲ ಆಗಲೇ ನಗು ಹರುಷದ ಚಿತ್ತಾರ ಮನೇಲೆಲ್ಲಾ ಅಣ್ಣ ಅನಿರುದ್ಧನ ಒಡನಾಟದಲ್ಲಿ... ಅಮ್ಮ ಚೈತ್ರೆಯ ಮುದ್ದು ಮುಂಗೋಪಗಳಲ್ಲಿ... ಒಮ್ಮೆ ಶಾಂತ.. ಒಡನೆ ರಚ್ಛೆ ಹಿಡಿವ ಶಿಶು ಸಹಜ ಆಟೋಪಗಳಲ್ಲಿ.... ಚುಕ್ಕಿ ಚಂದ್ರಮರನ್ನು ಕಣ್ಣೆರಡರಲ್ಲಿ ತುಂಬಿಕೊಂಡಂತೆ ಬಾನಂಗಳದ ನಕ್ಷತ್ರ ಬಳ್ಳಿಗಳನ್ನು ಮೈಯೆಲ್ಲಾ ಹಬ್ಬಿಕೊಂಡಂತೆ ಮಿಂಚುಳ್ಳಿಯಾಗಿ.. ಸ್ನಿಗ್ಧ ನಗುವಿನ ಮಂದಾರವಾಗಿ.. ಬದುಕಿನ ಹಾಡು ಹರಿವು, ನಿರ್ಮಲ ಹ್ರದಯದ ಒಲವು ಅವರುಗಳಲ್ಲಿ ದೂರದ ಬೆಂದಕಾಳೂರಲ್ಲಿ ನಾನಿಲ್ಲಿ ಮದರಾಸಿನ ಕಡಲ ಸೆರಗಿನಲ್ಲಿ ಏಕಾಂಗಿಯಾಗಿ .. ಅಲೆಗಳನ್ನು ಲೆಕ್ಕ ಹಾಕುತ್ತಾ.. ಪಶ್ಛಿಮದಿಂದ ಸಾಗಿ ಬರುವ ಮಾರುತದಲ್ಲಿ .. ಮಗುವಿನ ನಗುವನ್ನು ಕಿವಿಯೆರಡರೊಳಗೆ ತುಂಬಿಕೊಳ್ಳುತ್ತಾ....
|  | | ಅಭಿಪ್ರಾಯ (0) |
|
|
| ಮಿನಿಗವನ | |
| raghava pavanje ಸಮಯ9/9/2008 6:27 PM | |
| ಮಧುಚಂದ್ರಕ್ಕೆ ತೆರಳುತ್ತಿರುವ ನವದಂಪತಿಗಳನ್ನು ವಿಮಾನದೊಳಗೆ ಸರಸವಾಡುತ್ತಿದ್ದುದನ್ನು ಕಿಟಕಿಯಲ್ಲಿ ಕಂಡ ಹುಣ್ಣಿಮೆಯ ಚಂದ್ರಮ ನಸು ನಕ್ಕನಂತೆ
|  | | ಅಭಿಪ್ರಾಯ (0) |
|
|