| ಜನರು ತಾವು ಎಸಗುವ ತಪ್ಪುಗಳಿಗೆ ಹಚ್ಚುವ ಹಣೆಪಟ್ಟಿ 'ಅನುಭವ'.
| | |
|
| | ತರ್ಲೆ ಮಾತು | | ಅನಿಸಿಕೆ
| Srikanth sriki ಸಮಯ8/13/2008 11:07 AM | |
| 1) ಒಲಿಂಪಿಕ್ ಕೂಟದ ಆರಂಭ ಸಮಾರಂಭದ ದಿನದಂದು, ಏಳು ವರುಷದ ಹುಡುಗಿಯೆಬ್ಬಳು ಎಲ್ಲರೆದುರಿಗೆ ಹಾಡು ಹಾಡಬೇಕಾಗಿತ್ತು, ಕಾಣಲು ಸುಂದರವಾಗಿಲ್ಲದ ಕಾರಣ, ಅವಳ ಬದಲು ಮತ್ತೊಬ್ಬ ಸುಂದರವಾದ ಅದೇ ವಯಸ್ಸಿನ ಹುಡುಗಿಯೊಬ್ಬಳು ತುಟಿ ಹೊಂದಾಣಿಕೆ ಮಾಡಿದಳಂತೆ. (ಛೇ ಎಂಥಹ ತಪ್ಪು ಸಂದೇಶ ಪ್ರಪಂಚಕ್ಕೆ. ಅಂತರಂಗ ಸೌಂದರ್ಯಕ್ಕೆ ಬೆಲೆಯಿಲ್ಲ ಎಂದು ಸಾರಿದಂತಿದೆ.)
|  | | ಅಭಿಪ್ರಾಯ (3) |
ಮುಂದೆ ಓದಿ... |
|
|
| | ಸಾಗರಕ್ಕೆ ಒಮ್ಮೆ ಹೋಗಿ ಬನ್ನಿ | | ನನಗೆ ತೋಚಿದ್ದು
| ನಾಗರಾಜ್ megarajnaga ಸಮಯ7/30/2008 5:17 PM | |
| ಎಲ್ಲರಿಗೂ ನಮಸ್ಕಾರ ಮೊನ್ನೆ ಅಂದರೆ 24ನೇ ತಾರೀಖು ಸಾಗರಕ್ಕೆ ಬೇಟಿ ನೀಡಿದ್ದೆ. ಬೆಂಗಳೂರಿನಿಂದ ರೈಲಿನಲ್ಲಿ ಶಿವಮೊಗ್ಗ ಎಕ್ಸ್ ಪ್ರೆಸ್ ನಲ್ಲಿ ಹೊರಟೆ ರೈಲು ಬೆಳಿಗ್ಗೆ 5:30ಗೆ ಹೋಗಬೇಕಾದದ್ದು 2 ಗಂಟೆ ತಡವಾಗಿ ಹೋಯಿತು, ಶಿವಮೊಗ್ಗ ಹತ್ತಿರ ಹೋಗುತ್ತಿದ್ದಾಗೆ ಜಿಟೆ ಜಿಟೆ ಮಳೆ ಬೀಳುತ್ತಿತ್ತು ಆ ಮಳೆಯಲ್ಲಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರೆ ಅದರ ಮಜಾನೆ ಬೇರೆ. ಶಿವಮೊಗ್ಗ 7:30 ಗಂಟೆಗೆ ತಲುಪಿದೆ ಅಲ್ಲಿಂದ ಸಾಗರದ ಕಡೆ ಪ್ರಯಾಣ ಬೆಳೆಸಿದೆ. ಸಾಗರ ಶಿವಮೊಗ್ಗ ಜಿಲ್ಲೆಯ ಒಂದು ಪಟ್ಟಣ ಮತ್ತು ಅದೇ ಹೆಸರಿನ ತಾಲೂಕಿನ ಆಡಳಿತ ಕೇಂದ್ರ. ಬೆಂಗಳೂರು ನಗರದಿಂದ 360 ಕಿ.ಮೀ ದೂರದಲ್ಲಿರುವ ಸಾಗರ ಪಟ್ಟಣವು ಮಲೆನಾಡು ಪ್ರದೇಶದ ವ್ಯಾಪ್ತಿಗೊಳಪಟ್ಟಿದೆ. ಮಳೆ ಹೆಚ್ಚಾಗಿ ಬೀಳುವ ಸಾಗರ ತಾಲೂಕು ಸಹಜವಾಗಿ ದಟ್ಟವಾದ ಕಾಡು ಮತ್ತು ವಿವಿಧ ರೀತಿಯ ಪ್ರಾಣಿಸಂಕುಲಗಳಿಗೆ ತವರಾಗಿದೆ. ಪ್ರಕೃತಿಪ್ರಿಯರಿಗೆ ಮತ್ತು ಚಾರಣಪ್ರಿಯರಿಗೆ ಸಾಗರ ಸ್ವರ್ಗ. ಶ್ರೀಗಂಧ ಕೆತ್ತನೆಗೆ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಸಾಗರವನ್ನು ಶ್ರೀಗಂಧದ ಗುಡಿ ಎಂದೂ ಕರೆಯಲಾಗುತ್ತದೆ. ಸಾಗರದಲ್ಲಿ ಬೆಳಗಿನ ತಿಂಡಿ ಮುಗಿಸಿ ಸಾಗರದಿಂದ ಹೆಗ್ಗೋಡುಗೆ ಹೊರಟೆ ಸಾಗರ ತಾಲೂಕಿನ ಜನ ಕಲಾರಸಿಕರು ಮತ್ತು ಸಾಹಿತ್ಯಾರಾಧಕರು. ಬಹಳ ಜನ ಕಲಾವಿದರನ್ನ, ಸಾಹಿತಿಗಳನ್ನ ರಾಜ್ಯಕ್ಕೆ ಸಾಗರ ತಾಲೂಕು ನೀಡಿದೆ. ಸಾಗರದ ೭ ಕಿ.ಮೀ ದೂರದಲ್ಲಿ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಕೆ.ವಿ.ಸುಬ್ಬಣ್ಣ ಕಟ್ಟಿ ಬೆಳೆಸಿದ ನೀನಾಸಂ (ನೀಲಕಂಠೇಶ್ ...
|  | | ಅಭಿಪ್ರಾಯ (3) |
ಮುಂದೆ ಓದಿ... |
|
| | ಕನ್ನಡ ಜನಪದ ಕಲೆಗಳು | | ನನಗೆ ತೋಚಿದ್ದು
| ನಾಗರಾಜ್ megarajnaga ಸಮಯ7/23/2008 5:52 PM | |
| ಜನಪದ ಸಾಹಿತ್ಯದಲ್ಲಿ ಗೀತೆಯೊಂದು ಪ್ರಮುಖ ಪ್ರಕಾರ. ಅದು ಮುಟ್ಟದ ವಸ್ತುವಿಲ್ಲ, ಸಂಸಾರದ ಮುಖಗಳೆಲ್ಲವೂ ಇಲ್ಲಿ ಚಿತ್ರಣಗೊಂಡಿವೆ. ತಾಯಿ ಮಗಳು, ಅತ್ತೆ ಸೊಸೆ, ಅಣ್ಣ ತಂಗಿ, ಅತ್ತಿಗೆ ನಾದಿನಿ ಮೈದುನರು, ಸವತಿ ಓರಗಿತ್ತಿಯರು, ಪತಿ ಪತ್ನಿಯರು, ತಂದೆ ಮಗ, ತವರು ಸೂಳೆಗಾರಿಕೆ, ಹೆಣ್ಣು ಜನ್ಮ, ಮಕ್ಕಳು ಮೊಮ್ಮಕ್ಕಳು, ಬಸಿರು ಬಯಕೆ, ಗೆಣೆಯ ಗೆಣೆತಿಯರು, ಸಾವು ನೋವು, ಬಾಣಂತಿತನ, ನೆಂಟರು, ಬಂಜೆತನ, ಪ್ರೇಮ ದ್ವೇಷ, ಮುನಿಸು ಜಗಳ ಹೀಗೆ ನೂರಾರು ಸಂಗತಿಗಳು ಇಡೀ ಹಳ್ಳಿಯ ಬದುಕಿನ ಉಸಿರು ಹಾಡಾಗಿ ಹೊಮ್ಮುತ್ತವೆ. ಹಾಡಿನ ಜೋಡಿಯಿಲ್ಲದೇ ಯಾವ ಕೆಲಸವೂ ಸಾಗುವುದಿಲ್ಲ. ಕುಟ್ಟುವುದು, ಬೀಸುವುದು, ಮೊಸರು ಕಡೆಯುವುದು, ಅಡಿಕೆ ಸುಲಿಯುವುದು, ಹಚ್ಚೆ ಹೊಯ್ಯುವುದು, ಮಗು ಮಲಗಿಸುವುದು, ಯಾವ ಕೆಲಸವೇ ಆಗಲಿ ಹಾಡು ಕಲಿತರೆ ಸರಾಗವಾಗಿ ಆಗುತ್ತದೆ. ಬೇಸಾಯ, ನೇಯ್ಗೆ ಮೊದಲಾದ ವೃತ್ತಿಗಳ, ಕುಣಿತಗಳ ಒಂದು ಅವಿಭಾಜ್ಯ ಅಂಗವಾಗಿ ಹಾಡು ಬರುತ್ತದೆ. ಬಿತ್ತನೆ ಮಾಡುವಾಗ, ಕೂರಿಗೆ ಹೊಡೆಯುವಾಗ, ನಾಟಿ ಹಾಕುವಾಗ, ಕಳೆ ಕೀಳುವಾಗ, ಹೊಲ ಕೊಯ್ಯುವಾಗ, ಕಾಳು ಒಕ್ಕುವಾಗ, ಮಣ್ಣು ಹೊರುವಾಗ, ಗಾಡಿ ಹೊಡೆಯುವಾಗ ಸಾಮೂಹಿಕವಾಗಿಯೊ, ವೈಯುಕ್ತಿಕವಾಗಿಯೊ ಗೀತಾಪ್ರವಾಹ ಹರಿಯಲೇ ಬೇಕು. ಹಬ್ಬ ಹರಿದಿನ ಮದುವೆಯೊಸಗೆ ಯಾವುದೇ ಶುಭಕಾರ್ಯವಾಗಲೀ ಶಾಸ್ತ್ರವೇ ಆಗಲೀ, ದೇವರಕಾರ್ಯವೇ ಆಗಲೀ ಹಾಡಿನಿಂದ ಮೊದಲಾಗಬೇಕು. ಹಾಡಿನಿಂದಲೇ ಅಂತ್ಯ ವಾಗಬೇಕು. ಬಹುತೇಕವಾಗಿ ಜನಪದಗೀತೆಗಳೆಲ್ಲ ಕ್ರಿಯಾತ್ಮಕವಾದುವು; ಯಾವುದಾದರೊಂದು ಕ ...
|  | | ಅಭಿಪ್ರಾಯ (3) |
ಮುಂದೆ ಓದಿ... |
| | ಸಂಕ್ರಾಂತಿ | | ನನಗೆ ತೋಚಿದ್ದು
| ನಾಗರಾಜ್ megarajnaga ಸಮಯ7/23/2008 5:44 PM | |
| ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು. ಸನಾತನ ಹಿಂದೂ ಧರ್ಮದ ಬುನಾದಿಯಾಗಿರುವ ವೇದಗಳ ಅಂಗಗಳೆಂದೇ ಪ್ರಸಿದ್ಧವಾಗಿರುವ ಆರು ವೇದಾಂಗಗಳಲ್ಲಿ ಒಂದಾದ ಜ್ಯೋತಿಷವನ್ನು ವೇದಗಳ ಕಣ್ಣೆಂದು ಗುರುತಿಸುತ್ತಾರೆ. ವೇದದಳ ಕಾಲದಿಂದಲೂ ಶುಭಕಾರ್ಯಗಳಿಗೆ ಮುಹೂರ್ತಾದಿ ಕಾಲವನ್ನು ನಿರ್ಣಯಿಸಿ, ಗ್ರಹಗಳ ಸ್ಥಿತಿ-ಗತಿ, ರಾಶಿ-ನಕ್ಷತ್ರ, ಗ್ರಹಣ, ಅಸ್ತೋದಯಗಳನ್ನು ನಿರ್ಣಯಿಸಿ, ಶುಭಾಶುಭ ಫಲಗಳನ್ನು ತೋರುತ್ತಾ, ಹಬ್ಬ-ಹರಿದಿನಗಳನ್ನು ಋತುಗಳಿಗನುಸಾರವಾಗಿ ಲೆಕ್ಕಾಚಾರ ಹಾಕಿ ಗುರುತಿಸುತ್ತಿದ್ದ ಶಾಸ್ತ್ರವೇ ಜ್ಯೋತಿಷ. ಈ ಶಾಸ್ತ್ರದಂತೆ, ಸೂರ್ಯನು ನಿರಯಣ ಮಕರರಾಶಿಯನ್ನು ಪ್ರವೇಶಿಸಿದಾಗ, "ಮಕರ ಸಂಕ್ರಾಂತಿ"ಯಾಗುತ್ತದೆ. ಈ ಕಾಲವು ಪ್ರತಿವರ್ಷ ಗ್ರೆಗೋರಿಯನ್ ಪಂಚಾಂಗದ ಜನವರಿ 14ರ ಸುಮಾರಿಗೆ ಬೀಳುತ್ತದೆ. ಹಿಂದೆ, ಈ ಕಾಲವೇ ಉತ್ತರಾಯಣ ಅಥವಾ ಸೂರ್ಯನ ಉತ್ತರದಿಕ್ಕಿನ ಪಯಣದ ಆರಂಭವನ್ನು ಸೂಚಿಸುವ ಕಾಲವೂ ಆಗಿತ್ತಾದ್ದರಿಂದ ಭೂಮಿಯ ಉತ್ತರಾರ್ಧಗೋಳದಲ್ಲಿ ಚಳಿ-ಬೆಚ್ಚನೆಯ ವಾತಾವ ...
|  | | ಅಭಿಪ್ರಾಯ (1) |
ಮುಂದೆ ಓದಿ... |
| | ಕರ್ನಾಟಕದ ಜಾನಪದ | | ನನಗೆ ತೋಚಿದ್ದು
| ನಾಗರಾಜ್ megarajnaga ಸಮಯ7/23/2008 5:38 PM | |
| ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಾಲಿ ಎಳ್ಳು ಜೀರಿಗೆ ಬೆಳಿಯೋ ಭೂಮಿತಾಯಿ ಎದ್ದೊಂದು ಗಳಿಗೆ ನೆನೆದೇನು ಮಣ್ಣಲ್ಲಿ ಹುಟ್ಟೋಳೆ ಮಣ್ಣಾಲಿ ಬೆಳೆವೋಳೆ ಎಣ್ಣೇಲಿ ಕಣ್ಣಾಬಿಡುವೋಳೆ, ಜಗಜ್ಯೋತಿ ಸತ್ಯಾದಿಂದುರಿಯೆ ನಮಗಾಗಿ ತೊಟ್ಟಿಲು ಹೋತ್ಕೊಂಡು ತವರ್ಬಣ್ಣ ಉಟ್ಕೊಂಡು ಅಪ್ಪ ಕೊಟ್ಟೆಮ್ಮೆ ಹೋಡ್ಕೊಂಡು | ತೌರೂರ ತಿಟ್ಟಹತ್ತಿ ತಿರುಗಿ ನೋಡ್ಯಾಳೊ ಹೂಮಾಲೆಯಂಥ ಮೇಲಿನ ಸಾಲುಗಳನ್ನು ಯಾರು ಯಾವಾಗ ಬರೆದರೋ ಗೊತ್ತಿಲ್ಲ, ಇವು ನೂರಾರು ವರ್ಷಗಳಿಂದ ಸಾವಿರಾರು ಜನಗಳ ಬಾಯಿಂದ ಹರಿದು ಬಂದ ನುಡಿಗಳು, ನಮ್ಮ ಹಳ್ಳಿಗಳಲ್ಲಿ ಕಲೋಪಾಸಕತ್ವವನ್ನು, ಸೃಜನಶೀಲತೆಯನ್ನು, ಮತ್ತು ಮಾಧುರ್ಯವನ್ನು ಹಳ್ಳಿಗರಿಗೆ ತಿಳಿಯದಂತೆ ಅವರ ಜೀವನ ವಿಧಾನವನ್ನಾಗಿ ಪರಿವರ್ತಿಸಿದ ಸಂಸ್ಕೃತಿಯೊಂದರ ಹೆಜ್ಜೆಗುರುತುಗಳು. ಪ್ರಾಯಶಃ ಸಹಸ್ರಾರು ವರ್ಷದ ಹಿಂದೆ ಜಗತ್ತಿನಲ್ಲೆಲ್ಲ ಇದ್ದುದ್ದು ಜಾನಪದವೊಂದೇ, ಮಾನವನು ತಾನು ಮಾಡುವ ಕೆಲಸಗಳಲ್ಲೆಲ್ಲಾ ತನ್ಮಯತೆಯನ್ನು ತುಂಬಲು ಮಾಡಿದ ಪ್ರಯತ್ನಗಳ ಸರಮಾಲೆಯೇ ಜಾನಪದವಾಗಿರಬಹುದು. ತನ್ನ ಸುತ್ತಲಿನ ಪರಿಸ್ಥಿತಿಗೆ ತಕ್ಕಂತೆ ತಂತ್ರಜ್ಞಾನಗಳನ್ನೂ, ಅರೋಗ್ಯ ರಕ್ಷಣೆಗೆ ವೈದ್ಯಕೀಯವನ್ನು, ಪ್ರಕೃತಿಯ ಬಿರುಸಿಗೆ ಉತ್ತರವಾಗಿ ಭಕ್ತಿಯನ್ನೂ ಬೆಳೆಸಿಕೊಂಡಿರಬಹುದು. ಜನಪದ ಮತ್ತು ಜಾನಪದ ಎಂಬ ಶಬ್ದಗಳು ಒಂದು ಸಾಮಾಜಿಕ ವ್ಯವಸ್ಥೆಯನ್ನು ಸೂಚಿಸುತ್ತವೆ. ಪ್ರತಿಯೊಂದು ಸಾಮಾಜವೂ ತನ್ನ ಪುರಾತನರ ಸಾರವನ್ನು ಹೀರಿ ತನ್ನ ...
|  | | ಅಭಿಪ್ರಾಯ (2) |
ಮುಂದೆ ಓದಿ... |
| | ಜನಪದ ಕ್ರೀಡೆಗಳು | | ನನಗೆ ತೋಚಿದ್ದು
| ನಾಗರಾಜ್ megarajnaga ಸಮಯ7/22/2008 6:19 PM | |
| ಜನಪದ ಕ್ರೀಡೆಗಳು ಗ್ರಾಮೀಣ ಜನರಿಂದ ಮನೋರಂಜನೆಗಾಗಿ, ದೈಹಿಕ ವ್ಯಾಯಾಮಕ್ಕಾಗಿ ರಚಿಸಲ್ಪಟ್ಟ ಆಟಗಳು. ಇವುಗಳಲ್ಲಿ ಕಂಡು ಬರುವ ಸಾಮಾನ್ಯ ಅಂಶವೆಂದರೆ ಇವು ಅತೀ ಕಡಿಮೆ ಹಾಗೂ ಸುಲಭದಲ್ಲಿ ದೊರಕುವ ಸಾಮಗ್ರಿಗಳನ್ನು ಬಳಸಿರುವುದು.
ಲಗೋರಿ ಲಗೋರಿ !!! ಅಂತ ಕಿರುಚಿದಾಗ ಮೈ ಎಲ್ಲ ಜುಮ್ ಅನ್ನುವುದು. ನಮ್ಮ ನಾಡಿನಲ್ಲಿ ಹಲವಾರು ವರ್ಷಗಳಿಂದ ಮಕ್ಕಳಿಂದ ಹಿಡಿದು ಹಿರಿಯರ ತನಕ ಸಾಯಂಕಾಲ ಎಲ್ಲರೂ ಜೊತೆಗೂಡಿ ಆಡುತ್ತಿದ್ದ ಆಟ ಲಗೋರಿ. ಈಗ ಲಗೋರಿ ಆಡುವವರು ಅತಿ ಕಡಿಮೆ, ಗ್ರಾಮ್ಯ ಪ್ರದೇಶಗಳಲ್ಲಿ ಮಾತ್ರ ಸಿಗುವವರು. ಈ ಆಟವನ್ನು ಇಬ್ಬರಿಗಿಂತ ಹೆಚ್ಚಾಗಿ ಎಷ್ಟು ಜನರು ಕೂಡ ಆಡಬಹುದು. ಅವರನ್ನು ಎರಡು ತಂಡಗಳಲ್ಲಿ ವಿಭಜಿಸಿವವರು. ಮೊದಲನೆಯ ತಂಡದವರು ೭ ರಿಂದ ೯ ಕಲ್ಲುಗಳನ್ನು ಒಂದರ ಮೇಲೊಂದು ಜೋಡಿಸುವರು. ಹಾಗೆ ಜೋಡಿಸಿದ ಕಲ್ಲುಗಳಿಗೆ ಸ್ವಲ್ಪದೂರದಿಂದ ಮತ್ತೊಂದು ತಂಡದವರು ಒಂದು ಚೆಂಡನ್ನು ಎಸೆಯುವರು. ಆ ಚೆಂಡು ತಾಗಿ ಕಲ್ಲುಗಳು ಚದುರಿದಾಗ, ಮೊದಲನೆಯ ತಂಡದವರು ಅದನ್ನು ಮತ್ತೆ ಯಥಾಸ್ಥಿತಿಗೆ ತರಲು ಪ್ರಯತ್ನಿಸುವರು. ಅದನ್ನು ತಡೆಯುವುದೇ ಎದುರಾಳಿ ತಂಡದ ಗುರಿ. ಮೊದಲನೆಯ ತಂಡದವರು ಆ ಕಲ್ಲುಗಳನ್ನು ಜೋಡಿಸುವ ಪ್ರಯತ್ನದಲ್ಲಿರುವಾಗ ಎದುರಾಳಿ ತಂಡದವರು ಆ ಚೆಂಡನ್ನು ಯಾರೊಬ್ಬರಿಗೆ ತಾಗುವಂತೆ ಎಸೆದರೆ, ತಾಗಿದಾತ ಆಟದಿಂದ ಹೊರಗೆ ಹೋಗುತ್ತಾನೆ. ಹೀಗೆ ಎದುರಾಳಿಯ ಪ್ರತಿಯೊಬ್ಬರನ್ನು ಆಟದಿಂದ ಹೊರ ಕಳುಹಿಸುವುದೇ ಆಟದ ಗುರಿ. ಈ ಸಮಯದಲ್ಲಿ ಎದುರಾಳಿ ತಂಡವೇನಾ ...
|  | | ಅಭಿಪ್ರಾಯ (0) |
ಮುಂದೆ ಓದಿ... |
|
| | |
|
|  | ಸದಸ್ಯತ್ವ: |  | ಇತ್ತೀಚಿನ ಸದಸ್ಯರು:kusumakara |  | ಇಂದಿನ ಹೊಸ ಸದಸ್ಯರು:1 |  | ನೆನ್ನೆಯ ಹೊಸ ಸದಸ್ಯರು:0 |  | ಒಟ್ಟು:180 |
 | ಆನ್‌ಲೈನ್ ಇರುವ ಸದಸ್ಯರು: |  | ಅತಿಥಿಗಳು:5 |  | ಸದಸ್ಯರು:0 |  | ಒಟ್ಟು:5 |
ಈಗ ಆನ್‌ಲೈನ್ ಇರುವವರು:
|
| | |
|