ಸದಸ್ಯರಾಗಿ  ಲಾಗಿನ್
ನೀವಿರುವ ಸ್ಥಳ: ಬ್ಲಾಗ್
ಸೂಚನೆ: ಸುಮ್ನೆ ಬ್ಲಾಗ್ ಕೇವಲ ಕನ್ನಡದ ಪ್ರಚಾರಕ್ಕಾಗಿ ಸೄಷ್ಟಿಸಿರುವ ಒಂದು ವೇದಿಕೆ.  ದಯವಿಟ್ಟು ಅನ್ಯ ಭಾಷೆಯನ್ನು ಈ ತಾಣದಲ್ಲಿ ಉಪಯೋಗಿಸಬಾರದು.  ಸರ್ವರೂ ಸಹಕರಿಸಬೇಕೆಂದು ಕೋರಲಾಗಿದೆ.
ಸವಿ ಮಾತು...

ಜನರು ತಾವು ಎಸಗುವ ತಪ್ಪುಗಳಿಗೆ ಹಚ್ಚುವ ಹಣೆಪಟ್ಟಿ 'ಅನುಭವ'.

 Print   
ಇತ್ತೀಚಿನ ಬರಹಗಳು
ಸಂಘಂ ರೇಡಿಯೋ 90.4
ನನಗೆ ತೋಚಿದ್ದು ನಾಗರಾಜ್ megarajnaga ಸಮಯ10/17/2008 11:54 AM
ಭಾರತದ ಮೊಟ್ಟಮೊದಲ ಸಮುದಾಯ ರೇಡಿಯೋ ಆಗಿ ಅಂದ್ರಪ್ರದೇಶದ "ಸಂಘಂ ರೇಡಿಯೋ" (ಸಂಘದ ರೇಡಿಯೋ) 90.4 ತರಂಗಗಳಲ್ಲಿ ಅಕ್ಟೋಬರ್ 15 ರಂದು ಪ್ರಾರಂಭವಾಯಿತು. ಇದು ಇರುವುದು ಅಂದ್ರಪ್ರದೇಶದ ಮೆದಕ್ ಜಿಲ್ಲೆಯ, ಜಹೀರಾಬಾದ್ ತಾಲ್ಲೂಕಿಗೆ ಸೇರಿದ ಪಸ್ತಾಪುರ್ ಹತ್ತಿರದ ಮಾಚನೂರು ಗ್ರಾಮದಲ್ಲಿ. ಇಲ್ಲಿಂದ ಸುಮಾರು 30 ಕಿ.ಮೀ ದೂರ ಹೋದರೆ ನಮ್ಮ ಕರ್ನಾಟಕದ ಬೀದರ್ ಸಿಗುತ್ತದೆ. ಮಾಚನೂರು ತಲುಪಲು ಅಂದ್ರಪ್ರದೇಶದ ರಾಜಧಾನಿಯಾದ ಹೈದರಾಬಾದ್ ನಿಂದ 3 ಘಂಟೆಗಳ ಕಾಲ ಬಸ್ ಪ್ರಯಾಣ ಮಾಡಬೇಕು ಅಥವಾ ಬೀದರ್ ನಿಂದ ಬರಬಹುದು. ಈ ಸಂಘಂ ರೇಡಿಯೋವನ್ನು ನಿರ್ವಹಿಸುತ್ತಿರುವವರು ದಲಿತ ಕುಟುಂಬದಿಂದ ಬಂದ ಇಬ್ಬರು ಹೆಣ್ಣುಮಕ್ಕಳು ಇವರು ಹೆಚ್ಚಾಗಿ ಸಹ ಓದಿಲ್ಲ ಕೇವಲ 10ನೇ ತರಗತಿಯ ತನಕ ವಿದ್ಯಾಭ್ಯಾಸವನ್ನು ಮಾಡಿದ್ದು ಸುಮಾರು ವರ್ಷಗಳಿಂದ ಇಲ್ಲಿಯೇ ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ. ಇಲ್ಲಿಯ ಕಾರ್ಯಕ್ರಮಗಳು ಗ್ರಾಮೀಣ ರೀತಿಯಲ್ಲಿ ಇರುತ್ತದೆ. ಯಾವುದೇ ಸಂಗೀತ ಇಲ್ಲ, ಯಾವುದೇ ಚಲನ ಚಿತ್ರಗೀತೆ ಇಲ್ಲ, ಬದಲಾಗಿ ಪೂರ್ತಿಯಾಗಿ ಸ್ಥಳೀಯ ಜನರು ಹಾಡಿದ ಹಾಡುಗಳು, ಸಾವಯವ ಕೃಷಿ ಬಗ್ಗೆ, ಆರೋಗ್ಯದ ಬಗ್ಗೆ, ಹಬ್ಬಗಳ ಬಗ್ಗೆ, ಮತ್ತು ಆ ಭಾಗದಲ್ಲಿ ಹರಿಕಥೆಯಂತೆ ಹಾಡುವ ಕಲಾವಿದರಿಂದ ಹಾಡುಗಾರಿಗೆ ಮತ್ತು ಕಥೆ ಹೇಳುವುದು ಇತ್ಯಾದಿಗಳು.
ಇದರ ಜೊತೆಗೆ ಇವರು ವಿಡಿಯೋ ಸಹ ಮಾಡುತ್ತಿದ್ದಾರೆ. ಇದನ್ನು ಮಾಡುವವರು ಸಹ ಮಹಿಳೆಯರು ಇವರು ಸಹ 10 ರತನಕ ಸಹ ಓದಿಲ್ಲ ಇವರು ವಿಡಿಯೋ ಕ್ಯಾಮರ ಕೈಲ್ಲಿ ಹಿ ...

ಅಭಿಪ್ರಾಯ (5) ಮುಂದೆ ಓದಿ...

ಕರಿ ಬೇವು
ಕೈಲಾಸದಿಂದ...ವಿಙ್ಞನ ವಿಷಯ... shankar kailasa ಸಮಯ10/8/2008 8:53 PM
ಸ‌ಂಸ್ಕ್ರುತದಲ್ಲಿ : ಸುರಭಿ ನಿಂಬ, ಕ್ರುಷ್ಣ ನಿಂಬ‌ ಹಿಂದಿಯಲ್ಲಿ : ಮೀರಾ ನೀಮ್
ಅಭಿಪ್ರಾಯ (0) ಮುಂದೆ ಓದಿ...

ಪುಟ್ಟ ಪ್ರಪಂಚ‌
ಭಾವ ತರಂಗ‌ rekhamurthy ಸಮಯ10/6/2008 7:01 PM
ನನ್ನ ಪ್ರಪಂಚದ ಪರಿದಿ
ಅಭಿಪ್ರಾಯ (2) ಮುಂದೆ ಓದಿ...

ತರ್ಲೆ ಮಾತು.
ಅನಿಸಿಕೆ Srikanth sriki ಸಮಯ10/6/2008 2:59 PM
*) ಮೊನ್ನೆ ರೇಡಿಯೋಸಿಟಿಯ ಕಾರ್ಯಕ್ರಮದಲ್ಲಿ, ಕೇಳಿದ ಪ್ರಶ್ನೆ ಇದು
ಅಭಿಪ್ರಾಯ (2) ಮುಂದೆ ಓದಿ...

ವಿಕಾಸ ವಾದ
ಅನಿಸಿಕೆ Srikanth sriki ಸಮಯ10/6/2008 2:58 PM
ಕೇಕೆ ಹಾಕಿ .......................
ಅಭಿಪ್ರಾಯ (2) ಮುಂದೆ ಓದಿ...

ದಸರಾ ಹಬ್ಬ
ನನಗೆ ತೋಚಿದ್ದು ನಾಗರಾಜ್ megarajnaga ಸಮಯ9/30/2008 4:11 PM
ದಸರಾ ಹಬ್ಬವು ನಮ್ಮ ಕನ್ನಡಿಗರ ನಾಡ ಹಬ್ಬ. ವಿಶೇಷವಾಗಿ ಮೈಸೂರಿನಲ್ಲಿ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ಇತಿಹಾಸ ಪ್ರಸಿದ್ಧ ಮೈಸೂರಿನ ಅರಮನೆ ದೀಪಾಲಂಕಾರಗೊಳಿಸಲಾಗುತ್ತದೆ. ಮೈಸೂರು ಮಹಾನಗರವು ಕನ್ನಡ ನಾಡಿನ ಸಂಸ್ಕೃತಿಯ ರಾಜಧಾನಿ. ಮೈಸೂರು ದಸರಾ ಎಂದರೆ ಅದು ಸಂಬ್ರಮದ ನಮ್ಮ ನಾಡ ಹಬ್ಬ. ಆಶ್ವಯುಜ ಮಾಸದ ಪಾಡ್ಯದಿಂದ ಪ್ರಾರಂಭವಾಗಿ ದಶಮಿಯ ಪೂರ್ತಿ ಹತ್ತು ದಿನಗಳ ತನಕ ಆಚರಣೆಯಲ್ಲಿ ಇರುತ್ತದೆ. ಹತ್ತು ದಿನಗಳಲ್ಲಿ ಮೊದಲ ಒಂಬತ್ತು ದಿನಗಳು ನವರಾತ್ರಿ ಎನಿಸಿ ಕಡೆಯ ಹತ್ತನೇ ದಿನ ವಿಜಯದಶಮಿ ಎಂದು ಆಚರಣೆ ಮಾಡಲಾಗುತ್ತದೆ. ನವರಾತ್ರಿಯಲ್ಲಿ ಇನ್ನೊಂದು ವಿಶೇಷ ಮನೆಗಳಲ್ಲಿ ಗೊಂಬೆ ಕೂರಿಸುವುದು. ಹಂತ ಹಂತವಾಗಿ ಮೆಟ್ಟಿಲುಗಳನ್ನು ನಿರ್ಮಿಸಿ, ಪಟ್ಟದ ಗೊಂಬೆ ಮತ್ತು ಇತರ ಗೊಂಬೆಗಳನ್ನು ಕೂರಿಸುವರು . ಇದಕ್ಕೆ ಅಂತಾನೇ ಮದುವೆಗಳಲ್ಲಿ ನೂತನ ದಂಪತಿಗಳಿಗೆ ತೇಗ ಅಥವಾ ಚಂದನದ ಮರದಿಂದ ಮಾಡಿದ ಗೊಂಬೆಗಳನ್ನು ನೀಡುವರು. ಪ್ರತಿದಿನ ಸಂಜೆಯ ವೇಳೆಯಲ್ಲಿ ಪುಟ್ಟ ಮಕ್ಕಳನ್ನು ಕರೆದು ಗೊಂಬೆ ಬಾಗಿನ ಎಂದು ತಿಂಡಿಗಳನ್ನು ಕೊಡುವರು. ಮೈಸೂರನ್ನು ಆಳಿದ ರಾಜ ಮನೆತನವಾದ ಒಡೆಯರ ಕುಲದೇವತೆಯಾದ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಗುತ್ತದೆ. ವಿಜಯದಶಮಿಯಂದು ಯುದ್ಧಕ್ಕಾಗಿ ಬಳಸುವ ಎಲ್ಲಾ ಆಯುಧ, ಪರಿಕರಗಳನ್ನು ಪೂಜಿಸಿ ಮೆರವಣಿಗೆಯ ಮೂಲಕ ಅರಮನೆಯಿಂದ ಬನ್ನಿ ಮಂಟಪಕ್ಕೆ ಒಯ್ಯುವುದು ಮೈಸೂರಿನ ವಿಶೇಷತೆ. ದಸರ ಸಮಯದಲ್ಲಿ ನಡೆಯುವ ಇನ್ನೊಂದು ಕಾಯಕ್ರಮವೆಂದರೆ ಮಹಾರಾಜರ ಖಾಸಗಿ ದರ್ಬಾರ್. ಅಂಬಾ ವಿಲ ...
ಅಭಿಪ್ರಾಯ (2) ಮುಂದೆ ಓದಿ...

ಗಾಂಧಿ ಜಯಂತಿ
ನನಗೆ ತೋಚಿದ್ದು ನಾಗರಾಜ್ megarajnaga ಸಮಯ9/30/2008 12:27 PM
ಅಕ್ಟೋಬರ್ 2 ನಮ್ಮ ದೇಶಾದ್ಯಂತ ಆಚರಿಸುವ ರಾಷ್ಟ್ರಿಯ ಹಬ್ಬ ಕಾರಣ ಅಂದು ಗಾಂಧಿ ಜಯಂತಿ. ಎಲ್ಲಾ ಶಾಲೆಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಗಾಂಧಿಜಿಯವರ ಭಾವ ಚಿತ್ರವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ. ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಂದು ಗಾಂಧಿಜಿಯವರ ಬಗ್ಗೆ ಮತ್ತು ಅವರ ಸಾದನೆಗಳ ಬಗ್ಗೆ ಜೊತೆಗೆ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಹೇಳುತ್ತಾರೆ. ಅದರ ಜೊತೆಗೆ ಅಂದು ವಿಶೇಷವಾಗಿ ಶ್ರಮದಾನವನ್ನು ಸಹ ಹಮ್ಮಿಕೊಂಡು ಆಯಾ ಗ್ರಾಮದಲ್ಲಿ ಶ್ರಮದಾನ ಮಾಡುತ್ತಾರೆ. ಶಾಲಾ ಮಕ್ಕಳು ಸಹ ಬೆಳಿಗ್ಗೆ ಬೇಗನೆ ಎದ್ದು ಜಳಕ ಮಾಡಿ, ರಾಷ್ಟ್ರ ಪಿತನಿಗೆ ನಮಿಸಿ, ಅವರ ತತ್ವಗಳನ್ನು ಜೀವನದಲ್ಲಿ ತೊಡಗಿಸಿಕೊಳ್ಳಲು ಸಿದ್ದರಾಗಿ ಶಾಲೆಗೆ ಬರುತ್ತಾರೆ. ಇಂತಾ ಮಹಾನ ವ್ಯಕ್ತಿಯ ಜನ್ಮ ದಿನವಾದ ಅಕ್ಟೋಬರ್ 2 ರಂದು ರಾಜ್ಯಾದ್ಯಂತ ಮದ್ಯಪಾನವನ್ನು ಸಹ ಸರ್ಕಾರ ನಿಷೇದಿಸಿರುವುದು ಹೆಮ್ಮೆಯ ಸಂಗತಿಯು ಹೌದು. ನಿಮಗೆ ತಿಳಿದ ಹಾಗೆ ಗಾಂಧೀಜಿ ಯವರ ಹುಟ್ಟಿದ ದಿನವನ್ನು ಗಾಂಧಿ ಜಯಂತಿ ಎಂದು ಆಚರಿಸಲಾಗುವುದು ಇವರ ಪೂರ್ಣ ಹೆಸರು ಮೋಹನದಾಸ್ ಕರಮ‍ಚಂದ್ ಗಾಂಧಿ ಅಕ್ಟೋಬರ್ 2, 1869 ರಲ್ಲಿ ಭಾರತದ ಗುಜರಾತ್ ರಾಜ್ಯದ ಪೋರಬಂದರ್ ನಲ್ಲಿ ಜನಿಸಿದರು. ಇವರ ತಂದೆ ಕರಮಚಂದ್ ಗಾಂಧಿ ,ತಾಯಿ ಪುತಲೀಬಾಯಿ. 13 ನೆಯ ವಯಸ್ಸಿನಲ್ಲಿ ಗಾಂಧೀಜಿ ಕಸ್ತೂರಿಬಾ ಅವರನ್ನು ವಿವಾಹವಾದರು. ನಂತರ ಇವರಿಗೆ ನಾಲ್ಕು ಮಕ್ಕಳು ಜನಿಸಿದರು : ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ , ರಾಮದಾಸ್ ಗಾಂಧಿ ಮತ್ತು ದೇವದಾಸ್ ಗ ...
ಅಭಿಪ್ರಾಯ (1) ಮುಂದೆ ಓದಿ...

ನಿಮ್ಮ ಜೀವನದಲ್ಲಿ ನೆಮ್ಮದಿ ಹೆಚ್ಚಿಸುವ ವಿಧಾನಗಳು
ನನಗೆ ತೋಚಿದ್ದು ನಾಗರಾಜ್ megarajnaga ಸಮಯ9/19/2008 2:57 PM
ಜೀವನ ಸರಳವಾಗಿದ್ದಷ್ಟೂ ನೆಮ್ಮದಿ ಹೆಚ್ಚುತ್ತದೆ. ಹಾಗೆ ಜೀವನವನ್ನು ಸರಳಗೊಳ್ಳಿಸುವ ವಿಧಾನ ಇಲ್ಲಿದೆ!

1. ಇಷ್ಟವಿಲ್ಲದ ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ಹೆಚ್ಚು ತೊಡಗಿಸಿಕೊಳ್ಳಬೇಡಿ.
2. ಎಲ್ಲಾ ಕೆಲಸವನ್ನು ಪರ್ಪೆಕ್ಟ್ ಅಥವಾ ನಿಖರವಾಗಿ ಮಾಡಲು ಹೋಗಬೇಡಿ.
3. ಮನೆಯನ್ನು ಸ್ವಚ್ಚಗೊಳಿಸುವ ಕೆಲಸವನ್ನು ಸರಳವಾಗಿಸಿಕೊಳ್ಳಿ. ಹಾಗು ಅದನ್ನು ಪ್ರತಿ ಬಾರಿಯೂ ಅನುಸರಿಸಿ.
4. ಫೋನ್, ವಾಟರ್, ಕ್ರೆಡಿಟ್ ಕಾರ್ಡ್ ಇತ್ಯಾದಿಗಳಿಗೆ ಆನ್ ಲೈನ್ ನಿಂದ ಬಿಲ್ಲು ಪಾವತಿಸುವುದನ್ನು ರೂಡಿಸಿಕೊಳ್ಳಿ. ಇದು ನಿಮ್ಮ ಸಮಯ ಉಳಿಸುತ್ತದೆ. ಅನಗತ್ಯವಾಗಿ ತಡವಾಗಿದ್ದಕ್ಕೆ ದಂಡ ಕಟ್ಟುವುದು ತಪ್ಪುತ್ತದೆ.
5. ನಿಮ್ಮ ಹಾಡು, ಚಲನಚಿತ್ರ, ಪುಸ್ತಕ ಇತ್ಯಾದಿ ಸಂಗ್ರಹಗಳಲ್ಲಿ ನಿಮಗೆ ತುಂಬ ಇಷ್ಟವಾದುದನ್ನು ಮಾತ್ರ ಇಟ್ಟುಕೊಳ್ಳಿ ಉಳಿದದ್ದನ್ನು ಬಿಟ್ಟು ಬಿಡಿ.
6. ನಿಮ್ಮ ಪರ್ಸ್ ಅನ್ನು ಕ್ಲೀನ್ ಮಾಡಿ. ಅದರಲ್ಲಿ ಅನಗತ್ಯವಾದುದನ್ನು ತೆಗೆದು ಬಿಡಿ.
7. ನಿಮಗೆ ಬೇಡವಾದ ಪೋಸ್ಟ್ ಗಳನ್ನು ನಾಶಪಡಿಸಿ. ಬೇಡವಾದ ಕಾಲ್, ಎಸ್. ಎಂ.ಎಸ್, ಮೇಲ್ ಗಳ ಮೇಲೆ ಸಮಯ ವ್ಯರ್ಥ ಮಾಡದಿರಿ.
8. ನಿಮ್ಮ ವಾರ್ಡ್ ರೋಬ್ ಅನ್ನು ನೀಟಾಗಿ ಇಟ್ಟುಕೊಳ್ಳಿ.
9. ನೀವು ಉಪಯೋಗಿಸದ ಮೇಲ್ ಅಥವಾ ಸೋಶಿಯಲ್ ನೆಟ್ ವರ್ಕ್ ಅಕೌಂಟ್ ಅನ್ನು ಅಳಿಸಿಹಾಕಿ.
10. ಜಾಹೀರಾತುಗಳು ನಿಮ್ಮ ಫೋನ್ ಗೆ ಬರುತ ...

ಅಭಿಪ್ರಾಯ (4) ಮುಂದೆ ಓದಿ...

ಬಿಹಾರದ ಕಣ್ಣೀರ ಕಥೆ
ನನಗೆ ತೋಚಿದ್ದು ನಾಗರಾಜ್ megarajnaga ಸಮಯ9/19/2008 2:56 PM
ನೇಪಾಳ ಗಡಿಭಾಗದ ಕುಶಾದಲ್ಲಿ ಕೋಸಿ ನದಿಗೆ ಕಟ್ಟಿದ ಒಡ್ಡು ಒಡೆದ ಪರಿಣಾಮ ಕೆಲವೇ ಗಂಟೆಗಳಲ್ಲಿ ಉತ್ತರ ಬಿಹಾರದ ಐದು ಜಿಲ್ಲೆಗಳಾದ ಸುಪೌಲ್, ಅರಾರಿಯ, ಸಹರ್ಸಾ, ಮಾಧೇಪುರ ಮತ್ತು ಪುರ್ನಿಯಾ ಅಸ್ತಿತ್ವವೇ ಇಲ್ಲದಂತೆ ಜಲಾವೃತಗೊಂಡವು. ಈ ಪ್ರಾಂತಗಳು ಪ್ರತಿ ವರ್ಷ ಎದುರಿಸುತ್ತಿದ್ದ ಪ್ರವಾಹಕ್ಕಿಂತ ದುಪ್ಪಟ್ಟು ನಷ್ಟವನ್ನು ಈ ಬಾರಿಯ ವಿಪತ್ತು ತಂದೊಡ್ಡಿದೆ. ಬಿಹಾರದ ಕಣ್ಣೀರ ನದಿಯೆಂದೆ ಜನಜನಿತವಾಗಿರುವ ಕೋಸಿ ನದಿಯ ಪ್ರವಾಹದಿಂದಾಗಿ ಬಿಹಾರದ ಜನತೆ ಅಕ್ಷರಶಃ ತಮ್ಮ ಜೀವನದೊಂದಿಗೆ ಹೋರಾಟಕ್ಕಿಳಿದಿದ್ದಾರೆ. ಲಕ್ಷಾಂತರ ಮಂದಿ ಪ್ರವಾಹದಿಂದಾಗಿ ತಮ್ಮ ಮನೆಮಠ, ಕುಟುಂಬಿಕರು, ಸಂಬಂಧಿಗಳು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಭೀಕರ ಪ್ರವಾಹದ ಪರಿಣಾಮ ಬಿಹಾರದ ಜನತೆ ತುಂಬಲಾರದ ನಷ್ಟಕ್ಕೀಡಾಗಿದ್ದಾರೆ; ಎಲ್ಲವನ್ನೂ ನೆರೆ ಕೊಚ್ಚಿಕೊಂಡು ಹೋಗಿದೆ. ಬಿಹಾರದಲ್ಲಿ ಹರಿಯುವ ಹೆಚ್ಚಿನ ನದಿಗಳ ಮೂಲವಿರುವುದು ನೇಪಾಳದಲ್ಲಿ. ಮಳೆಗಾಲದ ಸಂದರ್ಭದಲ್ಲಿ ಪ್ರವಾಹವು ಸಾವಿರಾರು ಜನರನ್ನು ಬೀದಿಪಾಲು ಮಾಡುವುದರ ಜೊತೆಗೆ ಪೈರು, ಎಕರೆಗಟ್ಟಲೆ ಭೂಮಿ, ಸಾವಿರಾರು ಮನೆಗಳು, ರಸ್ತೆ, ಸೇತುವೆ, ಅಣೆಕಟ್ಟು ಮತ್ತು ನೂರಾರು ಶಾಲೆಗಳನ್ನು ಧ್ವಂಸ ಮಾಡುತ್ತಿದೆ. ನೀರಿನ ಮಟ್ಟ ತಗ್ಗಿದರೂ ಮಕ್ಕಳಿಗೆ ತಿಂಗಳಿಡೀ ಶಾಲೆಗೆ ಹೋಗಲು ಸಾಧ್ಯವಾಗುವುದಿಲ್ಲ. ದೇಶದಲ್ಲಿಯೇ ಬಿಹಾರ ರಾಜ್ಯ ಅತ್ಯಂತ ನಿಧಾನವಾಗಿ ಅಭಿವೃದ್ಧಿ ಹೊಂದಲು ಪ್ರಮುಖ ಕಾರಣವೇ ಪ್ರವಾಹ ಬಾಧೆ. ಗ್ರಾಮೀಣ ಆರ್ಥಿಕತೆ ಹೊಂದಿರುವ ಬಿಹಾರದಲ್ಲಿ ಹೇಳಿಕೊಳ್ಳುವ ...
ಅಭಿಪ್ರಾಯ (1) ಮುಂದೆ ಓದಿ...

ಕಾವ್ಯ ಸರಪಳಿ
ರಘು ಚಿಂತನೆ raghava pavanje ಸಮಯ9/16/2008 8:49 PM
ಇದೊಂದು ಸಣ್ಣ ಪ್ರಯತ್ನ. ಇಲ್ಲಿ ಎಲ್ಲರೂ ಕವಿತೆಯ ಮುಂದಿನ ಸಾಲನ್ನು ಬರೆಯುತ್ತಾ ಹೋಗ ಬಹುದು. ತಮ್ಮ ತಮ್ಮ ಸಾಲನ್ನು ಸೇರಿಸುವಾಗ ಆ ಹಿಂದಿನ ಸಾಲುಗಳನ್ನು ಬರೆದು ಮತ್ತೆ ಮುಂದುವರಿಸಿಕೊಂಡು ಹೋಗಬೇಕು. ಪ್ರಾರಭಿಸೋಣ ಗೆಳೆಯ ಗೆಳತಿಯರೇ......
ಅಭಿಪ್ರಾಯ (3) ಮುಂದೆ ಓದಿ...

 Print   
ನನ್ನ ಬ್ಲಾಗ್
ನೀವು ಬ್ಲಾಗ್ ಬರೆಯಬೆಕಾದರೆ ಲಾಗಿನ್ (login) ಮಾಡಬೇಕು
 Print   
ಇಮೇಲ್ ಬ್ಲಾಗ್
 Print   
ಪ್ರಶ್ನೆ
 Print   
ನಮ್ಮ ವಿಡಿಯೋ
 Print   
ಸದಸ್ಯರು
ಸದಸ್ಯತ್ವಸದಸ್ಯತ್ವ:
ಇತ್ತೀಚಿನ ಹೊಸ ಸದಸ್ಯಇತ್ತೀಚಿನ ಸದಸ್ಯರು:kusumakara
ಇಂದಿನ ಸದಸ್ಯರುಇಂದಿನ ಹೊಸ ಸದಸ್ಯರು:1
ನೆನ್ನೆಯ ಸದಸ್ಯರುನೆನ್ನೆಯ ಹೊಸ ಸದಸ್ಯರು:0
ಸದಸ್ಯರ ಅಕೌಂಟ್ಒಟ್ಟು:180

 ಆನ್‌ಲೈನ್ ಇರುವ ಸದಸ್ಯರು ಆನ್‌ಲೈನ್ ಇರುವ ಸದಸ್ಯರು:
ಅತಿಥಿಗಳುಅತಿಥಿಗಳು:4
ಸದಸ್ಯರುಸದಸ್ಯರು:0
ಒಟ್ಟುಒಟ್ಟು:4

ಈಗ ಆನ್‌ಲೈನ್ಈಗ ಆನ್‌ಲೈನ್ ಇರುವವರು:
 Print   

ಕನ್ನಡಕ್ಕಾಗಿ ನಾವು ಮಾಡುತ್ತಿರುವ ಅಳಿಲು ಸೇವೆಗೆ ನೀವೂ ಕೈಜೋಡಿಸಿ.

© SUMNE' S ENTERPRISES   |  Privacy Statement  |  Terms Of Use