| ಭಟ್ಟರು ಮಾಡಿದ ಗಾಳಿಪಟ... ಬಣ್ಣದ ಹಾಳೆಯ ಗಾಳಿಪಟ | |
| ರು. ಶಿ. ಸಮಯ1/24/2008 4:43 AM | |
| "ಮಿಂಚಂತೆ ನೀನು ಬರಲು..." ಎಂದು ಚಿತ್ರ ಆರಂಭವಾದ ಸ್ವಲ್ಪ ಹೊತ್ತಿನ ನಂತರ ಹಾಡೊಂದು ಶುರುವಾಗುತ್ತದೆ. ತಣ್ಣಗೆ ತರಲೆ ಮಾಡಿಕೊಂಡಿದ್ದ ಮೂವರು ಹುಡುಗರು ಮಲೆನಾಡಿನ ಮನೆಯೊಂದಕ್ಕೆ ಔಟಿಂಗ್ ಗೆಂದು ಹೋಗಿರುವಾಗ, ಜಡಿ ಮಳೆಯ ನಡುವೆ ಆ ಮೂವರು ಹುಡುಗರ ಜೇವನದಲ್ಲಿ ಮಿಂಚಿನಂತೆಯೇ ಹುಡುಗಿಯರು ಆಗಲೇ ಪ್ರವೇಶಿಸುತ್ತಾರೆ.
|  | | ಅಭಿಪ್ರಾಯ (1) |
ಮುಂದೆ ಓದಿ... |
|
| ಮನೋಮೂರ್ತಿ ಈಗ ಸ್ತಾರ್! | |
ಸಿನೆ ಬಿಟ್ಸ್ | ರು. ಶಿ. ಸಮಯ1/5/2008 12:04 AM | |
| ಸಂಗೀತ ನಿರ್ದೇಶಕ ಮನೋಮೂರ್ತಿಯವರನ್ನು ಈ ವರ್ಷದ 'ಸ್ಟಾರ್' ಎನ್ನಬಹುದು. ಅವರು ಸಂಗೀತ ನೀಡಿದ ಎಲ್ಲಾ ಚಿತ್ರಗಳೂ ಯಶಸ್ವಿಯಾಗಿವೆ. 'ಮುಂಗಾರು ಮಳೆ', 'ಮಿಲನ', 'ಚೆಲುವಿನ ಚಿತ್ತಾರ', 'ಗೆಳೆಯ'.......ಹೀಗೆ ಸಾಗುತ್ತದೆ ಅವರ ಯಶಸ್ಸು. ಬೆಂಗಳೂರಿನ ಯು.ವಿ.ಸಿ.ಇ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ, ಅಮೆರಿಕದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಮನೋಮೂರ್ತಿಯವರು ಈಗ ಅಲ್ಲಿನ ಕೆಲಸಕ್ಕೆ ರಾಜಿನಾಮೆಕೊಟ್ಟು ಫುಲ್ ಟೈಮ್ ಸಂಗೀತ ನಿರ್ದೇಶನಕ್ಕಿಳಿದಿದ್ದಾರೆ. ಅವರ ಕೈಯಲ್ಲಿ ಈಗ ಏನಿಲ್ಲವೆಂದರೂ 20 ಕನ್ನಡ ಚಿತ್ರಗಳಿವೆ. ಅವರ ಗೆಲುವು ಹೀಗೇ ಸಾಗಲಿ ಎಂದು ಹಾರೈಸೋಣ.
|  | | ಅಭಿಪ್ರಾಯ (4) |
ಮುಂದೆ ಓದಿ... |
|
| ಸಿನಿಮಾ ನೂರು......ಥಿಯೇಟರ್ ಕೊಡುವವರಾರು........? | |
ಸಿನೆ ಬಿಟ್ಸ್ | ರು. ಶಿ. ಸಮಯ1/2/2008 5:32 AM | |
| 'ಮುಂಗಾರು ಮಳೆ' ಹಾಗು 'ದುನಿಯಾ' ಚಿತ್ರಗಳ ಗೆಲುವು ಕನ್ನಡ ಚಿತ್ರಗಳ ನಿರ್ಮಾಪಕರ ಸಂಖ್ಯೆವನ್ನೂ ಹೆಚ್ಚಿಸಿದೆ. ಮೆಜೆಸ್ಟಿಕ್ ನಲ್ಲಿರುವ ಬೆರೆಳೆಣಿಕೆಯಷ್ಟು ಚಿತ್ರಮಂದಿರಗಳಿಗಾಗಿ ಬೆಟ್ಟದಷ್ಟು ಸಿನಿಮಾಗಳು ಕಾದು ಕುಳಿತಿವೆ. ದರ್ಶನ್ ಅಭಿನಯದ 'ಗಜ' ರೆಡಿಯಾಗಿ ಎರಡು..ಮೂರು ತಿಂಗಳುಗಳೇ ಆಗಿವೆ. 'ಗಾಳಿಪಟ' ಇದೇ ತಿಂಗಳು ತೆರೆ ಕಾಣಬೇಕಿತ್ತು. ಸೂರಿ ನಿರ್ದೇಶನದ 'ಇಂತಿ ನಿನ್ನ ಪ್ರೀತಿಯ' ಸಹ ಶೂಟಿಂಗ್ ಮುಗಿಸಿದೆ. 'ಹೊಂಗನಸು' ಸಹ ರಿಲೀಸ್ ಗೆ ರೆಡಿಯಾಗಿದೆಯಂತೆ. ಸುದೀಪ್ ಅಭಿನಯದ 'ಗೂಳಿ' ಸಹ ಸಿದ್ಧವಾಗಿದೆ. 'ಗಂಗೇ ಬಾರೆ, ತುಂಗೇ ಬಾರೆ' ಯ ಡಬ್ಬಿಂಗ್ ಕೆಲಸ ಸಾಗುತ್ತಿದೆ. 'ಮೊಗ್ಗಿನ ಮನಸ್ಸು' ಚಿತ್ರ ಸಹ ಚಿತ್ರಮಂದಿರಕ್ಕೆ ಎದುರು ನೋಡುತ್ತಿದೆ. ಅಂತೂ 'ಮಳೆ' ಕನ್ನಡ ಚಿತ್ರರಂಗದ 'ದುನಿಯಾ'ದಲ್ಲಿ ಈ ಬಗೆಯ ಬರಗಾಲ ತಂದಿದೆ.
|  | | ಅಭಿಪ್ರಾಯ (2) |
ಮುಂದೆ ಓದಿ... |
|
| ಕ್ಷಮೆ ಇರಲಿ | |
ಸಿನೆ ಬಿಟ್ಸ್ | ರು. ಶಿ. ಸಮಯ1/2/2008 5:18 AM | |
| "ಗೊತ್ತಾಗದೆ ಎರಡು ಕೆಟ್ಟ ಚಿತ್ರಗಳಲ್ಲಿ ಅಭಿನಯಿಸಿದೆ. ಇನ್ನು ಮುಂದೆ ಹೀಗೆ ಮಾಡುವುದಿಲ್ಲ. ಎಚ್ಚರಿಕೆಯಿಂದ ಪಾತ್ರಗಳನ್ನು ಆಯ್ದುಕೊಳ್ಳುತ್ತೇನೆ" ಹೀಗೆಂದು ಎಲ್ಲಾ ಪತ್ರಿಕೆಗಳಲ್ಲೂ ಜಾಹೀರಾತು ಕೊಟ್ಟವರು "ನೆನಪಿರಲಿ" ಚಿತ್ರದ ನಾಯಕ "ಪ್ರೇಮ್". "ಪ್ರಾಣ" ಎನ್ನುವ ಡಬ್ಬಾ ಸಿನಿಮಾದಲ್ಲಿ ನಟಿಸಿದ್ದ ಈ ನಟನಿಗೆ, ಚಿತ್ರರಂಗದಲ್ಲಿ ಪ್ರಾಣ ನೀಡಿದವರು ನಿರ್ದೇಶಕ ರತ್ನಜ ಹಾಗು ಸಂಗೀತ ನಿರ್ದೇಶಕರಾದ ಹಂಸಲೇಖ. ಆದರೆ ಇತ್ತೀಚಿಗಿನ ಪ್ರೇಮ್ ರ ಎಲ್ಲಾ ಸಿನಿಮಾಗಳು ನೆಲಕಚ್ಛುತ್ತಿವೆ. 'ಸವಿನೆನಪು', 'ಗುಣವಂತ', 'ಪಲ್ಲಕ್ಕಿ'.......ಒಂದರಮೇಲೊಂದು ಫ್ಲಾಪ್ ಸಿನಿಮಾಗಳು.
ಅದಕ್ಕಾಗಿ ಅವರು ಕ್ಷಮೆ ಕೇಳಿದ್ದಾರೆ.
ಅಂದಹಾಗೆ ಪ್ರೇಮ್ ರ ಮುಂದಿನ ಚಿತ್ರ ರತ್ನಜ ನಿರ್ದೇಶನದ 'ಹೊಂಗನಸು'.
ಮತ್ತೊಮ್ಮೆ ಪ್ರೇಮ್ ರ ಪ್ರಾಣ ಕೊಡಲು ಅವರೇ ಬರಬೇಕೇನೋ!
|  | | ಅಭಿಪ್ರಾಯ (1) |
ಮುಂದೆ ಓದಿ... |
|
| ಪ್ರೀತಿ ಇಲ್ಲದ ಮೇಲೆ | |
ಸಿನೆ ಬಿಟ್ಸ್ | ರು. ಶಿ. ಸಮಯ1/2/2008 5:05 AM | |
| ಜೋಗಿಯ "ಜೋಶ್" ನಲ್ಲಿದ್ದ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ರ ಜೋಶ್ ಈಗ ಸಂಪೂರ್ಣವಾಗಿ ಇಳಿದು ಹೋಗಿದೆ. ಪ್ರೇಮ್ ಎಂಬ ಕಪ್ಪು ಮುಸುಡಿಯನ್ನು ನಾಯಕನಾಗಿ ಮಾಡಿ, ಆತನಿಗೆ ನಿರ್ದೇಶನದ ಉಸ್ತುವಾರಿಯನ್ನೂ ಕೊಟ್ಟು ಸುಮ್ಮನ್ನಿದ್ದ ರಾಂಪ್ರಸಾದ್ ರ ಔದಾರ್ಯವನ್ನು ಪೂರ್ತಿ ಉಪಯೋಗಿಸಿಕೊಂಡ ಪ್ರೇಮ್ "ಪ್ರೀತಿ ಏಕೆ ಭೂಮಿ ಮೇಲಿದೆ........" ಎಂದು ಕಂಡು ಹಿಡಿಯಲು ಬರೋಬ್ಬರಿ ಎರಡು ವರ್ಷ ತೆಗೆದುಕೊಂಡಿದ್ದರು. ಅದಲ್ಲದೆ ಸುಮಾರು ಎರಡು..ಮೂರು ಚಿತ್ರಗಳಿಗಾಗುವಷ್ಟು ರೀಲನ್ನೂ ತಿಂದಿದ್ದರು. ತಮ್ಮ ಜೇಬು ಪೂರ್ತಿ ಖಾಲಿಯಾದ ಮೇಲೆ ರಾಮ್ ಪ್ರಸಾದ್ ಸಹ ಹುಷಾರಾದರು. ಅಂತೂ ಕೊನೆಗೆ ಪ್ರೀತಿ ಭೂಮಿ ಮೇಲೆ....ಚಿತ್ರ ಚೆನ್ನಾಗಿಲ್ಲ ಎಂಬುದು ಎಲ್ಲರ ಅಭಿಪ್ರಾಯ. ಚಿತ್ರದ ಮೇಲೆ ಪ್ರೀತಿ ಇರದೆ ಅದು "ರಕ್ಷಿತಾ" ಕಡೆಗೆ ಹರಿದು ಹೋಗಿದೆ ಎನ್ನುವುದು ಈಗ ಕಾಮೆಂಟು!
|  | | ಅಭಿಪ್ರಾಯ (2) |
ಮುಂದೆ ಓದಿ... |
|
| ಹೇಮಾಮಾಲಿನಿ ಬರೋಲ್ಲ ಅಂದರಂತೆ! | |
ಸಿನೆ ಬಿಟ್ಸ್ | ರು. ಶಿ. ಸಮಯ12/31/2007 2:53 AM | |
| ನಿರ್ದೇಶಕ ನಾಗೆಂದ್ರ ಪ್ರಸಾದ್ ಹೊಸದೊಂದು ಸಿನೆಮಾ ಮಾಡುತ್ತಿದ್ದಾರೆ. ಈ ಸಿನೆಮಾಕ್ಕೆ ಹಿಂದಿಯ ಹೇಮಾಮಾಲಿನಿಯವರನ್ನು ಕರೆದು ತರುವ ಇರಾದೆ ಅವರಿಗಿತ್ತು. ಅದಕ್ಕಾಗಿ ಅವರು ಹೇಮಾಮಾಲಿನಿಯನ್ನು ಸಂಪರ್ಕಿಸಿದಾಗ ಅವರು ಬಿಲ್ ಕುಲ್ ಬರೊಲ್ಲ ಅಂದರಂತೆ. ಕಾರಣವೇನು ಅಂತ ಕೇಳಿದರೆ, ದಕ್ಷಿಣ ಭಾರತದ ಸಿನೆಮಾಗಳಲ್ಲಿ ನಟಿಸುವುದಾದರೆ ಅದು ಕೇವಲ ರಜನೀಕಾಂತ್ ಜೊತೆ ಮಾತ್ರ ಎಂದು ಅವರು ಹೇಳಿದರಂತೆ. ಅಮಿತಾಬ್ ಬಚ್ಚನ್ ಅವರೇ ಕನ್ನಡದಲ್ಲಿ ನಟಿಸಿರುವಾಗ, ಹೇಮಾಮಾಲಿನಿ ಹೀಗೆ ಹೇಳಬಾರದಿತ್ತು, ಅಲ್ವಾ?
|  | | ಅಭಿಪ್ರಾಯ (1) |
ಮುಂದೆ ಓದಿ... |
|
| ಈ ಪ್ರೀತಿ ಏಕೆ ಭೂಮಿ ಮೇಲಿದೆ? | |
| ರು. ಶಿ. ಸಮಯ12/31/2007 2:26 AM | |
| ಈ ಪ್ರೀತಿ ಏಕೆ ಹೀಗಿದೆ?
"ಈ ಪ್ರೀತಿ ಏಕೆ ಭೂಮಿ ಮೇಲಿದೆ?" ಇದು ಚಿತ್ರದ ಆರಂಭದಲ್ಲೇ ನಿರ್ದೇಶಕ ಕಮ್ ನಾಯಕ ಪ್ರೇಮ್ ರನ್ನು ಕಾಡುವ ಪ್ರಶ್ನೆ. ಅದಕ್ಕಾಗಿ ಅವರು ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಅವರನ್ನು ಸೇರಿದಂತೆ ಅನೇಕರ ಅಭಿಪ್ರಾಯವನ್ನು ಪಡೆದುಕೊಳ್ಳುತ್ತಾರೆ. ಜೊತೆಗೆ ಅಂಬರೀಶ್ ಹಾಗೂ ವಿನಯಾಪ್ರಾಸಾದ್ ಇಬ್ಬರೂ ಸ್ಮಶಾನವೊಂದರಲ್ಲಿ ಕುಳಿತು "ಈ ಪ್ರೀತಿ ಏಕೆ ಭೂಮಿ ಮೇಲಿದೆ?" ಎಂದು ಚರ್ಚೆ ಮಾಡುತ್ತಾರೆ. ನಂತರವಷ್ಟೇ ಪ್ರೇಮ್ ತೆರೆಯ ಮೇಲೆ ಬಂದು "ಈ ಪ್ರೀತಿ ಏಕೆ ಭೂಮಿ ಮೇಲಿದೆ?" ಎಂದು ಹಾಡಿ ಕುಣಿಯುತ್ತಾರೆ. "ದೇವರು ತನಗಾಗಿಯೆ ಹೆಣ್ಣೊಬ್ಬಳನ್ನು ಸ್ಱುಷ್ಟಿಸಿದ್ದಾನೆ. ಅವಳು ನನಗೇ ಮೀಸಲು. ಅವಳೇ ನನ್ನ ಜೀವನ ಸಂಗಾತಿ" ಇದು ಪ್ರೇಮ್ ಎಂಬ ಪ್ರೇಮಿಯ ವಾದ.
|  | | ಅಭಿಪ್ರಾಯ (2) |
ಮುಂದೆ ಓದಿ... |
|