ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಆಡಿದ ಮಾತು, ಬಿಟ್ಟ ಬಾಣ, ಗತಿಸಿಹೋದ ಕಾಲ ಇವು ಹಿಂತಿರುಗಿ ಬರುವುದಿಲ್ಲ. 

 Print   
ಸಿನೆ ಬಿಟ್ಸ್
ಬರಹಗಾರ:ರು. ಶಿ.  ಸಮಯ:12/30/2007 9:35 PM
ಕನ್ನಡ ಚಿತ್ರಗಳ ಸುದ್ದಿ ಹಾಗೂ ಗಾಸಿಪ್ ಇಲ್ಲಿ ಸುಮ್ನೆ ಗುಂಪಿನ ವತಿಯಿಂದ ಇಲ್ಲಿ ನಾವು ಬರೆಯುತ್ತೇವೆ.

ಮನೋಮೂರ್ತಿ ಈಗ ಸ್ತಾರ್!
ರು. ಶಿ. ಸಮಯ1/5/2008 12:04 AM
ಸಂಗೀತ ನಿರ್ದೇಶಕ ಮನೋಮೂರ್ತಿಯವರನ್ನು ಈ ವರ್ಷದ 'ಸ್ಟಾರ್' ಎನ್ನಬಹುದು. ಅವರು ಸಂಗೀತ ನೀಡಿದ ಎಲ್ಲಾ ಚಿತ್ರಗಳೂ ಯಶಸ್ವಿಯಾಗಿವೆ. 'ಮುಂಗಾರು ಮಳೆ', 'ಮಿಲನ', 'ಚೆಲುವಿನ ಚಿತ್ತಾರ', 'ಗೆಳೆಯ'.......ಹೀಗೆ ಸಾಗುತ್ತದೆ ಅವರ ಯಶಸ್ಸು. ಬೆಂಗಳೂರಿನ ಯು.ವಿ.ಸಿ.ಇ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ, ಅಮೆರಿಕದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಮನೋಮೂರ್ತಿಯವರು ಈಗ ಅಲ್ಲಿನ ಕೆಲಸಕ್ಕೆ ರಾಜಿನಾಮೆಕೊಟ್ಟು ಫುಲ್ ಟೈಮ್ ಸಂಗೀತ ನಿರ್ದೇಶನಕ್ಕಿಳಿದಿದ್ದಾರೆ. ಅವರ ಕೈಯಲ್ಲಿ ಈಗ ಏನಿಲ್ಲವೆಂದರೂ 20 ಕನ್ನಡ ಚಿತ್ರಗಳಿವೆ. ಅವರ ಗೆಲುವು ಹೀಗೇ ಸಾಗಲಿ ಎಂದು ಹಾರೈಸೋಣ.
ಅಭಿಪ್ರಾಯ (4) ಮುಂದೆ ಓದಿ...

ಸಿನಿಮಾ ನೂರು......ಥಿಯೇಟರ್ ಕೊಡುವವರಾರು........?
ರು. ಶಿ. ಸಮಯ1/2/2008 5:32 AM
'ಮುಂಗಾರು ಮಳೆ' ಹಾಗು 'ದುನಿಯಾ' ಚಿತ್ರಗಳ ಗೆಲುವು ಕನ್ನಡ ಚಿತ್ರಗಳ ನಿರ್ಮಾಪಕರ ಸಂಖ್ಯೆವನ್ನೂ ಹೆಚ್ಚಿಸಿದೆ. ಮೆಜೆಸ್ಟಿಕ್ ನಲ್ಲಿರುವ ಬೆರೆಳೆಣಿಕೆಯಷ್ಟು ಚಿತ್ರಮಂದಿರಗಳಿಗಾಗಿ ಬೆಟ್ಟದಷ್ಟು ಸಿನಿಮಾಗಳು ಕಾದು ಕುಳಿತಿವೆ. ದರ್ಶನ್ ಅಭಿನಯದ 'ಗಜ' ರೆಡಿಯಾಗಿ ಎರಡು..ಮೂರು ತಿಂಗಳುಗಳೇ ಆಗಿವೆ. 'ಗಾಳಿಪಟ' ಇದೇ ತಿಂಗಳು ತೆರೆ ಕಾಣಬೇಕಿತ್ತು. ಸೂರಿ ನಿರ್ದೇಶನದ 'ಇಂತಿ ನಿನ್ನ ಪ್ರೀತಿಯ' ಸಹ ಶೂಟಿಂಗ್ ಮುಗಿಸಿದೆ. 'ಹೊಂಗನಸು' ಸಹ ರಿಲೀಸ್ ಗೆ ರೆಡಿಯಾಗಿದೆಯಂತೆ. ಸುದೀಪ್ ಅಭಿನಯದ 'ಗೂಳಿ' ಸಹ ಸಿದ್ಧವಾಗಿದೆ. 'ಗಂಗೇ ಬಾರೆ, ತುಂಗೇ ಬಾರೆ' ಯ ಡಬ್ಬಿಂಗ್ ಕೆಲಸ ಸಾಗುತ್ತಿದೆ. 'ಮೊಗ್ಗಿನ ಮನಸ್ಸು' ಚಿತ್ರ ಸಹ ಚಿತ್ರಮಂದಿರಕ್ಕೆ ಎದುರು ನೋಡುತ್ತಿದೆ. ಅಂತೂ 'ಮಳೆ' ಕನ್ನಡ ಚಿತ್ರರಂಗದ 'ದುನಿಯಾ'ದಲ್ಲಿ ಈ ಬಗೆಯ ಬರಗಾಲ ತಂದಿದೆ.
ಅಭಿಪ್ರಾಯ (2) ಮುಂದೆ ಓದಿ...

ಕ್ಷಮೆ ಇರಲಿ
ರು. ಶಿ. ಸಮಯ1/2/2008 5:18 AM
"ಗೊತ್ತಾಗದೆ ಎರಡು ಕೆಟ್ಟ ಚಿತ್ರಗಳಲ್ಲಿ ಅಭಿನಯಿಸಿದೆ. ಇನ್ನು ಮುಂದೆ ಹೀಗೆ ಮಾಡುವುದಿಲ್ಲ. ಎಚ್ಚರಿಕೆಯಿಂದ ಪಾತ್ರಗಳನ್ನು ಆಯ್ದುಕೊಳ್ಳುತ್ತೇನೆ" ಹೀಗೆಂದು ಎಲ್ಲಾ ಪತ್ರಿಕೆಗಳಲ್ಲೂ ಜಾಹೀರಾತು ಕೊಟ್ಟವರು "ನೆನಪಿರಲಿ" ಚಿತ್ರದ ನಾಯಕ "ಪ್ರೇಮ್". "ಪ್ರಾಣ" ಎನ್ನುವ ಡಬ್ಬಾ ಸಿನಿಮಾದಲ್ಲಿ ನಟಿಸಿದ್ದ ಈ ನಟನಿಗೆ, ಚಿತ್ರರಂಗದಲ್ಲಿ ಪ್ರಾಣ ನೀಡಿದವರು ನಿರ್ದೇಶಕ ರತ್ನಜ ಹಾಗು ಸಂಗೀತ ನಿರ್ದೇಶಕರಾದ ಹಂಸಲೇಖ. ಆದರೆ ಇತ್ತೀಚಿಗಿನ ಪ್ರೇಮ್ ರ ಎಲ್ಲಾ ಸಿನಿಮಾಗಳು ನೆಲಕಚ್ಛುತ್ತಿವೆ. 'ಸವಿನೆನಪು', 'ಗುಣವಂತ', 'ಪಲ್ಲಕ್ಕಿ'.......ಒಂದರಮೇಲೊಂದು ಫ್ಲಾಪ್ ಸಿನಿಮಾಗಳು. ಅದಕ್ಕಾಗಿ ಅವರು ಕ್ಷಮೆ ಕೇಳಿದ್ದಾರೆ. ಅಂದಹಾಗೆ ಪ್ರೇಮ್ ರ ಮುಂದಿನ ಚಿತ್ರ ರತ್ನಜ ನಿರ್ದೇಶನದ 'ಹೊಂಗನಸು'. ಮತ್ತೊಮ್ಮೆ ಪ್ರೇಮ್ ರ ಪ್ರಾಣ ಕೊಡಲು ಅವರೇ ಬರಬೇಕೇನೋ!
ಅಭಿಪ್ರಾಯ (1) ಮುಂದೆ ಓದಿ...

ಪ್ರೀತಿ ಇಲ್ಲದ ಮೇಲೆ
ರು. ಶಿ. ಸಮಯ1/2/2008 5:05 AM
ಜೋಗಿಯ "ಜೋಶ್" ನಲ್ಲಿದ್ದ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ರ ಜೋಶ್ ಈಗ ಸಂಪೂರ್ಣವಾಗಿ ಇಳಿದು ಹೋಗಿದೆ. ಪ್ರೇಮ್ ಎಂಬ ಕಪ್ಪು ಮುಸುಡಿಯನ್ನು ನಾಯಕನಾಗಿ ಮಾಡಿ, ಆತನಿಗೆ ನಿರ್ದೇಶನದ ಉಸ್ತುವಾರಿಯನ್ನೂ ಕೊಟ್ಟು ಸುಮ್ಮನ್ನಿದ್ದ ರಾಂಪ್ರಸಾದ್ ರ ಔದಾರ್ಯವನ್ನು ಪೂರ್ತಿ ಉಪಯೋಗಿಸಿಕೊಂಡ ಪ್ರೇಮ್ "ಪ್ರೀತಿ ಏಕೆ ಭೂಮಿ ಮೇಲಿದೆ........" ಎಂದು ಕಂಡು ಹಿಡಿಯಲು ಬರೋಬ್ಬರಿ ಎರಡು ವರ್ಷ ತೆಗೆದುಕೊಂಡಿದ್ದರು. ಅದಲ್ಲದೆ ಸುಮಾರು ಎರಡು‍..ಮೂರು ಚಿತ್ರಗಳಿಗಾಗುವಷ್ಟು ರೀಲನ್ನೂ ತಿಂದಿದ್ದರು. ತಮ್ಮ ಜೇಬು ಪೂರ್ತಿ ಖಾಲಿಯಾದ ಮೇಲೆ ರಾಮ್ ಪ್ರಸಾದ್ ಸಹ ಹುಷಾರಾದರು. ಅಂತೂ ಕೊನೆಗೆ ಪ್ರೀತಿ ಭೂಮಿ ಮೇಲೆ....ಚಿತ್ರ ಚೆನ್ನಾಗಿಲ್ಲ ಎಂಬುದು ಎಲ್ಲರ ಅಭಿಪ್ರಾಯ. ಚಿತ್ರದ ಮೇಲೆ ಪ್ರೀತಿ ಇರದೆ ಅದು "ರಕ್ಷಿತಾ" ಕಡೆಗೆ ಹರಿದು ಹೋಗಿದೆ ಎನ್ನುವುದು ಈಗ ಕಾಮೆಂಟು!
ಅಭಿಪ್ರಾಯ (2) ಮುಂದೆ ಓದಿ...

ಹೇಮಾಮಾಲಿನಿ ಬರೋಲ್ಲ ಅಂದರಂತೆ!
ರು. ಶಿ. ಸಮಯ12/31/2007 2:53 AM
ನಿರ್ದೇಶಕ ನಾಗೆಂದ್ರ ಪ್ರಸಾದ್ ಹೊಸದೊಂದು ಸಿನೆಮಾ ಮಾಡುತ್ತಿದ್ದಾರೆ. ಈ ಸಿನೆಮಾಕ್ಕೆ ಹಿಂದಿಯ ಹೇಮಾಮಾಲಿನಿಯವರನ್ನು ಕರೆದು ತರುವ ಇರಾದೆ ಅವರಿಗಿತ್ತು. ಅದಕ್ಕಾಗಿ ಅವರು ಹೇಮಾಮಾಲಿನಿಯನ್ನು ಸಂಪರ್ಕಿಸಿದಾಗ ಅವರು ಬಿಲ್ ಕುಲ್ ಬರೊಲ್ಲ ಅಂದರಂತೆ. ಕಾರಣವೇನು ಅಂತ ಕೇಳಿದರೆ, ದಕ್ಷಿಣ ಭಾರತದ ಸಿನೆಮಾಗಳಲ್ಲಿ ನಟಿಸುವುದಾದರೆ ಅದು ಕೇವಲ ರಜನೀಕಾಂತ್ ಜೊತೆ ಮಾತ್ರ ಎಂದು ಅವರು ಹೇಳಿದರಂತೆ. ಅಮಿತಾಬ್ ಬಚ್ಚನ್ ಅವರೇ ಕನ್ನಡದಲ್ಲಿ ನಟಿಸಿರುವಾಗ, ಹೇಮಾಮಾಲಿನಿ ಹೀಗೆ ಹೇಳಬಾರದಿತ್ತು, ಅಲ್ವಾ?
ಅಭಿಪ್ರಾಯ (1) ಮುಂದೆ ಓದಿ...

 Print   
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಆರ್ಕೈವ್
<January 2009>
SunMonTueWedThuFriSat
28293031123
45678910
11121314151617
18192021222324
25262728293031
1234567
ಪ್ರತಿ ತಿಂಗಳು
January, 2008
December, 2007
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:tharakeshwar
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:0
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:1
ಸದಸ್ಯರ ಅಕೌಂಟ್ಒಟ್ಟು:194

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:6
ಸದಸ್ಯರುಸದಸ್ಯರು:0
ಒಟ್ಟುಒಟ್ಟು:6

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use