ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ನನಗೆ ತೋಚಿದ್ದು
ಬರಹಗಾರ:ನಾಗರಾಜ್ megarajnaga  ಸಮಯ:7/14/2008 7:58 PM
ಎಲ್ಲಾ ಮಿತ್ರರಿಗೂ ನನ್ನ ನಮಸ್ಕಾರಗಳು ನನ್ನ ಹೆಸರು ನಾಗರಾಜ್ ನಾನು ಸಮುದಾಯ ರೇಡಿಯೋದಲ್ಲಿ ಸುಮಾರು 6 ವರ್ಷಗಳ ಕಾಲ ಕೆಲಸ ನಿರ್ವಹಿಸಿ ಈಗ ನನ್ನ ಸ್ನೇಹಿತರ ಜೊತೆ "ಮರ" ಅನ್ನುವ ಸಂಸ್ಥೆಯನ್ನು ಪ್ರಾರಂಬಿಸಿದ್ದೇವೆ. ಮರ ಸಂಸ್ಥೆಯು ಮಾದ್ಯಮದೊಂದಿಗೆ ಕೆಲಸ ಮಾಡುತ್ತಿದೆ. ಜೊತೆಗೆ ರೇಡಿಯೋ ಆಕ್ಟೀವ್ 90.4 ರೇಡಿಯೋದಲ್ಲಿ ಪ್ರತಿ ದಿನ 1 ಗಂಟೆ ಕಾಲ ಕಾರ್ಯಕ್ರಮವನ್ನು ಸಹ ಮಾಡುತ್ತಿದ್ದೇನೆ.

ಸಂಘಂ ರೇಡಿಯೋ 90.4
ನಾಗರಾಜ್ megarajnaga ಸಮಯ10/17/2008 11:54 AM
ಭಾರತದ ಮೊಟ್ಟಮೊದಲ ಸಮುದಾಯ ರೇಡಿಯೋ ಆಗಿ ಅಂದ್ರಪ್ರದೇಶದ "ಸಂಘಂ ರೇಡಿಯೋ" (ಸಂಘದ ರೇಡಿಯೋ) 90.4 ತರಂಗಗಳಲ್ಲಿ ಅಕ್ಟೋಬರ್ 15 ರಂದು ಪ್ರಾರಂಭವಾಯಿತು. ಇದು ಇರುವುದು ಅಂದ್ರಪ್ರದೇಶದ ಮೆದಕ್ ಜಿಲ್ಲೆಯ, ಜಹೀರಾಬಾದ್ ತಾಲ್ಲೂಕಿಗೆ ಸೇರಿದ ಪಸ್ತಾಪುರ್ ಹತ್ತಿರದ ಮಾಚನೂರು ಗ್ರಾಮದಲ್ಲಿ. ಇಲ್ಲಿಂದ ಸುಮಾರು 30 ಕಿ.ಮೀ ದೂರ ಹೋದರೆ ನಮ್ಮ ಕರ್ನಾಟಕದ ಬೀದರ್ ಸಿಗುತ್ತದೆ. ಮಾಚನೂರು ತಲುಪಲು ಅಂದ್ರಪ್ರದೇಶದ ರಾಜಧಾನಿಯಾದ ಹೈದರಾಬಾದ್ ನಿಂದ 3 ಘಂಟೆಗಳ ಕಾಲ ಬಸ್ ಪ್ರಯಾಣ ಮಾಡಬೇಕು ಅಥವಾ ಬೀದರ್ ನಿಂದ ಬರಬಹುದು. ಈ ಸಂಘಂ ರೇಡಿಯೋವನ್ನು ನಿರ್ವಹಿಸುತ್ತಿರುವವರು ದಲಿತ ಕುಟುಂಬದಿಂದ ಬಂದ ಇಬ್ಬರು ಹೆಣ್ಣುಮಕ್ಕಳು ಇವರು ಹೆಚ್ಚಾಗಿ ಸಹ ಓದಿಲ್ಲ ಕೇವಲ 10ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಮಾಡಿದ್ದು ಸುಮಾರು ವರ್ಷಗಳಿಂದ ಇಲ್ಲಿಯೇ ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ. ಇಲ್ಲಿಯ ಕಾರ್ಯಕ್ರಮಗಳು ಗ್ರಾಮೀಣ ರೀತಿಯಲ್ಲಿ ಇರುತ್ತದೆ. ಯಾವುದೇ ಸಂಗೀತ ಇಲ್ಲ, ಯಾವುದೇ ಚಲನ ಚಿತ್ರಗೀತೆ ಇಲ್ಲ, ಬದಲಾಗಿ ಪೂರ್ತಿಯಾಗಿ ಸ್ಥಳೀಯ ಜನರು ಹಾಡಿದ ಹಾಡುಗಳು, ಸಾವಯವ ಕೃಷಿ ಬಗ್ಗೆ, ಆರೋಗ್ಯದ ಬಗ್ಗೆ, ಹಬ್ಬಗಳ ಬಗ್ಗೆ, ಮತ್ತು ಆ ಭಾಗದಲ್ಲಿ ಹರಿಕಥೆಯಂತೆ ಹಾಡುವ ಕಲಾವಿದರಿಂದ ಹಾಡುಗಾರಿಗೆ ಮತ್ತು ಕಥೆ ಹೇಳುವುದು ಇತ್ಯಾದಿಗಳು.
ಇದರ ಜೊತೆಗೆ ಇವರು ವಿಡಿಯೋ ಸಹ ಮಾಡುತ್ತಿದ್ದಾರೆ. ಇದನ್ನು ಮಾಡುವವರು ಸಹ ಮಹಿಳೆಯರು ಇವರು ಸಹ 10 ರತನಕ ಸಹ ಓದಿಲ್ಲ ಇವರು ವಿಡಿಯೋ ಕ್ಯಾಮರ ಕೈಲ್ಲಿ ಹಿ ...

ಅಭಿಪ್ರಾಯ (5) ಮುಂದೆ ಓದಿ...

ದಸರಾ ಹಬ್ಬ
ನಾಗರಾಜ್ megarajnaga ಸಮಯ9/30/2008 4:11 PM
ದಸರಾ ಹಬ್ಬವು ನಮ್ಮ ಕನ್ನಡಿಗರ ನಾಡ ಹಬ್ಬ. ವಿಶೇಷವಾಗಿ ಮೈಸೂರಿನಲ್ಲಿ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ಇತಿಹಾಸ ಪ್ರಸಿದ್ಧ ಮೈಸೂರಿನ ಅರಮನೆ ದೀಪಾಲಂಕಾರಗೊಳಿಸಲಾಗುತ್ತದೆ. ಮೈಸೂರು ಮಹಾನಗರವು ಕನ್ನಡ ನಾಡಿನ ಸಂಸ್ಕೃತಿಯ ರಾಜಧಾನಿ. ಮೈಸೂರು ದಸರಾ ಎಂದರೆ ಅದು ಸಂಬ್ರಮದ ನಮ್ಮ ನಾಡ ಹಬ್ಬ. ಆಶ್ವಯುಜ ಮಾಸದ ಪಾಡ್ಯದಿಂದ ಪ್ರಾರಂಭವಾಗಿ ದಶಮಿಯ ಪೂರ್ತಿ ಹತ್ತು ದಿನಗಳ ತನಕ ಆಚರಣೆಯಲ್ಲಿ ಇರುತ್ತದೆ. ಹತ್ತು ದಿನಗಳಲ್ಲಿ ಮೊದಲ ಒಂಬತ್ತು ದಿನಗಳು ನವರಾತ್ರಿ ಎನಿಸಿ ಕಡೆಯ ಹತ್ತನೇ ದಿನ ವಿಜಯದಶಮಿ ಎಂದು ಆಚರಣೆ ಮಾಡಲಾಗುತ್ತದೆ. ನವರಾತ್ರಿಯಲ್ಲಿ ಇನ್ನೊಂದು ವಿಶೇಷ ಮನೆಗಳಲ್ಲಿ ಗೊಂಬೆ ಕೂರಿಸುವುದು. ಹಂತ ಹಂತವಾಗಿ ಮೆಟ್ಟಿಲುಗಳನ್ನು ನಿರ್ಮಿಸಿ, ಪಟ್ಟದ ಗೊಂಬೆ ಮತ್ತು ಇತರ ಗೊಂಬೆಗಳನ್ನು ಕೂರಿಸುವರು . ಇದಕ್ಕೆ ಅಂತಾನೇ ಮದುವೆಗಳಲ್ಲಿ ನೂತನ ದಂಪತಿಗಳಿಗೆ ತೇಗ ಅಥವಾ ಚಂದನದ ಮರದಿಂದ ಮಾಡಿದ ಗೊಂಬೆಗಳನ್ನು ನೀಡುವರು. ಪ್ರತಿದಿನ ಸಂಜೆಯ ವೇಳೆಯಲ್ಲಿ ಪುಟ್ಟ ಮಕ್ಕಳನ್ನು ಕರೆದು ಗೊಂಬೆ ಬಾಗಿನ ಎಂದು ತಿಂಡಿಗಳನ್ನು ಕೊಡುವರು. ಮೈಸೂರನ್ನು ಆಳಿದ ರಾಜ ಮನೆತನವಾದ ಒಡೆಯರ ಕುಲದೇವತೆಯಾದ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಗುತ್ತದೆ. ವಿಜಯದಶಮಿಯಂದು ಯುದ್ಧಕ್ಕಾಗಿ ಬಳಸುವ ಎಲ್ಲಾ ಆಯುಧ, ಪರಿಕರಗಳನ್ನು ಪೂಜಿಸಿ ಮೆರವಣಿಗೆಯ ಮೂಲಕ ಅರಮನೆಯಿಂದ ಬನ್ನಿ ಮಂಟಪಕ್ಕೆ ಒಯ್ಯುವುದು ಮೈಸೂರಿನ ವಿಶೇಷತೆ. ದಸರ ಸಮಯದಲ್ಲಿ ನಡೆಯುವ ಇನ್ನೊಂದು ಕಾಯಕ್ರಮವೆಂದರೆ ಮಹಾರಾಜರ ಖಾಸಗಿ ದರ್ಬಾರ್. ಅಂಬಾ ವಿಲ ...
ಅಭಿಪ್ರಾಯ (2) ಮುಂದೆ ಓದಿ...

ಗಾಂಧಿ ಜಯಂತಿ
ನಾಗರಾಜ್ megarajnaga ಸಮಯ9/30/2008 12:27 PM
ಅಕ್ಟೋಬರ್ 2 ನಮ್ಮ ದೇಶಾದ್ಯಂತ ಆಚರಿಸುವ ರಾಷ್ಟ್ರಿಯ ಹಬ್ಬ ಕಾರಣ ಅಂದು ಗಾಂಧಿ ಜಯಂತಿ. ಎಲ್ಲಾ ಶಾಲೆಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಗಾಂಧಿಜಿಯವರ ಭಾವ ಚಿತ್ರವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ. ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಂದು ಗಾಂಧಿಜಿಯವರ ಬಗ್ಗೆ ಮತ್ತು ಅವರ ಸಾದನೆಗಳ ಬಗ್ಗೆ ಜೊತೆಗೆ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಹೇಳುತ್ತಾರೆ. ಅದರ ಜೊತೆಗೆ ಅಂದು ವಿಶೇಷವಾಗಿ ಶ್ರಮದಾನವನ್ನು ಸಹ ಹಮ್ಮಿಕೊಂಡು ಆಯಾ ಗ್ರಾಮದಲ್ಲಿ ಶ್ರಮದಾನ ಮಾಡುತ್ತಾರೆ. ಶಾಲಾ ಮಕ್ಕಳು ಸಹ ಬೆಳಿಗ್ಗೆ ಬೇಗನೆ ಎದ್ದು ಜಳಕ ಮಾಡಿ, ರಾಷ್ಟ್ರ ಪಿತನಿಗೆ ನಮಿಸಿ, ಅವರ ತತ್ವಗಳನ್ನು ಜೀವನದಲ್ಲಿ ತೊಡಗಿಸಿಕೊಳ್ಳಲು ಸಿದ್ದರಾಗಿ ಶಾಲೆಗೆ ಬರುತ್ತಾರೆ. ಇಂತಾ ಮಹಾನ ವ್ಯಕ್ತಿಯ ಜನ್ಮ ದಿನವಾದ ಅಕ್ಟೋಬರ್ 2 ರಂದು ರಾಜ್ಯಾದ್ಯಂತ ಮದ್ಯಪಾನವನ್ನು ಸಹ ಸರ್ಕಾರ ನಿಷೇದಿಸಿರುವುದು ಹೆಮ್ಮೆಯ ಸಂಗತಿಯು ಹೌದು. ನಿಮಗೆ ತಿಳಿದ ಹಾಗೆ ಗಾಂಧೀಜಿ ಯವರ ಹುಟ್ಟಿದ ದಿನವನ್ನು ಗಾಂಧಿ ಜಯಂತಿ ಎಂದು ಆಚರಿಸಲಾಗುವುದು ಇವರ ಪೂರ್ಣ ಹೆಸರು ಮೋಹನದಾಸ್ ಕರಮ‍ಚಂದ್ ಗಾಂಧಿ ಅಕ್ಟೋಬರ್ 2, 1869 ರಲ್ಲಿ ಭಾರತದ ಗುಜರಾತ್ ರಾಜ್ಯದ ಪೋರಬಂದರ್ ನಲ್ಲಿ ಜನಿಸಿದರು. ಇವರ ತಂದೆ ಕರಮಚಂದ್ ಗಾಂಧಿ ,ತಾಯಿ ಪುತಲೀಬಾಯಿ. 13 ನೆಯ ವಯಸ್ಸಿನಲ್ಲಿ ಗಾಂಧೀಜಿ ಕಸ್ತೂರಿಬಾ ಅವರನ್ನು ವಿವಾಹವಾದರು. ನಂತರ ಇವರಿಗೆ ನಾಲ್ಕು ಮಕ್ಕಳು ಜನಿಸಿದರು : ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ , ರಾಮದಾಸ್ ಗಾಂಧಿ ಮತ್ತು ದೇವದಾಸ್ ಗ ...
ಅಭಿಪ್ರಾಯ (1) ಮುಂದೆ ಓದಿ...

ನಿಮ್ಮ ಜೀವನದಲ್ಲಿ ನೆಮ್ಮದಿ ಹೆಚ್ಚಿಸುವ ವಿಧಾನಗಳು
ನಾಗರಾಜ್ megarajnaga ಸಮಯ9/19/2008 2:57 PM
ಜೀವನ ಸರಳವಾಗಿದ್ದಷ್ಟೂ ನೆಮ್ಮದಿ ಹೆಚ್ಚುತ್ತದೆ. ಹಾಗೆ ಜೀವನವನ್ನು ಸರಳಗೊಳ್ಳಿಸುವ ವಿಧಾನ ಇಲ್ಲಿದೆ!

1. ಇಷ್ಟವಿಲ್ಲದ ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ಹೆಚ್ಚು ತೊಡಗಿಸಿಕೊಳ್ಳಬೇಡಿ.
2. ಎಲ್ಲಾ ಕೆಲಸವನ್ನು ಪರ್ಪೆಕ್ಟ್ ಅಥವಾ ನಿಖರವಾಗಿ ಮಾಡಲು ಹೋಗಬೇಡಿ.
3. ಮನೆಯನ್ನು ಸ್ವಚ್ಚಗೊಳಿಸುವ ಕೆಲಸವನ್ನು ಸರಳವಾಗಿಸಿಕೊಳ್ಳಿ. ಹಾಗು ಅದನ್ನು ಪ್ರತಿ ಬಾರಿಯೂ ಅನುಸರಿಸಿ.
4. ಫೋನ್, ವಾಟರ್, ಕ್ರೆಡಿಟ್ ಕಾರ್ಡ್ ಇತ್ಯಾದಿಗಳಿಗೆ ಆನ್ ಲೈನ್ ನಿಂದ ಬಿಲ್ಲು ಪಾವತಿಸುವುದನ್ನು ರೂಡಿಸಿಕೊಳ್ಳಿ. ಇದು ನಿಮ್ಮ ಸಮಯ ಉಳಿಸುತ್ತದೆ. ಅನಗತ್ಯವಾಗಿ ತಡವಾಗಿದ್ದಕ್ಕೆ ದಂಡ ಕಟ್ಟುವುದು ತಪ್ಪುತ್ತದೆ.
5. ನಿಮ್ಮ ಹಾಡು, ಚಲನಚಿತ್ರ, ಪುಸ್ತಕ ಇತ್ಯಾದಿ ಸಂಗ್ರಹಗಳಲ್ಲಿ ನಿಮಗೆ ತುಂಬ ಇಷ್ಟವಾದುದನ್ನು ಮಾತ್ರ ಇಟ್ಟುಕೊಳ್ಳಿ ಉಳಿದದ್ದನ್ನು ಬಿಟ್ಟು ಬಿಡಿ.
6. ನಿಮ್ಮ ಪರ್ಸ್ ಅನ್ನು ಕ್ಲೀನ್ ಮಾಡಿ. ಅದರಲ್ಲಿ ಅನಗತ್ಯವಾದುದನ್ನು ತೆಗೆದು ಬಿಡಿ.
7. ನಿಮಗೆ ಬೇಡವಾದ ಪೋಸ್ಟ್ ಗಳನ್ನು ನಾಶಪಡಿಸಿ. ಬೇಡವಾದ ಕಾಲ್, ಎಸ್. ಎಂ.ಎಸ್, ಮೇಲ್ ಗಳ ಮೇಲೆ ಸಮಯ ವ್ಯರ್ಥ ಮಾಡದಿರಿ.
8. ನಿಮ್ಮ ವಾರ್ಡ್ ರೋಬ್ ಅನ್ನು ನೀಟಾಗಿ ಇಟ್ಟುಕೊಳ್ಳಿ.
9. ನೀವು ಉಪಯೋಗಿಸದ ಮೇಲ್ ಅಥವಾ ಸೋಶಿಯಲ್ ನೆಟ್ ವರ್ಕ್ ಅಕೌಂಟ್ ಅನ್ನು ಅಳಿಸಿಹಾಕಿ.
10. ಜಾಹೀರಾತುಗಳು ನಿಮ್ಮ ಫೋನ್ ಗೆ ಬರುತ ...

ಅಭಿಪ್ರಾಯ (4) ಮುಂದೆ ಓದಿ...

ಬಿಹಾರದ ಕಣ್ಣೀರ ಕಥೆ
ನಾಗರಾಜ್ megarajnaga ಸಮಯ9/19/2008 2:56 PM
ನೇಪಾಳ ಗಡಿಭಾಗದ ಕುಶಾದಲ್ಲಿ ಕೋಸಿ ನದಿಗೆ ಕಟ್ಟಿದ ಒಡ್ಡು ಒಡೆದ ಪರಿಣಾಮ ಕೆಲವೇ ಗಂಟೆಗಳಲ್ಲಿ ಉತ್ತರ ಬಿಹಾರದ ಐದು ಜಿಲ್ಲೆಗಳಾದ ಸುಪೌಲ್, ಅರಾರಿಯ, ಸಹರ್ಸಾ, ಮಾಧೇಪುರ ಮತ್ತು ಪುರ್ನಿಯಾ ಅಸ್ತಿತ್ವವೇ ಇಲ್ಲದಂತೆ ಜಲಾವೃತಗೊಂಡವು. ಈ ಪ್ರಾಂತಗಳು ಪ್ರತಿ ವರ್ಷ ಎದುರಿಸುತ್ತಿದ್ದ ಪ್ರವಾಹಕ್ಕಿಂತ ದುಪ್ಪಟ್ಟು ನಷ್ಟವನ್ನು ಈ ಬಾರಿಯ ವಿಪತ್ತು ತಂದೊಡ್ಡಿದೆ. ಬಿಹಾರದ ಕಣ್ಣೀರ ನದಿಯೆಂದೆ ಜನಜನಿತವಾಗಿರುವ ಕೋಸಿ ನದಿಯ ಪ್ರವಾಹದಿಂದಾಗಿ ಬಿಹಾರದ ಜನತೆ ಅಕ್ಷರಶಃ ತಮ್ಮ ಜೀವನದೊಂದಿಗೆ ಹೋರಾಟಕ್ಕಿಳಿದಿದ್ದಾರೆ. ಲಕ್ಷಾಂತರ ಮಂದಿ ಪ್ರವಾಹದಿಂದಾಗಿ ತಮ್ಮ ಮನೆಮಠ, ಕುಟುಂಬಿಕರು, ಸಂಬಂಧಿಗಳು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಭೀಕರ ಪ್ರವಾಹದ ಪರಿಣಾಮ ಬಿಹಾರದ ಜನತೆ ತುಂಬಲಾರದ ನಷ್ಟಕ್ಕೀಡಾಗಿದ್ದಾರೆ; ಎಲ್ಲವನ್ನೂ ನೆರೆ ಕೊಚ್ಚಿಕೊಂಡು ಹೋಗಿದೆ. ಬಿಹಾರದಲ್ಲಿ ಹರಿಯುವ ಹೆಚ್ಚಿನ ನದಿಗಳ ಮೂಲವಿರುವುದು ನೇಪಾಳದಲ್ಲಿ. ಮಳೆಗಾಲದ ಸಂದರ್ಭದಲ್ಲಿ ಪ್ರವಾಹವು ಸಾವಿರಾರು ಜನರನ್ನು ಬೀದಿಪಾಲು ಮಾಡುವುದರ ಜೊತೆಗೆ ಪೈರು, ಎಕರೆಗಟ್ಟಲೆ ಭೂಮಿ, ಸಾವಿರಾರು ಮನೆಗಳು, ರಸ್ತೆ, ಸೇತುವೆ, ಅಣೆಕಟ್ಟು ಮತ್ತು ನೂರಾರು ಶಾಲೆಗಳನ್ನು ಧ್ವಂಸ ಮಾಡುತ್ತಿದೆ. ನೀರಿನ ಮಟ್ಟ ತಗ್ಗಿದರೂ ಮಕ್ಕಳಿಗೆ ತಿಂಗಳಿಡೀ ಶಾಲೆಗೆ ಹೋಗಲು ಸಾಧ್ಯವಾಗುವುದಿಲ್ಲ. ದೇಶದಲ್ಲಿಯೇ ಬಿಹಾರ ರಾಜ್ಯ ಅತ್ಯಂತ ನಿಧಾನವಾಗಿ ಅಭಿವೃದ್ಧಿ ಹೊಂದಲು ಪ್ರಮುಖ ಕಾರಣವೇ ಪ್ರವಾಹ ಬಾಧೆ. ಗ್ರಾಮೀಣ ಆರ್ಥಿಕತೆ ಹೊಂದಿರುವ ಬಿಹಾರದಲ್ಲಿ ಹೇಳಿಕೊಳ್ಳುವ ...
ಅಭಿಪ್ರಾಯ (1) ಮುಂದೆ ಓದಿ...

ಸ್ವಲ್ಪ ನಗಿ
ನಾಗರಾಜ್ megarajnaga ಸಮಯ9/6/2008 1:21 PM
ಗೆಳೆತನ‌
ನೀನು "ರಮ್"ನಷ್ಟೇ ಬಲಿಷ್ಠ, "ವೈನ್" ನಷ್ಟೇ ಉತ್ತಮ, "ಬೀರ್"ನಷ್ಟೇ ತಂಪು, "ವಿಸ್ಕಿ" ಯ‌ಷ್ಟೇ ಅದ್ಬುತ, ನಿನ್ನ ಗೆಳೆಯತನದಲ್ಲಿ ಇದೆಲ್ಲವೂ ಒಟ್ಟಾಗಿ ಇರೋದ್ರಿಂದ ನಾನು ಯಾವತ್ತೂ ಟೈಟ್ ಆಗಿರ್ತೀನಿ!


ಹೆದರಬೇಡ‌
ಹುಡುಗನೊಬ್ಬ ಹುಡುಗಿಗೆ ಅವರಸರದಲ್ಲಿ ಮುತ್ತು ಕೊಡ್ತಿದ್ದ
ಹುಡುಗಿ: ಯಾಕೆ ಅವಸರ‌
ಹುಡುಗ: ನಿನ್ನ ಲವರ್ ಬಂದ್ರೆ ?
ಹುಡುಗಿ: ಅವನ್ನೆಲ್ಲಿ ಬರ್ತಾನೆ ಈ ಎಸ್ಸೆಮ್ಮೆಸ್ ಓದ್ತಾ ಇರ್ತಾನೆ.


ನಿಮ್ಕಡೆ...
ಮೊದಲೆಲ್ಲ ಜನ ಪೋನ್ ಮಾಡಿದ್ರೆ ನಿಮ್ಮ ಕಡೆ ಮಳೆ ಆಯ್ತಾ ಅಂತ? ಎನ್ನುತ್ತಿದ್ದರು.
ಈಗ....
ಪೋನ್ ಮಾಡಿ,
ನಿಮ್ಮ ಕಡೆ ಬಾಂಬ್ ಬ್ಲಾಸ್ಟ್ ಆಯ್ತಾ ಅಂತ ಕೇಳ್ತಾರೆ ಕಣ್ರಿ...?

ಏರೊಪ್ಲೇನ್ ಹತ್ತಿಸಬೇಕಾ...
ಗುಂಡ ರಸ್ತೆಯಲ್ಲಿ ಒಬ್ಬನೇ ನಡೆದುಕೊಂಡು ಹೋಗುತ್ತಿದ್ದ.
ಪೋಲಿಸ್:ಏನಯ್ಯಾ ರಾತ್ರಿ 12 ಗಂಟೆ ಆಯ್ತು ಈಗ ಇಲ್ಲೇಕೆ ಓಡಾಡ್ತಾ ಇದ್ದೀಯಾ? ಏರೊಪ್ಲೇನ್ ಹತ್ತಿಸಬೇಕಾ?
ಗುಂಡ: ಅಯ್ಯೋ ಬೇಡಾ ಸಾರ್...ಯಾವ್ದಾದ್ರು ಒಂದು ಆಟೋ ನಿಲ್ಲಿಸಿ ಹತ್ತಿಸಿಬಿಡಿ ಸಾಕು..

ಅಭಿಪ್ರಾಯ (2)

ಸಾಗರಕ್ಕೆ ಒಮ್ಮೆ ಹೋಗಿ ಬನ್ನಿ
ನಾಗರಾಜ್ megarajnaga ಸಮಯ7/30/2008 5:17 PM
ಎಲ್ಲರಿಗೂ ನಮಸ್ಕಾರ ಮೊನ್ನೆ ಅಂದರೆ 24ನೇ ತಾರೀಖು ಸಾಗರಕ್ಕೆ ಬೇಟಿ ನೀಡಿದ್ದೆ. ಬೆಂಗಳೂರಿನಿಂದ ರೈಲಿನಲ್ಲಿ ಶಿವಮೊಗ್ಗ ಎಕ್ಸ್ ಪ್ರೆಸ್ ನಲ್ಲಿ ಹೊರಟೆ ರೈಲು ಬೆಳಿಗ್ಗೆ 5:30ಗೆ ಹೋಗಬೇಕಾದದ್ದು 2 ಗಂಟೆ ತಡವಾಗಿ ಹೋಯಿತು, ಶಿವಮೊಗ್ಗ ಹತ್ತಿರ ಹೋಗುತ್ತಿದ್ದಾಗೆ ಜಿಟೆ ಜಿಟೆ ಮಳೆ ಬೀಳುತ್ತಿತ್ತು ಆ ಮಳೆಯಲ್ಲಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರೆ ಅದರ ಮಜಾನೆ ಬೇರೆ. ಶಿವಮೊಗ್ಗ 7:30 ಗಂಟೆಗೆ ತಲುಪಿದೆ ಅಲ್ಲಿಂದ ಸಾಗರದ ಕಡೆ ಪ್ರಯಾಣ ಬೆಳೆಸಿದೆ. ಸಾಗರ ಶಿವಮೊಗ್ಗ ಜಿಲ್ಲೆಯ ಒಂದು ಪಟ್ಟಣ ಮತ್ತು ಅದೇ ಹೆಸರಿನ ತಾಲೂಕಿನ ಆಡಳಿತ ಕೇಂದ್ರ. ಬೆಂಗಳೂರು ನಗರದಿಂದ 360 ಕಿ.ಮೀ ದೂರದಲ್ಲಿರುವ ಸಾಗರ ಪಟ್ಟಣವು ಮಲೆನಾಡು ಪ್ರದೇಶದ ವ್ಯಾಪ್ತಿಗೊಳಪಟ್ಟಿದೆ. ಮಳೆ ಹೆಚ್ಚಾಗಿ ಬೀಳುವ ಸಾಗರ ತಾಲೂಕು ಸಹಜವಾಗಿ ದಟ್ಟವಾದ ಕಾಡು ಮತ್ತು ವಿವಿಧ ರೀತಿಯ ಪ್ರಾಣಿಸಂಕುಲಗಳಿಗೆ ತವರಾಗಿದೆ. ಪ್ರಕೃತಿಪ್ರಿಯರಿಗೆ ಮತ್ತು ಚಾರಣಪ್ರಿಯರಿಗೆ ಸಾಗರ ಸ್ವರ್ಗ. ಶ್ರೀಗಂಧ ಕೆತ್ತನೆಗೆ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಸಾಗರವನ್ನು ಶ್ರೀಗಂಧದ ಗುಡಿ ಎಂದೂ ಕರೆಯಲಾಗುತ್ತದೆ. ಸಾಗರದಲ್ಲಿ ಬೆಳಗಿನ ತಿಂಡಿ ಮುಗಿಸಿ ಸಾಗರ‌ದಿಂದ ಹೆಗ್ಗೋಡುಗೆ ಹೊರಟೆ ಸಾಗರ ತಾಲೂಕಿನ ಜನ ಕಲಾರಸಿಕರು ಮತ್ತು ಸಾಹಿತ್ಯಾರಾಧಕರು. ಬಹಳ ಜನ ಕಲಾವಿದರನ್ನ, ಸಾಹಿತಿಗಳನ್ನ ರಾಜ್ಯಕ್ಕೆ ಸಾಗರ ತಾಲೂಕು ನೀಡಿದೆ. ಸಾಗರದ ೭ ಕಿ.ಮೀ ದೂರದಲ್ಲಿ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಕೆ.ವಿ.ಸುಬ್ಬಣ್ಣ ಕಟ್ಟಿ ಬೆಳೆಸಿದ ನೀನಾಸಂ (ನೀಲಕಂಠೇಶ್ ...
ಅಭಿಪ್ರಾಯ (3) ಮುಂದೆ ಓದಿ...

ಕನ್ನಡ ಜನಪದ ಕಲೆಗಳು
ನಾಗರಾಜ್ megarajnaga ಸಮಯ7/23/2008 5:52 PM
ಜನಪದ ಸಾಹಿತ್ಯದಲ್ಲಿ ಗೀತೆಯೊಂದು ಪ್ರಮುಖ ಪ್ರಕಾರ. ಅದು ಮುಟ್ಟದ ವಸ್ತುವಿಲ್ಲ, ಸಂಸಾರದ ಮುಖಗಳೆಲ್ಲವೂ ಇಲ್ಲಿ ಚಿತ್ರಣಗೊಂಡಿವೆ. ತಾಯಿ ಮಗಳು, ಅತ್ತೆ ಸೊಸೆ, ಅಣ್ಣ ತಂಗಿ, ಅತ್ತಿಗೆ ನಾದಿನಿ ಮೈದುನರು, ಸವತಿ ಓರಗಿತ್ತಿಯರು, ಪತಿ ಪತ್ನಿಯರು, ತಂದೆ ಮಗ, ತವರು ಸೂಳೆಗಾರಿಕೆ, ಹೆಣ್ಣು ಜನ್ಮ, ಮಕ್ಕಳು ಮೊಮ್ಮಕ್ಕಳು, ಬಸಿರು ಬಯಕೆ, ಗೆಣೆಯ ಗೆಣೆತಿಯರು, ಸಾವು ನೋವು, ಬಾಣಂತಿತನ, ನೆಂಟರು, ಬಂಜೆತನ, ಪ್ರೇಮ ದ್ವೇಷ, ಮುನಿಸು ಜಗಳ ಹೀಗೆ ನೂರಾರು ಸಂಗತಿಗಳು ಇಡೀ ಹಳ್ಳಿಯ ಬದುಕಿನ ಉಸಿರು ಹಾಡಾಗಿ ಹೊಮ್ಮುತ್ತವೆ. ಹಾಡಿನ ಜೋಡಿಯಿಲ್ಲದೇ ಯಾವ ಕೆಲಸವೂ ಸಾಗುವುದಿಲ್ಲ. ಕುಟ್ಟುವುದು, ಬೀಸುವುದು, ಮೊಸರು ಕಡೆಯುವುದು, ಅಡಿಕೆ ಸುಲಿಯುವುದು, ಹಚ್ಚೆ ಹೊಯ್ಯುವುದು, ಮಗು ಮಲಗಿಸುವುದು, ಯಾವ ಕೆಲಸವೇ ಆಗಲಿ ಹಾಡು ಕಲಿತರೆ ಸರಾಗವಾಗಿ ಆಗುತ್ತದೆ. ಬೇಸಾಯ, ನೇಯ್ಗೆ ಮೊದಲಾದ ವೃತ್ತಿಗಳ, ಕುಣಿತಗಳ ಒಂದು ಅವಿಭಾಜ್ಯ ಅಂಗವಾಗಿ ಹಾಡು ಬರುತ್ತದೆ. ಬಿತ್ತನೆ ಮಾಡುವಾಗ, ಕೂರಿಗೆ ಹೊಡೆಯುವಾಗ, ನಾಟಿ ಹಾಕುವಾಗ, ಕಳೆ ಕೀಳುವಾಗ, ಹೊಲ ಕೊಯ್ಯುವಾಗ, ಕಾಳು ಒಕ್ಕುವಾಗ, ಮಣ್ಣು ಹೊರುವಾಗ, ಗಾಡಿ ಹೊಡೆಯುವಾಗ ಸಾಮೂಹಿಕವಾಗಿಯೊ, ವೈಯುಕ್ತಿಕವಾಗಿಯೊ ಗೀತಾಪ್ರವಾಹ ಹರಿಯಲೇ ಬೇಕು. ಹಬ್ಬ ಹರಿದಿನ ಮದುವೆಯೊಸಗೆ ಯಾವುದೇ ಶುಭಕಾರ್ಯವಾಗಲೀ ಶಾಸ್ತ್ರವೇ ಆಗಲೀ, ದೇವರಕಾರ್ಯವೇ ಆಗಲೀ ಹಾಡಿನಿಂದ ಮೊದಲಾಗಬೇಕು. ಹಾಡಿನಿಂದಲೇ ಅಂತ್ಯ ವಾಗಬೇಕು. ಬಹುತೇಕವಾಗಿ ಜನಪದಗೀತೆಗಳೆಲ್ಲ ಕ್ರಿಯಾತ್ಮಕವಾದುವು; ಯಾವುದಾದರೊಂದು ಕ ...
ಅಭಿಪ್ರಾಯ (3) ಮುಂದೆ ಓದಿ...

ಸಂಕ್ರಾಂತಿ
ನಾಗರಾಜ್ megarajnaga ಸಮಯ7/23/2008 5:44 PM
ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು.
ಸನಾತನ ಹಿಂದೂ ಧರ್ಮದ ಬುನಾದಿಯಾಗಿರುವ ವೇದಗಳ ಅಂಗಗಳೆಂದೇ ಪ್ರಸಿದ್ಧವಾಗಿರುವ ಆರು ವೇದಾಂಗಗಳಲ್ಲಿ ಒಂದಾದ ಜ್ಯೋತಿಷವನ್ನು ವೇದಗಳ ಕಣ್ಣೆಂದು ಗುರುತಿಸುತ್ತಾರೆ. ವೇದದಳ ಕಾಲದಿಂದಲೂ ಶುಭಕಾರ್ಯಗಳಿಗೆ ಮುಹೂರ್ತಾದಿ ಕಾಲವನ್ನು ನಿರ್ಣಯಿಸಿ, ಗ್ರಹಗಳ ಸ್ಥಿತಿ-ಗತಿ, ರಾಶಿ-ನಕ್ಷತ್ರ, ಗ್ರಹಣ, ಅಸ್ತೋದಯಗಳನ್ನು ನಿರ್ಣಯಿಸಿ, ಶುಭಾಶುಭ ಫಲಗಳನ್ನು ತೋರುತ್ತಾ, ಹಬ್ಬ-ಹರಿದಿನಗಳನ್ನು ಋತುಗಳಿಗನುಸಾರವಾಗಿ ಲೆಕ್ಕಾಚಾರ ಹಾಕಿ ಗುರುತಿಸುತ್ತಿದ್ದ ಶಾಸ್ತ್ರವೇ ಜ್ಯೋತಿಷ. ಈ ಶಾಸ್ತ್ರದಂತೆ, ಸೂರ್ಯನು ನಿರಯಣ ಮಕರರಾಶಿಯನ್ನು ಪ್ರವೇಶಿಸಿದಾಗ, "ಮಕರ ಸಂಕ್ರಾಂತಿ"ಯಾಗುತ್ತದೆ. ಈ ಕಾಲವು ಪ್ರತಿವರ್ಷ ಗ್ರೆಗೋರಿಯನ್ ಪಂಚಾಂಗದ ಜನವರಿ 14ರ ಸುಮಾರಿಗೆ ಬೀಳುತ್ತದೆ. ಹಿಂದೆ, ಈ ಕಾಲವೇ ಉತ್ತರಾಯಣ ಅಥವಾ ಸೂರ್ಯನ ಉತ್ತರದಿಕ್ಕಿನ ಪಯಣದ ಆರಂಭವನ್ನು ಸೂಚಿಸುವ ಕಾಲವೂ ಆಗಿತ್ತಾದ್ದರಿಂದ ಭೂಮಿಯ ಉತ್ತರಾರ್ಧಗೋಳದಲ್ಲಿ ಚಳಿ-ಬೆಚ್ಚನೆಯ ವಾತಾವ ...

ಅಭಿಪ್ರಾಯ (1) ಮುಂದೆ ಓದಿ...

ಕರ್ನಾಟಕದ ಜಾನಪದ
ನಾಗರಾಜ್ megarajnaga ಸಮಯ7/23/2008 5:38 PM
ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಾಲಿ
ಎಳ್ಳು ಜೀರಿಗೆ ಬೆಳಿಯೋ ಭೂಮಿತಾಯಿ
ಎದ್ದೊಂದು ಗಳಿಗೆ ನೆನೆದೇನು
ಮಣ್ಣಲ್ಲಿ ಹುಟ್ಟೋಳೆ ಮಣ್ಣಾಲಿ ಬೆಳೆವೋಳೆ
ಎಣ್ಣೇಲಿ ಕಣ್ಣಾಬಿಡುವೋಳೆ, ಜಗಜ್ಯೋತಿ
ಸತ್ಯಾದಿಂದುರಿಯೆ ನಮಗಾಗಿ
ತೊಟ್ಟಿಲು ಹೋತ್ಕೊಂಡು ತವರ್ಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮೆ ಹೋಡ್ಕೊಂಡು | ತೌರೂರ
ತಿಟ್ಟಹತ್ತಿ ತಿರುಗಿ ನೋಡ್ಯಾಳೊ
ಹೂಮಾಲೆಯಂಥ ಮೇಲಿನ ಸಾಲುಗಳನ್ನು ಯಾರು ಯಾವಾಗ ಬರೆದರೋ ಗೊತ್ತಿಲ್ಲ, ಇವು ನೂರಾರು ವರ್ಷಗಳಿಂದ ಸಾವಿರಾರು ಜನಗಳ ಬಾಯಿಂದ ಹರಿದು ಬಂದ ನುಡಿಗಳು, ನಮ್ಮ ಹಳ್ಳಿಗಳಲ್ಲಿ ಕಲೋಪಾಸಕತ್ವವನ್ನು, ಸೃಜನಶೀಲತೆಯನ್ನು, ಮತ್ತು ಮಾಧುರ್ಯವನ್ನು ಹಳ್ಳಿಗರಿಗೆ ತಿಳಿಯದಂತೆ ಅವರ ಜೀವನ ವಿಧಾನವನ್ನಾಗಿ ಪರಿವರ್ತಿಸಿದ ಸಂಸ್ಕೃತಿಯೊಂದರ ಹೆಜ್ಜೆಗುರುತುಗಳು.
ಪ್ರಾಯಶಃ ಸಹಸ್ರಾರು ವರ್ಷದ ಹಿಂದೆ ಜಗತ್ತಿನಲ್ಲೆಲ್ಲ ಇದ್ದುದ್ದು ಜಾನಪದವೊಂದೇ, ಮಾನವನು ತಾನು ಮಾಡುವ ಕೆಲಸಗಳಲ್ಲೆಲ್ಲಾ ತನ್ಮಯತೆಯನ್ನು ತುಂಬಲು ಮಾಡಿದ ಪ್ರಯತ್ನಗಳ ಸರಮಾಲೆಯೇ ಜಾನಪದವಾಗಿರಬಹುದು. ತನ್ನ ಸುತ್ತಲಿನ ಪರಿಸ್ಥಿತಿಗೆ ತಕ್ಕಂತೆ ತಂತ್ರಜ್ಞಾನಗಳನ್ನೂ, ಅರೋಗ್ಯ ರಕ್ಷಣೆಗೆ ವೈದ್ಯಕೀಯವನ್ನು, ಪ್ರಕೃತಿಯ ಬಿರುಸಿಗೆ ಉತ್ತರವಾಗಿ ಭಕ್ತಿಯನ್ನೂ ಬೆಳೆಸಿಕೊಂಡಿರಬಹುದು.
ಜನಪದ ಮತ್ತು ಜಾನಪದ ಎಂಬ ಶಬ್ದಗಳು ಒಂದು ಸಾಮಾಜಿಕ ವ್ಯವಸ್ಥೆಯನ್ನು ಸೂಚಿಸುತ್ತವೆ. ಪ್ರತಿಯೊಂದು ಸಾಮಾಜವೂ ತನ್ನ ಪುರಾತನರ ಸಾರವನ್ನು ಹೀರಿ ತನ್ನ ...

ಅಭಿಪ್ರಾಯ (2) ಮುಂದೆ ಓದಿ...

 Print   
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಆರ್ಕೈವ್
<October 2008>
SunMonTueWedThuFriSat
2829301234
567891011
12131415161718
19202122232425
2627282930311
2345678
ಪ್ರತಿ ತಿಂಗಳು
October, 2008
September, 2008
July, 2008
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:6
ಸದಸ್ಯರುಸದಸ್ಯರು:0
ಒಟ್ಟುಒಟ್ಟು:6

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use